ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರದಲ್ಲಿ ಬುರ್ಖಾ ಧರಿಸಿದ ವ್ಯಕ್ತಿ ನಡೆಸಿದ ಗ್ರನೇಡ್ ದಾಳಿಗೆ ಒಬ್ಬ ಸಾವು

|
Google Oneindia Kannada News

ಶ್ರೀನಗರ್, ಮೇ 17: ಬುರ್ಖಾ ಧರಿಸಿಕೊಂಡು ಬಂದ ಶಂಕಿತ ಉಗ್ರನೊಬ್ಬ ವೈನ್ ಶಾಪ್ ಒಳಗೆ ಗ್ರೆನೇಡ್ ಎಸೆದಿರುವ ಘಟನೆ ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದಿದೆ. ಈ ಶಂಕಿತ ಉಗ್ರರ ದಾಳಿಯಲ್ಲಿ ಸ್ಥಳದಲ್ಲೇ ಒಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ರಜೌರಿ ನಿವಾಸಿ ರಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ. 35 ವರ್ಷದ ರಂಜಿತ್ ಸಿಂಗ್ ಗ್ಯಾರಿಸನ್ ಪೇಟೆಯಲ್ಲಿ ಹೊಸದಾಗಿ ತೆರೆಯಲಾದ ವೈನ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬೇಸಿಗೆ ಬಿಸಿಲಿಗೆ ಬಸ್‌ಗೆ ಹೊತ್ತುಕೊಂಡ ಬೆಂಕಿ: ನಾಲ್ವರು ಸಾವು, 22 ಮಂದಿ ಗಾಯ ಬೇಸಿಗೆ ಬಿಸಿಲಿಗೆ ಬಸ್‌ಗೆ ಹೊತ್ತುಕೊಂಡ ಬೆಂಕಿ: ನಾಲ್ವರು ಸಾವು, 22 ಮಂದಿ ಗಾಯ

ಇನ್ನು ಗಾಯಗೊಂಡ ಮೂವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇದು ಒಂದು ಭಯೋತ್ಪಾದಕ ದಾಳಿ ಇರಬಹುದು ಎಂದು ಶಂಕಿಸಲಾಗಿದೆ. ಗ್ರನೇಡ್ ಎಸೆದ ವ್ಯಕ್ತಿಗಾಗಿ ಪೊಲೀಸರು, ಸೇನೆ ಹುಡುಕಾಟ ನಡೆಸುತ್ತಿದೆ.

Suspected terrorist In Burqa threw a grenade inside a wine shop in Baramulla

ಬಾರಾಮುಲ್ಲಾದ ದಿವಾನ್ ಬಾಗ್‌ನಲ್ಲಿರುವ ಈ ವೈನ್ ಶಾಪ್ ಅಕ್ಕ-ಪಕ್ಕದಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆಗಳ ಸೌಲಭ್ಯಗಳಿವೆ. ರಾತ್ರಿ 8 ಗಂಟೆ ಸುಮಾರಿಗೆ ಬುರ್ಖಾ ಧರಿಸಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಶಂಕಿತ ಉಗ್ರರು ವೈನ್ ಶಾಪ್ ಬಳಿ ಗಾಡಿ ನಿಲ್ಲಿಸಿ ಗ್ರೆನೇಡ್ ಒಳಗೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರ ದಾಳಿಯ ಬಗ್ಗೆ ಪೊಲೀಸರ ಮಾಹಿತಿ: "ಈ ಘಟನೆಯಲ್ಲಿ ವೈನ್ ಶಾಪ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಉದ್ಯೋಗಿಗಳಿಗೆ ಗಾಯಗಳಾಗಿವೆ. ಎಲ್ಲಾ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಗಾಯಗೊಂಡವರಲ್ಲಿ ಒಬ್ಬರು ಮೃತಪಟ್ಟಿದ್ದು, ಅವರನ್ನು ಬಕ್ರ ರಾಜೌರಿ ನಿವಾಸಿ ಕಿಶನ್ ಲಾಲ್ ಪುತ್ರ ರಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ," ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಗೊಂಡ ಇತರ ನೌಕರರನ್ನು ಬಿಜೇಂದ್ರ ಸಿಂಗ್ ಅವರ ಪುತ್ರ ಗೋವರ್ಧನ್ ಸಿಂಗ್, ಕರ್ತಾರ್ ಸಿಂಗ್ ಅವರ ಪುತ್ರ ರವಿಕುಮಾರ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಬಿಲ್ಲವರ್ ಕಥುವಾ ನಿವಾಸಿಗಳಾಗಿದ್ದಾರೆ. ಇತರ ಜೊತೆಗೆ ಕಂಗ್ರಾ ರಾಜೌರಿ ನಿವಾಸಿ ಗುರುದೇವ್ ಸಿಂಗ್ ಪುತ್ರ ಗೋವಿಂದ್ ಸಿಂಗ್ ಎಂದು ತಿಳಿದು ಬಂದಿದೆ.

Recommended Video

ಬೆಂಗಳೂರಲ್ಲಿ‌ ಮಹಾಮಳೆ:ಮನೆಗಳಿಗೆ ನುಗ್ಗಿದ‌ ನೀರು,ಜನಜೀವನ ಅಸ್ತವ್ಯಸ್ತ | Oneindia Kannada

ಪೊಲೀಸರಿಂದ ಶೋಧ ಕಾರ್ಯಾಚರಣೆ: ಗ್ರೆನೇಡ್ ದಾಳಿ ನಡೆಸಿದ ಜಮ್ಮು ಕಾಶ್ಮೀರದ ಬಾರಾಮುಲ್ಲಾದ ಈ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾಶ್ಮೀರ ಪಂಡಿತ್ ನೌಕರನ ಮೇಲೆ ಗುರುವಾರ ನಡೆದ ದಾಳಿಯ ನಂತರ ಕಣಿವೆಯಲ್ಲಿ ನಡೆದ ಎರಡನೇ ಪ್ರಮುಖ ದಾಳಿ ಇದಾಗಿದೆ. ಅಂದಿನಿಂದ 4,000ಕ್ಕೂ ಹೆಚ್ಚು ಪಂಡಿತ್ ನೌಕರರು ಕಾಶ್ಮೀರ ಕಣಿವೆಯ ಹೊರಗಿನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

English summary
One killed and three injured in suspected terrorist attack. Suspected terroist wearing burqa threw a grenade inside a wine shop in Baramulla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X