• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧ ನಾಪತ್ತೆ; ಉಗ್ರರಿಂದ ಅಪಹರಣ ಶಂಕೆ

|

ಶ್ರೀನಗರ, ಆಗಸ್ಟ್ 03 : ಕುಟುಂಬ ಸದಸ್ಯರ ಜೊತೆ ಬಕ್ರೀದ್ ಆಚರಣೆ ಮಾಡಲು ರಜೆ ಮೇಲೆ ತೆರಳಿದ್ದ ಯೋಧರೊಬ್ಬರು ಜಮ್ಮು ಮತ್ತು ಕಾಶ್ಮೀರದಲ್ಲಿ ನಾಪತ್ತೆಯಾಗಿದ್ದಾರೆ. ಸೇನೆಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

   SpaceX and NASA completes space mission successfully | Oneindia Kannada

   ಶಾಕೀರ್ ಮಜೂರ್ ಎಂಬ 162 ಬೆಟಾಲಿಯನ್ ಯೋಧ ಭಾನುವಾರ ಸಂಜೆ 5ರಿಂದ ನಾಪತ್ತೆಯಾಗಿದ್ದಾರೆ. ಉಗ್ರರ ಗುಂಪು ಯೋಧನನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಹುಡುಕಾಟ ನಡೆಯುತ್ತಿದೆ.

   ಜಮ್ಮು ಕಾಶ್ಮೀರ ಎನ್‌ಕೌಂಟರ್: ಹತರಾದ ಮೂವರು ಹಿಜ್ಬುಲ್ ಉಗ್ರರು

   ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ನಿರ್ಜನ ಪ್ರದೇಶವೊಂದರಲ್ಲಿ ಯೋಧನ ಕುಟುಂಬಕ್ಕೆ ಸೇರಿದ ಕಾರು ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಭಾನುವಾರ ಸಂಜೆ ಮನೆಯಿಂದ ಕಾರಿನಲ್ಲಿ ಮಜೂರ್ ಹೊರ ಹೋಗಿದ್ದರು, ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮತ್ತು ಸೇನೆ ಯೋಧನಿಗಾಗಿ ಹುಡುಕಾಟ ನಡೆಸುತ್ತಿದೆ.

   ಜಮ್ಮು ಕಾಶ್ಮೀರದಲ್ಲಿ ಯೋಧ ನಾಪತ್ತೆ: ಸುಟ್ಟ ಸ್ಥಿತಿಯಲ್ಲಿ ವಾಹನ ಪತ್ತೆ

   ರಜೆ ಹಾಕಿದ್ದ ಯೋಧ ಕುಟುಂಬದ ಜೊತೆ ಬಕ್ರೀದ್ ಆಚರಣೆ ಮಾಡಲು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದರು. ಸಂಜೆ ಮನೆಯಿಂದ ಹೊರ ಹೋದಾಗ ಅವರನ್ನು ಅಪಹರಣ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

   ಕಾರವಾರದಲ್ಲಿ ತಾಯಿಯ ಅಂತ್ಯಸಂಸ್ಕಾರಕ್ಕೆ ಪರದಾಡಿದ ಯೋಧ

   ಭಾನುವಾರ ಸಂಜೆಯಿಂದ ಹುಡುಕಾಟ ನಡೆಸಿದರೂ ಯೋಧನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಚೆಕ್‌ ಪೋಸ್ಟ್‌ಗಳಿಗೂ ಮಾಹಿತಿ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

   English summary
   Rifleman Shakir Manzoor soldier of 162 battalion missing from August 2nd evening. It is suspected that he has been abducted by terrorists. He gone to Jammu and Kashmir to celebrate Eid with family.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X