ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಸಿಐಎಸ್‌ಎಫ್‌ ಬಸ್‌ ಮೇಲೆ ಉಗ್ರರ ದಾಳಿ, ತನಿಖೆ ಎನ್ಐಎಗೆ

|
Google Oneindia Kannada News

ಶ್ರೀನಗರ, ಏಪ್ರಿಲ್ 28; ಜಮ್ಮುವಿನಲ್ಲಿ ಸಿಐಎಸ್‌ಎಫ್‌ ಬಸ್ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದ ತನಿಖೆಯನ್ನು ಎನ್‌ಐಗೆ ವಹಿಸಲಾಗಿದೆ. ಏಪ್ರಿಲ್ 22ರಂದು ಯೋಧರು ಸಂಚಾರ ನಡೆಸುತ್ತಿದ್ದ ಬಸ್‌ ಮೇಲೆ ದಾಳಿ ನಡೆದಿತ್ತು.

ಗುರುವಾರ ಕೇಂದ್ರ ಗೃಹ ಸಚಿವಾಲಯ ಈ ಕುರಿತು ಆದೇಶ ಹೊರಡಿಸಿದೆ. ಜಮ್ಮುವಿನ ಚಡ್ಡಾ ಕ್ಯಾಂಪ್‌ ಬಳಿ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯನ್ನು ಕರೆದುಕೊಂಡು ಹೋಗುತ್ತಿದ್ದ ಬಸ್‌ ಮೇಲೆ ನಡೆದ ದಾಳಿ ಪ್ರಕರಣದ ತನಿಖೆಯನ್ನು ಎನ್‌ಐಗೆ ವಹಿಸಿದೆ.

 Breaking; ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ 62 ಉಗ್ರರ ಹತ್ಯೆ Breaking; ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ 62 ಉಗ್ರರ ಹತ್ಯೆ

ಸದ್ಯ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗೃಹ ಸಚಿವಾಲಯದಿಂದ ಅಧಿಕೃತ ಆದೇಶ ತಲುಪಿದ ಬಳಿಕ ಎನ್‌ಐಎ ಹೊಸ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲಿದೆ.

Video: ಜಮ್ಮುವಿನಲ್ಲಿ ಸಿಐಎಸ್ಎಫ್ ಯೋಧರ ಬಸ್ ಮೇಲೆ ಉಗ್ರರ ದಾಳಿ Video: ಜಮ್ಮುವಿನಲ್ಲಿ ಸಿಐಎಸ್ಎಫ್ ಯೋಧರ ಬಸ್ ಮೇಲೆ ಉಗ್ರರ ದಾಳಿ

Terrorist Attack On CISF Vechicle Probe Hands Over To NIA

ಏಪ್ರಿಲ್ 22ರಂದು ಮುಂಜಾನೆ 4.25ರ ಸುಮಾರಿಗೆ ಯೋಧರು ಸಾಗುವಾಗ ಉಗ್ರರು ದಾಳಿ ಮಾಡಿದ್ದರು. ತಕ್ಷಣ ಯೋಧರು ಸಹ ದಾಳಿ ಮಾಡಿದ್ದರು. ಮುಂಜಾನೆಯ ಕತ್ತಲಿನ ಉಪಯೋಗ ಪಡೆದ ಯೋಧರು ಗ್ರನೈಡ್ ಎಸೆದು ಪರಾರಿಯಾಗಿದ್ದರು.

ಜಮ್ಮು: 31 ವರ್ಷದಲ್ಲಿ 89 ಕಾಶ್ಮೀರಿ ಪಂಡಿತರು ಸೇರಿ 1,724 ಮಂದಿಯ ಹತ್ಯೆಗೈದ ಉಗ್ರರುಜಮ್ಮು: 31 ವರ್ಷದಲ್ಲಿ 89 ಕಾಶ್ಮೀರಿ ಪಂಡಿತರು ಸೇರಿ 1,724 ಮಂದಿಯ ಹತ್ಯೆಗೈದ ಉಗ್ರರು

Recommended Video

ಭಾಷೆ ವಿಚಾರಕ್ಕೆ ವಾದಕ್ಕಿಳಿದ ಸ್ಟಾರ್ ನಟರು | Oneindia Kannada

ಈ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಎಸ್. ಪಿ. ಪಟೇಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈ ಘಟನೆಯ ಹೊಣೆ ಹೊತ್ತುಕೊಂಡಿದ್ದ ಇಬ್ಬರು ಉಗ್ರರು ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ.

English summary
Ministry of home affairs has hand over the terrorist attack on CISF vehicle case at Jammu on April 22nd to NIA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X