• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಷರಿಯಾ ಕಾನೂನು ಪಾಲಿಸಬೇಕು: ಮುಫ್ತಿ

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 09: ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಷರಿಯಾ ಕಾನೂನನ್ನು ಅಫ್ಘಾನಿಸ್ತಾನದಲ್ಲಿ ಪಾಲಿಸಬೇಕು ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ತಾಲಿಬಾನ್ ಹೇಗೆ ಸರ್ಕಾರ ನಡೆಸಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ಕೈಗೆತ್ತಿಕೊಂಡಿರುವ ತಾಲಿಬಾನ್ ನಾಯಕರು ಷರಿಯಾ ಅನ್ನು ಅದರ ನಿಜ ಅರ್ಥದಲ್ಲಿ ಪಾಲಿಸಬೇಕು. ಷರಿಯಾ, ಮಹಿಳೆಯರೂ ಸೇರಿದಂತೆ ಸರ್ವರಿಗೂ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ ಎಂದರು.

ಷರಿಯಾ ಕಾನೂನು ಎತ್ತಿಹಿಡಿಯುವಂತೆ ತಾಲಿಬಾನ್ ನಾಯಕ ಕರೆಷರಿಯಾ ಕಾನೂನು ಎತ್ತಿಹಿಡಿಯುವಂತೆ ತಾಲಿಬಾನ್ ನಾಯಕ ಕರೆ

ಅಂತಾರಾಷ್ಟ್ರೀಯ ಸಮುದಾಯಗಳೊಂದಿಗೆ ಉತ್ತಮ ಬಾಂಧವನ್ನು ಇಟ್ಟುಕೊಳ್ಳಬೇಕಾದರೆ ಇಸ್ಲಾಂ ಮತ್ತು ಶರಿಯಾದ ಕಠಿಣ ವ್ಯಾಖ್ಯಾನವನ್ನು ಜಾರಿಗೆ ತರುವ ಪ್ರಯತ್ನ ಮಾಡಬಾರದು ಎಂದು ಮೆಹಬೂಬಾ ಹೇಳಿದರು.

ಷರಿಯಾವನ್ನು ಅನುಸರಿಸುವುದನ್ನು ಅವರು ನಿರಾಕರಿಸಿದರೆ, ಅಪ್ಘಾನಿಸ್ತಾನದಲ್ಲಿ ಜನಜೀವನ ದುಸ್ತರಗೊಳ್ಳಲಿದೆ ಎಂದು ಅವರು ಹೇಳಿದರು.
ಪ್ರವಾದಿ ಮೊಹಮ್ಮದ್ ಅವರು ಮದೀನಾನಲ್ಲಿ ಅಡಳಿತ ನಡೆಸಿದ ಮಾದರಿಯನ್ನು ತಾಲಿಬಾನ್ ಅನುಸರಿಸಿದರೆ, ಅದು ಇಡೀ ವಿಶ್ವಕ್ಕೆ ಒಂದು ಉದಾಹರಣೆಯಾಗಿ ಪರಿಣಮಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದರು.

ಮೇ 1 ರಂದು ಅಮೇರಿಕ ಮತ್ತು ಅದರ ಮಿತ್ರಪಡೆಯ ಸೇನೆಗಳು ಅಫ್ಘಾನಿಸ್ತಾನದಿಂದ ವಾಪಸ್ಸು ಹೋಗಲು ಶುರು ಮಾಡಿದ ನಂತರ ಕಳೆದ ತಿಂಗಳು ತಾಲಿಬಾನ ಪಡೆಗಳು ದೇಶದ ಒಂದೊಂದೇ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತಾ ಅಂತಿಮವಾಗಿ ಆಗಸ್ಟ್ 15 ರಂದು ಕಾಬೂಲ್ ನಗರವನ್ನು ಸಹ ವಶಪಡಿಸಿಕೊಂಡವು. ಮಂಗಳವಾರದಂದು ಮುಲ್ಲಾಹ್ ಮೊಹಮ್ಮದ್ ಹಸನ್ ಅಖುಂದ್ ಅವರ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚಿಸಿರುವುದಾಗಿ ತಾಲಿಬಾನ್ ಹೇಳಿದೆ.

ತಾಲಿಬಾನ್ ಸರ್ಕಾರ ರಚಿಸಿ ಆಡಳಿತವನ್ನು ಕೈಗೆತ್ತಿಕೊಂಡಿರುವುದು ಸದ್ಯದ ವಾಸ್ತವ ಸಂಗತಿಯಾಗಿದೆ. ತಾಲಿಬಾನ ಮೊದಲ ಬಾರಿಗೆ ಆಡಳಿತಕ್ಕೆ ಬಂದಾಗ, ಮಾನವ ಹಕ್ಕುಗಳ ವಿರೋಧಿ ಎನ್ನುವುದು ಅದರ ಇಮೇಜ್ ಆಗಿತ್ತು.

ಅದು ಅಫ್ಘಾನಿಸ್ತಾನವನ್ನು ಆಳುವ ನಿರ್ಧಾರ ಮಾಡಿಕೊಂಡಿದ್ದರೆ, ಷರಿಯಾ ಕಾನೂನನ್ನು ಪವಿತ್ರ ಕುರಾನ್ ನಲ್ಲಿ ಹೇಳಿರುವ ಹಾಗೆ ಪಾಲಿಸಬೇಕು. ಈ ಕಾನೂನು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ,' ಎಂದು ಮೆಹಬೂಬಾ ಅವರು ಹೇಳಿದರು.'ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಸಹಜ ಸ್ಥಿತಿಗೆ ಮರಳಿದೆ ಎಂಬ ನಕಲಿ ವಾದವು ಈಗ ಬಯಲಾಗಿದೆ. ಭಾರತ ಸರ್ಕಾರವು ಅಫ್ಘಾನ್ ಜನರ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ.

