ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಗರ್ ನಲ್ಲಿ 11 ವರ್ಷದಲ್ಲೇ ಕನಿಷ್ಠ ತಾಪಮಾನ -6.8 ಡಿಗ್ರಿ; ನೀರೆಲ್ಲ ಮಂಜು ಗಡ್ಡೆ

|
Google Oneindia Kannada News

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಡಿಸೆಂಬರ್ 24: ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿಯಾದ ಶ್ರೀನಗರ್ ನಲ್ಲಿ ಭಾನುವಾರ ರಾತ್ರಿ ಹನ್ನೊಂದು ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. -6.8 ಡಿಗ್ರಿ ಸೆಲ್ಷಿಯಸ್, ಹೌದು ನೀವು ಸರಿಯಾಗಿಯೇ ಓದುತ್ತಿದ್ದೀರಾ. ಅದು ಮೈನಸ್ 6.8 ಡಿಗ್ರಿ ಸೆಲ್ಷಿಯಸ್ ತಾಪಮಾನವೇ. ಆ ಮಟ್ಟಕ್ಕೆ ತಲುಪಿದೆ.

ಪ್ರಖ್ಯಾತ ಪ್ರವಾಸಿಗರ ತಾಣ ದಾಲ್ ಸರೋವರದ ನೀರು ಮಂಜುಗಡ್ಡೆಯಾಗಿದೆ. ಸೋಮವಾರದಂದು ವಸತಿ ಪ್ರದೇಶಗಳಲ್ಲಿ ನೀರು ಪೂರೈಕೆ ಆಗುವ ಪೈಪ್ ಗಳಲ್ಲೂ ಮಂಜುಗಡ್ಡೆಯೇ. ಸಾರ್ವಕಾಲಿಕ ಕನಿಷ್ಠ ತಾಪಮಾನ ಎಂದು ಶ್ರೀನಗರ್ ನಲ್ಲಿ ದಾಖಲಾಗಿರುವುದು ಡಿಸೆಂಬರ್ 13, 1934ರಲ್ಲಿ ಆಗ ತಾಪಮಾನ ಮೈನಸ್ 12.8 ಡಿಗ್ರಿ ತಲುಪಿತ್ತು.

ಪೆಥಾಯ್ ಚಂಡಮಾರುತ ಎಫೆಕ್ಟ್: ರಾಜ್ಯದಲ್ಲಿ ಕೊರೆಯುವ ಚಳಿ ಶುರುಪೆಥಾಯ್ ಚಂಡಮಾರುತ ಎಫೆಕ್ಟ್: ರಾಜ್ಯದಲ್ಲಿ ಕೊರೆಯುವ ಚಳಿ ಶುರು

ಶ್ರೀನಗರ್ ನಲ್ಲಿ ಕನಿಷ್ಠ ತಾಪಮಾನ -6.8 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಇದು ಕಳೆದ ಹನ್ನೊಂದು ವರ್ಷಗಳಲ್ಲೇ ದಾಖಲಾದ ಕನಿಷ್ಠ ತಾಪಮಾನ. ಡಿಸೆಂಬರ್ 31, 2007ರಲ್ಲಿ ಹಿಂದಿನ ದಾಖಲೆ ಅಂದರೆ -7.2 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು ಎಂದು ಹವಾಮಾನ ಇಲಾಖೆಯವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವಸತಿ ಪ್ರದೇಶದಲ್ಲಿ ನೀರು ಪೂರೈಕೆಯಾಗಿಲ್ಲ

ವಸತಿ ಪ್ರದೇಶದಲ್ಲಿ ನೀರು ಪೂರೈಕೆಯಾಗಿಲ್ಲ

ಶೀತ ಮಾರುತದ ಪರಿಣಾಮ ನೀರು ಮಂಜುಗಡ್ಡೆಯಾಗುತ್ತಿದೆ. ವಸತಿ ಪ್ರದೇಶಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ದಕ್ಷಿಣ ಕಾಶ್ಮೀರದಲ್ಲಿ ಮೈನಸ್ ಐದು ಡಿಗ್ರಿ ಸೆಲ್ಷಿಯಸ್ ಹಾಗೂ ಹತ್ತಿರದ ಕೊಕೆರ್ ನಾಗ್ ಪಟ್ಟಣದಲ್ಲಿ ಭಾನುವಾರ ರಾತ್ರಿ -3.9 ದಾಖಲಾಗಿದೆ.

ಗುಲ್ಮಾರ್ಗ್ ನಲ್ಲಿರುವ ಸ್ಕೈ ರೆಸಾರ್ಟ್ ನಲ್ಲಿ -6.8 ಡಿಗ್ರಿ

ಗುಲ್ಮಾರ್ಗ್ ನಲ್ಲಿರುವ ಸ್ಕೈ ರೆಸಾರ್ಟ್ ನಲ್ಲಿ -6.8 ಡಿಗ್ರಿ

ಉತ್ತರ ಕಾಶ್ಮೀರದ ಭಾನುವಾರ ರಾತ್ರಿ -6 ಡಿಗ್ರಿ ಸೆಲ್ಷಿಯಸ್ ತಲುಪಿದೆ. ವಾರ್ಷಿಕ ಅಮರನಾಥ್ ಯಾತ್ರೆ ಕೈಗೊಳ್ಳುವಾಗ ಬೇಸ್ ಕ್ಯಾಂಪ್ ನಂತೆ ಇರುವ ಪಹಲ್ಗಾಮ್ ನಲ್ಲಿ ಭಾನುವಾರ ರಾತ್ರಿ -7.2 ಡಿಗ್ರಿ ಉಷ್ಣಾಂಶ ದಾಖಲಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಕಾಶ್ಮೀರದಲ್ಲಿನ ಗುಲ್ಮಾರ್ಗ್ ನಲ್ಲಿರುವ ಸ್ಕೈ ರೆಸಾರ್ಟ್ ನಲ್ಲಿ ಕನಿಷ್ಠ ತಾಪಮಾನ -6.8 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ.

