ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಸಂಘಟನೆಗಳಿಗೆ ನೆರವು: ಶ್ರೀನಗರದಲ್ಲಿ 9 ಕಡೆ ಎನ್ಐಎ ದಾಳಿ

|
Google Oneindia Kannada News

ಶ್ರೀನಗರ, ಅಕ್ಟೋಬರ್ 28: ಉಗ್ರ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದ ಸುಳಿವಿನ ಮೇರೆಗೆ ಎನ್‌ಐಎ ಬುಧವಾರ ಶ್ರೀನಗರದ 9 ಕಡೆಗಳಲ್ಲಿ ದಾಳಿ ನಡೆಸಿದೆ. 2000ರದಲ್ಲಿ ಸ್ಥಾಪಿಸಲಾದ ಕನಿಷ್ಠ ಮೂರು ಸರ್ಕಾರೇತರ ಸಂಸ್ಥೆಗಳ ಮೇಲೆಯೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದರು. ಈ ಸರ್ಕಾರೇತರ ಸಂಸ್ಥೆಗಳ ಮೇಲೆಯೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಸರ್ಕಾರೇತರ ಸಂಸ್ಥೆಗಳು ಹೆಸರು ಬಹಿರಂಗ ಪಡಿಸದ ದಾನಿಗಳಿಂದ ಹಣ ಪಡೆಯುತ್ತಿದ್ದವು ಎಂದು ಆರೋಪಿಸಲಾಗಿದೆ. ಈ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಶ್ರೀನಗರದಲ್ಲಿ ಸ್ಥಳೀಯ ಪೊಲೀಸ್ ಮತ್ತು ಅರೆ ಸೇನಾಪಡೆಯ ನೆರವಿನೊಂದಿಗೆ ಬುಧವಾರ ಬೆಳಗ್ಗೆ ಶೋಧಕಾರ್ಯ ನಡೆಸಲಾಗಿದೆ. ಪ್ರಮುಖ ಇಂಗ್ಲಿಷ್ ಪತ್ರಿಕೆ ಆವರಣದಲ್ಲಿನ ಟ್ರಸ್ಟ್‌ನ ಕಚೇರಿಯಲ್ಲಿ ಶೋಧ ಕಾರ್ಯಚರಣೆ ನಡೆಸಲಾಯಿತು.

ದಾವೂದ್ ಗ್ಯಾಂಗ್ ಜೊತೆ ಕೇರಳದ ಚಿನ್ನದ ಸ್ಮಗ್ಲರ್ಸ್ ನಂಟುದಾವೂದ್ ಗ್ಯಾಂಗ್ ಜೊತೆ ಕೇರಳದ ಚಿನ್ನದ ಸ್ಮಗ್ಲರ್ಸ್ ನಂಟು

ಪತ್ರಕರ್ತರಾದ ಪರ್ವೈಜ್ ಬುಖಾರಿ ಮತ್ತು ಗೌಹರ್ ಗೀಲಾನಿ ಅವರ ನಿವಾಸದ ಮೇಲೂ ಎನ್‍ಐಎ ದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಾರ, ಧಾರ್ಮಿಕ ಕಾರ್ಯಗಳು ಮತ್ತು ಇತರ ಸಾಮಾಜಿಕ ಕಾರ್ಯಗಳ ಹೆಸರಿನಲ್ಲಿ ವಿದೇಶಗಳಿಂದ ಹಣ ಪಡೆಯುವ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಈ ಸಂಸ್ಥೆಗಳಿಂದ ಧನಸಹಾಯ ನೀಡಲಾಗುತ್ತಿದೆ ಎಂದು ಎನ್‍ಐಎ ಮೂಲಗಳು ತಿಳಿಸಿವೆ.

Terror Funding Case: NIA Searches Trust, NGOs In Srinagar

ಕಾಶ್ಮೀರದಲ್ಲಿ ಎನ್‍ಜಿಒ ನಡೆಸುತ್ತಿರುವ ಖುರಾಮ್ ಪರ್ವೇಜ್ ಎಂಬಾತನ ನಿವಾಸದ ಮೇಲೆ ಇಂದು ದಾಳಿ ನಡೆಸಲಾಗಿದೆ. ಕಾಶ್ಮೀರದ 10 ಸ್ಥಳಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಮತ್ತೊಂದು ಸ್ಥಳಗಳಲ್ಲಿ ಎನ್‍ಐಎ ದಾಳಿ ನಡೆಸಿದೆ.

ಸ್ಥಳೀಯ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ನೆರವಿನೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ತಂಡವು ಶ್ರೀನಗರದ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯ ಆವರಣದಲ್ಲಿರುವ ಟ್ರಸ್ಟ್‍ನ ಕಚೇರಿಯನ್ನು ಜಾಲಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಧನಸಹಾಯ ಆರೋಪದ ಮೇಲೆ 2000ರಲ್ಲಿ ಸ್ಥಾಪಿಸಲಾದ ಕನಿಷ್ಠ ಮೂರು ಸರ್ಕಾರೇತರ ಸಂಸ್ಥೆಗಳ (ಎನ್‍ಜಿಒ) ಮೇಲೂ ಎನ್‍ಐಎ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಎನ್‍ಜಿಒಗಳು ವಿದೇಶಿ ಸಂಸ್ಥೆಗಳಿಂದ ಹಣ ಸ್ವೀಕರಿಸುತ್ತಿದ್ದು, ಈ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಎಂದು ಎನ್‍ಐಎ ತಿಳಿಸಿದೆ.

English summary
The National Investigation Agency on Wednesday carried out searches at nine places, including a trust owned by a newspaper owner and some non-governmental organisations here, in connection with a fresh terror funding probe by the agency, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X