ಆದರೆ ಉದ್ದೇಶಪೂರ್ವಕವಾಗಿ ಕಾಶ್ಮೀರಿಗಳಿಗೆ ಹಕ್ಕುಗಳನ್ನುನಿರಾಕರಿಸುತ್ತಿದೆ. ಜಮ್ಮು-ಕಾಶ್ಮಿರದ ಆಡಳಿತದ ಪ್ರಕಾರ ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರದ ಕಾರಣ ನನ್ನನ್ನು ಇಂದು ಗೃಹಬಂಧನದಲ್ಲಿರಿಸಲಾಗಿದೆ. ಇದು ಅವರ ಕೇಂದ್ರಾಡಳಿತ ಪ್ರದೇಶವು ಸಹಜತೆಗೆ ಮರಳಿದೆ ಎಂಬ ನಕಲಿ ಪ್ರತಿಪಾದನೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದ್ದರು.

ಷರಿಯಾ ಕಾನೂನು ಇಸ್ಲಾಂ ಧರ್ಮದ ಕಾನೂನು ವ್ಯವಸ್ಥೆಯಾಗಿದೆ. ಕುರಾನ್ ಹಾಗೂ ಇಸ್ಲಾಂ ಧರ್ಮದ ಕೇಂದ್ರ ಪಠ್ಯವಾದ ಫತ್ವಾಗಳಿಂದ ವಿಭಾಗಿಸಲಾಗಿದೆ. ಇಸ್ಲಾಂ ವಿದ್ವಾಂಸರ ತೀರ್ಪುಗಳನ್ನು ಕಾನೂನು ಒಳಗೊಂಡಿದೆ.

ಷರಿಯಾ ಕಾನೂನಿನಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ, ಉಪವಾಸ ಹಾಗೂ ಬಡವರಿಗೆ ನೀಡುವ ದಾನದ ಮಹತ್ವವನ್ನು ತಿಳಿಸುತ್ತದೆ. ಇದರಲ್ಲಿರುವ ನಿಬಂಧನೆಗಳು ಜೀವನ ಸಂಹಿತೆಯಾಗಿ ಕಾರ್ಯನಿರ್ವಹಿಸುತ್ತದೆ. ದೇವರ ಆಶಯದಂತೆ ಪ್ರತಿಯೊಬ್ಬ ಮುಸ್ಲಿಂ ಧರ್ಮೀಯನು ಜೀವನವನ್ನು ಹೇಗೆ ನಡೆಸಬೇಕು? ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ತಿಳಿಸುತ್ತದೆ.

ಮುಸ್ಲಿಂ ಧರ್ಮೀಯರ ಜೀವನ ಕ್ರಮವನ್ನು ಇದು ತಿಳಿಸುತ್ತದೆ. ಪಾಶ್ಚಾತ್ಯ ಜೀವನ ಕ್ರಮದಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ತನ್ನನ್ನು ಹೇಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ಈ ಕಾನೂನು ತಿಳಿಸುತ್ತದೆ. ಶರಿಯಾ ನಿಯಮಕ್ಕೆ ಅನುಗುಣವಾಗಿ ತನ್ನ ನಿತ್ಯದ ಜೀವನವನ್ನು ನಡೆಸಬೇಕು ಎಂಬುದು ಕಡ್ಡಾಯವಾಗಿದೆ.

ಷರಿಯಾ ಕಾನೂನಿನ ಪ್ರಕಾರ ಅಪರಾಧಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. 'ಹದ್' ಅಪರಾಧಗಳು ಹಾಗೂ 'ತಜೀರ್' ಅಪರಾಧಗಳು ಎಂದಾಗಿದೆ. ಹದ್ ಅಪರಾಧಗಳಿಗೆ ನಿಗದಿತ ದಂಡಗಳೊಂದಿಗೆ ಗಂಭೀರ ಅಪರಾಧ ಎಂದು ಕರೆಯಿಸಿಕೊಳ್ಳುತ್ತದೆ.

ಇನ್ನು ತಜೀರ್ ಅಪರಾಧಗಳ ಶಿಕ್ಷೆ ಹಾಗೂ ತೀರ್ಪನ್ನು ನ್ಯಾಯಾಧೀಶರ ವಶಕ್ಕೆ ಒಪ್ಪಿಸಲಾಗುತ್ತದೆ. ಹದ್ ಅಪರಾಧಗಳಲ್ಲಿ ಕಳ್ಳತನದ ಶಿಕ್ಷೆಗೆ ಕೈಗಳನ್ನು ಕತ್ತರಿಸುವ ದಂಡನೆಯನ್ನು ವಿಧಿಸಲಾಗುತ್ತದೆ. ವ್ಯಭಿಚಾರ ಅಪರಾಧಕ್ಕೆ ಕಲ್ಲೆಸೆದು ಹತ್ಯೆಗೈಯ್ಯುವ ಶಿಕ್ಷೆಯನ್ನು ವಿಧಿಸಲಾಗಿದೆ.ನನ್ನನ್ನು ಮತ್ತೆ ಗೃಹ ಬಂಧನದಲ್ಲಿರಿಸಲಾಗಿದ್ದು, ಆ ಮೂಲಕ ಜಮ್ಮು-ಕಾಶ್ಮೀರದ ಸಹಜಸ್ಥಿತಿ ಬಟಾಬಯಲಾಗಿದೆ ಮೆಹಮೂಬಾ ಮುಫ್ತಿ ಹೇಳಿದ್ದರು.

English summary
The Taliban, which has taken over the reins of Afghanistan, must follow true Sharia (Islamic law), which guarantees rights of all, including women, Jammu and Kashmir's Peoples Democratic Party president Mehbooba Mufti said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X