ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕೋಟ್‌ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯ: ಏನೇನೆಲ್ಲಾ ಕ್ರಮ?

|
Google Oneindia Kannada News

Recommended Video

ಬಾಲಕೋಟ್‌ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯ | Oneindia Kannada

ನವದೆಹಲಿ, ಸೆಪ್ಟೆಂಬರ್ 23: ಬಾಲಕೋಟ್‌ನಲ್ಲಿ ಮತ್ತೆ ಉಗ್ರರು ಸಕ್ರಿಯರಾಗಿದ್ದು, ಅವರ ವಿರುದ್ಧ ವಾಯುದಾಳಿಗೂ ಮೀರಿದ ಕ್ರಮಕ್ಕೆ ಮುಂದಾಗಬೇಕು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಭಾರತದ ಗಡಿ ಪ್ರವೇಶಿಸಲು ಉಗ್ರರು ಸಿದ್ಧರಾಗಿದ್ದಾರೆ, ಹೊಂಚುಹಾಕಿ ಕುಳಿತಿದ್ದಾರೆ. ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದಾರೆ, ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಉಗ್ರ ತರಬೇತಿ ನೆಲೆ ಹೊಸ ಹೆಸರಿನೊಂದಿಗೆ ಬಾಲಾಕೋಟ್ ನಲ್ಲಿ ಮತ್ತೆ ಸಕ್ರಿಯಉಗ್ರ ತರಬೇತಿ ನೆಲೆ ಹೊಸ ಹೆಸರಿನೊಂದಿಗೆ ಬಾಲಾಕೋಟ್ ನಲ್ಲಿ ಮತ್ತೆ ಸಕ್ರಿಯ

ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ 46 ಸಿಆರ್ ಪಿಎಫ್ ಯೋಧರು ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ, ಬಾಲಕೋಟ್ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತ್ತು.

Terrorist Camp In Balakot Reactivated

ಇದರಂತೆಯೇ ಮತ್ತೊಂದು ದಾಳಿ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮತ್ತೊಮ್ಮೆ ವಾಯುದಾಳಿ ಏಕೆ? ಇದಕ್ಕೂ ಮೀರಿದ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ.

ಕದನ ವಿರಾಮದಂತಹ ವರ್ತನೆಗೆ ಯಾವ ರೀತಿಯ ನಡೆ ತೆಗೆದುಕೊಳ್ಳಬೇಕೆಂಬುದು ನಮ್ಮ ಸೇನೆಗೆ ಗೊತ್ತಿದೆ. ಗಡಿಯಲ್ಲಿ ನಾವು ಚಟುವಟಿಕೆಗಳಿಂದ ಇದ್ದು, ಸಾಕಷ್ಟು ಒಳನುಸುಳಿಕೆಗಳು ವಿಫಲಗೊಳ್ಳುವಂತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಅಫ್ಗಾನಿಸ್ತಾನ ಅಧ್ಯಕ್ಷರ ಚುನಾವಣಾ ಸಮಾವೇಶದಲ್ಲಿ ಸ್ಪೋಟ, 24 ಸಾವುಅಫ್ಗಾನಿಸ್ತಾನ ಅಧ್ಯಕ್ಷರ ಚುನಾವಣಾ ಸಮಾವೇಶದಲ್ಲಿ ಸ್ಪೋಟ, 24 ಸಾವು

ಕಾಶ್ಮೀರ ಸಹಜ ಸ್ಥಿತಿಗೆ ಬಂದಿಲ್ಲ ಎಂಬ ಆರೋಪ ತಳ್ಳಿ ಹಾಕಿದ ಅವರು, ಎಂದಿನಂತೆಯೇ ಕಾರ್ಯ ನಡೆಯುತ್ತಿದೆ. ಜನಜೀವನ ಸಹಜ ಸ್ಥಿತಿಗೆ ಬಂದು ತಲುಪಿದೆ. ವ್ಯಾಪಾರವೂ ಎಂದಿನಂತೆಯೇ ಇದೆ ಎಂದಿದ್ದಾರೆ.

English summary
The terrorist camp in Balakot across the border, where the Indian Armed forces had undertaken a surgical strike, has been reactivated very recently, Chief of Army Staff General Bipin Rawat said here on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X