ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮದ ಮೇಲೆ ಜಾರಿಕೊಂಡು ಪಾಕಿಸ್ತಾನ ತಲುಪಿದ ಭಾರತೀಯ ಸೈನಿಕ

|
Google Oneindia Kannada News

Recommended Video

Indian Army recuses a civilian during Snowslide | Oneindia Kannada

ಶ್ರೀನಗರ, ಜನವರಿ 15: ಗಡಿ ರಕ್ಷಣೆ ಕಾರ್ಯದಲ್ಲಿದ್ದಾಗ ಆಕಸ್ಮಿಕವಾಗಿ ಹಿಮದ ಮೇಲೆ ಜಾರಿಕೊಂಡು ಪಾಕಿಸ್ತಾನ ಸೇರಿಬಿಟ್ಟಿದ್ದಾನೆ ಭಾರತದ ಸೈನಿಕ.

ರಾಜೇಂದ್ರ ಸಿಂಗ್ ನೇಗಿ ಎಂಬ ಸೈನಿಕ ಜಮ್ಮು ಕಾಶ್ಮೀರದ ಗುಲ್‌ಮರ್ಗ್ ಎಂಬಲ್ಲಿ ಗಡಿ ರಕ್ಷಣೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಎಂದಿನಂತೆ ಕರ್ತವ್ಯ ಮಾಡುತ್ತಿರುವಾಗ ಆಕಸ್ಮಿಕವಾಗಿ ಹಿಮದ ಮೇಲೆ ಕಾಲು ಜಾರಿ, ಜಾರುತ್ತಲೇ ಸಾಗಿ ಪಾಕಿಸ್ತಾನದ ಭೂ ಪ್ರದೇಶ ಸೇರಿದ್ದಾರೆ.

ಕಾರ್ಯಪ್ಪ ಸ್ಮರಣೆಯಲ್ಲಿ ಭೂ ಸೇನಾ ದಿನಾಚರಣೆ ಸಂಭ್ರಮಕಾರ್ಯಪ್ಪ ಸ್ಮರಣೆಯಲ್ಲಿ ಭೂ ಸೇನಾ ದಿನಾಚರಣೆ ಸಂಭ್ರಮ

ರಾಜೇಂದ್ರ ಸಿಂಗ್ ನೇಗಿ ಭಾರತೀಯ ಸೈನ್ಯದೊಂದಿಗೆ ಸಂಪರ್ಕ ಕಡಿದುಕೊಂಡಿದ್ದು, ಆತನಿಗಾಗಿ ಸೇನೆಯು ಹುಡುಕಾಟ ನಡೆಸಿದೆ.

Soldier Reached Pakistan Accidently Sliding On Snow

ದೆಹ್ರಾದೂನ್‌ ನವರಾಗಿರುವ ಸೈನಿಕ ನೇಗಿ 2002 ರಲ್ಲಿ ಸೈನ್ಯಕ್ಕೆ ಸೇರಿದ್ದರು. ಅವರನ್ನು ಭಾರತ-ಪಾಕಿಸ್ತಾನ ಗಡಿ ಪ್ರದೇಶ ಗುಲ್‌ಮರ್ಗ್‌ ಗೆ ಕಳೆದ ನವೆಂಬರ್ ನಲ್ಲಿ ನಿಯೋಜಿಸಲಾಗಿತ್ತು. ನೇಗಿ ತಮಗೆ ಸಿಕ್ಕಿರುವ ಬಗ್ಗೆ ಪಾಕಿಸ್ತಾನ ಸೈನ್ಯ ಯಾವುದೇ ಮಾಹಿತಿ ನೀಡಿಲ್ಲ.

ಕೂಲಿ ಕಾರ್ಮಿಕನನ್ನು ಕೊಂದು ತಲೆ ಕತ್ತರಿಸಿದ ಪಾಕ್ ಸೇನೆಕೂಲಿ ಕಾರ್ಮಿಕನನ್ನು ಕೊಂದು ತಲೆ ಕತ್ತರಿಸಿದ ಪಾಕ್ ಸೇನೆ

2016 ರ ಸರ್ಜಿಕಲ್ ಸ್ಟ್ರೈಕ್ ವೇಳೆ ಸಹ ಒಬ್ಬ ಸೈನಿಕ ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದ, ನಂತರ ಆತನನ್ನು ಬಿಡಿಸಿಕೊಂಡು ಬರಲಾಗಿತ್ತು. ನಂತರ ವಾಯುಸೇನೆಯ ಅಭಿನಂದನ್ ವರ್ದಮಾನ್ ಸಹ ಪಾಕ್ ಯುದ್ಧವಿಮಾನವನ್ನು ಹಿಮ್ಮೆಟ್ಟುವ ವೇಳೆ ಅಚಾನಕ್ಕಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದರು.

English summary
Indian Army soldier accidentally reached Pakistan sliding on snow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X