• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಗ್ರರ ದಾಳಿ; ಶ್ರೀನಗರಲ್ಲಿ ಇಬ್ಬರು ಯೋಧರು ಹುತಾತ್ಮ

|

ಶ್ರೀನಗರ, ಅಕ್ಟೋಬರ್ 05 : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಇಬ್ಬರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಉಗ್ರರಿಗಾಗಿ ಹುಡುಕಾಟ ನಡೆದಿದೆ.

ಸೋಮವಾರ ಮಧ್ಯಾಹ್ನ ಶ್ರೀನಗರದ ಹೆದ್ದಾರಿಯಲ್ಲಿ ಗಸ್ತಿನಲ್ಲಿದ್ದ ಯೋಧರ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ದಾಳಿಯ ಬಳಿಕ ಉಗ್ರರು ಯಾವ ಕಡೆ ಪರಾರಿಯಾಗಿದ್ದಾರೆ? ಎಂಬ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಸಿಕ್ಕಿಲ್ಲ.

ಜಮ್ಮು ಕಾಶ್ಮೀರ: ಶಸ್ತ್ರಾಸ್ತ್ರಗಳೊಂದಿಗೆ ಸಿಕ್ಕಿಬಿದ್ದ ಇಬ್ಬರು ಉಗ್ರರು

ಗಾಯಗೊಂಡಿರುವ ಸಿಆರ್‌ಪಿಎಫ್ ಯೋಧರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯೋಧರು ಪರಾರಿಯಾಗಿರುವ ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಕಳೆದ 7 ದಿನಗಳಲ್ಲಿ ನಡೆಯುತ್ತಿರುವ 3ನೇ ದಾಳಿ ಇದಾಗಿದೆ.

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಪೋಷಿತ 6500 ಉಗ್ರರು!

ಉಗ್ರರ ದಾಳಿ ನಡೆದ ಪ್ರದೇಶವನ್ನು ದಕ್ಷಿಣ ಕಾಶ್ಮೀರದ ಪಂಪೋರ್‌ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿನ ಹೆದ್ದಾರಿಯನ್ನು ಯೋಧರು ವಶಕ್ಕೆ ಪಡೆದಿದ್ದಾರೆ. ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

ಪುಲ್ವಾಮಾ ದಾಳಿಗೆ ಜೈಷ್ ಉಗ್ರ ಸಂಘಟನೆ ವ್ಯಯಿಸಿದ್ದ ಹಣವೆಷ್ಟು?

ಶುಕ್ರವಾರ ಬಾರಮುಲ್ಲಾ ಜಿಲ್ಲೆಯಲ್ಲಿ ಉಗ್ರರು ದಾಳಿ ಮಾಡಿದ್ದರು. ಯೋಧರು ಪ್ರತಿದಾಳಿ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದರು. ಸೇನಾಧಿಕಾರಿ ಮತ್ತು ಪೊಲೀಸ್ ಸಿಬ್ಭಂದಿ ಗಾಯಗೊಂಡಿದ್ದರು.

ಒಂದು ಕಡೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ ಗುಂಡು ಮತ್ತು ಶೆಲ್ ದಾಳಿ ನಡೆಸುತ್ತಿದೆ. ಮತ್ತೊಂದು ಕಡೆ ಗಡಿಯಿಂದ ಉಗ್ರರು ಒಳನುಸುಳಿ ಬರುವ ಪ್ರಕರಣಗಳು ವರದಿಯಾಗುತ್ತಿವೆ.

English summary
2 CRPF soldiers were killed and three others injured in a terrorist attack on October 5, 2020. This is the 3rd attack on same area of Srinagar in a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X