ಕಾಶ್ಮೀರದಲ್ಲಿ ಅವಧಿಗೆ ಮುನ್ನವೇ ಹಿಮಪಾತ; ಸೇಬು ಬೆಳೆಗಾರರ ಕಣ್ಣೀರುಕಾಶ್ಮೀರದಲ್ಲಿ ಅವಧಿಗೆ ಮುನ್ನವೇ ಹಿಮಪಾತ; ಸೇಬು ಬೆಳೆಗಾರರ ಕಣ್ಣೀರು

ಈ ಬಾರಿಯ ಚಳಿಗಾಲದಲ್ಲೇ ಕನಿಷ್ಠ ಪ್ರಮಾಣ

ಈ ಬಾರಿಯ ಚಳಿಗಾಲದಲ್ಲೇ ಕನಿಷ್ಠ ಪ್ರಮಾಣ

ಲೇಹ್ ನಲ್ಲಿ ಭಾನುವಾರ ರಾತ್ರಿ -14.7 ಡಿಗ್ರಿ ಸೆಲ್ಷಿಯಸ್ ತಲುಪಿತ್ತು. ಅದಕ್ಕೂ ಹಿಂದಿನ ರಾತ್ರಿ -14.3 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಈ ಉಷ್ಣಾಂಶವು ಈ ಬಾರಿಯ ಚಳಿಗಾಲದಲ್ಲೇ ಕನಿಷ್ಠ ಪ್ರಮಾಣ ಎಂದು ದಾಖಲಾಗಿದೆ. ಹತ್ತಿರದ ಕಾರ್ಗಿಲ್ ನಲ್ಲಿ -15.3 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ.

40 ದಿನಗಳ ಚಳಿಗಾಲ ಬಹಳ ಕಷ್ಟಕರ

40 ದಿನಗಳ ಚಳಿಗಾಲ ಬಹಳ ಕಷ್ಟಕರ

ಸದ್ಯಕ್ಕೆ ಕಾಶ್ಮೀರ 'ಚಿಲ್ಲೈ-ಕಲಾನ್'ನ ಹಿಡಿತದಲ್ಲಿದೆ. 40 ದಿನಗಳ ಈ ಅವಧಿಯಲ್ಲಿ ಚಳಿಗಾಲ ಬಹಳ ಕಷ್ಟಕರವಾಗಿರುತ್ತದೆ. ಹಿಮಪಾತ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕನಿಷ್ಠ ಹಾಗೂ ಗರಿಷ್ಠ ತಾಪಮಾನದಲ್ಲಿ ಭಾರೀ ಇಳಿಕೆ ಕಾಣಿಸಿಕೊಳ್ಳುತ್ತದೆ. ಈ ಚಿಲ್ಲೈ ಕಲಾನ್ ಜನವರಿ 31ಕ್ಕೆ ಕೊನೆಯಾಗುತ್ತದೆ.

ಮಕ್ಕಳು, ಹಿರಿಯರನ್ನು ಆರೋಗ್ಯ ಸಮಸ್ಯೆ ಕಾಡುತ್ತದೆ

ಮಕ್ಕಳು, ಹಿರಿಯರನ್ನು ಆರೋಗ್ಯ ಸಮಸ್ಯೆ ಕಾಡುತ್ತದೆ

ಆ ನಂತರ 20 ದಿನಗಳ ಅವಧಿಗೆ ಚಿಲ್ಲೈ- ಖುರ್ದ್ (ಸಣ್ಣ ಪ್ರಮಾಣದ ಶೀತ) ಮತ್ತು 10 ದಿನಗಳಿಗೆ ಚಿಲೈ-ಬಚ್ಚಾ (ಮಗುವಿನ ಶೀತ) ಇರುತ್ತದೆ. ನವೆಂಬರ್ ನ ಮೊದಲ ಎರಡು ವಾರದಲ್ಲಿ ಆರಂಭದ ಹಿಮಪಾತವಾದರೂ ಈ ಅವಧಿಯಲ್ಲಿ ಚಳಿಗಾಲ ಇನ್ನೂ ದೊಡ್ಡ ಪ್ರಮಾಣದಲ್ಲಿ ಪ್ರಭಾವ ತೋರಿಲ್ಲ. ಶೀತದ ಪ್ರಮಾಣ ಹೆಚ್ಚಾದಷ್ಟೂ ಕೆಮ್ಮು, ಶೀತ ಮತ್ತಿತರ ಉಸಿರಾಟ ಸಮಸ್ಯೆಗಳು ಮಕ್ಕಳನ್ನು ಹಾಗೂ ಹಿರಿಯರನ್ನು ಕಾಡುತ್ತದೆ.

English summary
The summer capital of Jammu and Kashmir recorded the coldest night in 11 years as the minimum temperature plunged to minus 6.8 degrees Celsius, resulting in partial freezing of the Dal Lake and water supply lines to residential areas on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X