ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಲ್ಲಿ 25 ಕಳ್ಳದಾರಿ: ನಾಗರಿಕರ ವೇಷದಲ್ಲಿ ಭಯೋತ್ಪಾದಕರು

|
Google Oneindia Kannada News

ಬೆಂಗಳೂರು, ನವೆಂಬರ್ 19: ಮೂರೇ ತಿಂಗಳಲ್ಲಿ ಭಾರತಕ್ಕೆ 135 ಉಗ್ರರು ಕಾಲಿಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮೇಲೆ ಕೇಂದ್ರ ಸರ್ಕಾರ ಹದ್ದಿನ ಕಣ್ಣು ಇಟ್ಟಿದ್ದರೂ ಕೂಡ ಭಯೋತ್ಪಾದಕರ ಒಳನುಸುಳುವಿಕೆ ಮಾತ್ರ ಇನ್ನೂ ನಿಂತಿಲ್ಲ.

ಆಗಸ್ಟ್ 5ರಿಂದ ಇಲ್ಲಿಯವರೆಗೆ 135 ಉಗ್ರರು ಭಾರತದೊಳಗೆ ಕಾಲಿಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆಗಳು ಮಾಹಿತಿ ನೀಡಿವೆ.

ಮೋಸ್ಟ್ ವಾಂಟೆಡ್ ಉಗ್ರ ಬಗ್ದಾದಿ ಹತ್ಯೆ, ಫೋಟೊ, ವಿಡಿಯೊ ಬಿಡುಗಡೆಮೋಸ್ಟ್ ವಾಂಟೆಡ್ ಉಗ್ರ ಬಗ್ದಾದಿ ಹತ್ಯೆ, ಫೋಟೊ, ವಿಡಿಯೊ ಬಿಡುಗಡೆ

ಕಣಿವೆಯೊಳಗೆ ನುಸುಳುವ ಉಗ್ರರು ಆರಂಭದಲ್ಲಿ ಯಾವುದೇ ಶಸ್ತ್ರಾಸ್ತ್ರಗಳ ಮೂಲಕ ಪ್ರವೇಶ ಪಡೆಯುತ್ತಿಲ್ಲ ಎನ್ನುವ ಅಚ್ಚರಿಯ ವಿಷಯವನ್ನು ಗುಪ್ತಚರ ಇಲಾಖೆ ನೀಡಿದೆ. ಸ್ಥಳೀಯ ನಾಗರಿಕರ ವೇಷ ಧರಿಸಿ ಕಣಿವೆಯೊಳಗೆ ಕಾಲಿಡುವ ಭಯೋತ್ಪಾದಕರು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ರವಾನಿಸುವ ಕೆಲಸ ಮಾಡುತ್ತಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂತೆಗೆದ ದಿನದಿಂದ ಹಿಡಿದು ಮೂರು ತಿಂಗಳ ಅವಧಿಯಲ್ಲಿ 135 ಪಾಕಿಸ್ತಾನ ಬೆಂಬಲಿತ ಉಗ್ರರು ಗಡಿಯೊಳಗೆ ನುಸುಳಿ ಬಂದಿದ್ದಾರೆ.

ಎಲ್ಲೆಲ್ಲಿಂದ ಉಗ್ರರು ನುಗ್ಗಿದ್ದಾರೆ

ಎಲ್ಲೆಲ್ಲಿಂದ ಉಗ್ರರು ನುಗ್ಗಿದ್ದಾರೆ

ಕುಪ್ವಾರ್, ಪೂಂಚ್ ಸೆಕ್ಟರ್ ಸೇರಿದಂತೆ ಗಡಿ ನಿಯಂತ್ರಣ ರೇಖೆಯ ಬಳಿಯಿಂದ ನುಸುಳುಕೋರರು ಗಡಿಯೊಳಗೆ ನುಗ್ಗಿ ಬಂದಿದ್ದಾರೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.

2018ರಲ್ಲಿ 145 ಭಯೋತ್ಪಾದಕರು ಕಣಿವೆಯೊಳಗೆ ಕಾಲಿಟ್ಟಿದ್ದರು

2018ರಲ್ಲಿ 145 ಭಯೋತ್ಪಾದಕರು ಕಣಿವೆಯೊಳಗೆ ಕಾಲಿಟ್ಟಿದ್ದರು

ಕಳೆದ ವರ್ಷ 2018ರಲ್ಲಿ145 ಜನ ಭಯೋತ್ಪಾದಕರು ಕಣಿವೆ ಒಳಗೆ ಕಾಲಿಟ್ಟಿದ್ದರು. ಆದರೆ ಈ ಬಾರಿ ಕೇವಲ ಮೂರೇ ತಿಂಗಳಲ್ಲಿ ಉಗ್ರರ ಉಪಟಣ ಮಿತಿ ಮೀರಿದೆ. ಭಯೋತ್ಪಾದನೆಗೆ ಹಣ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಹಣದ ಹರಿಯುವಿಕೆ ಮೇಲೆ ಕಣ್ಣಿಡುವ ಜಾಗತಿಕ ಸಂಸ್ಥೆ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಪಾಕಿಸ್ಥಾನ ವಿರುದ್ಧ ನಿಲುವು ತಳೆದಿತ್ತು.

ಪಾಕಿಸ್ತಾನಕ್ಕೆ ಕಪ್ಪುಪಟ್ಟಿ ಎಚ್ಚರಿಕೆ

ಪಾಕಿಸ್ತಾನಕ್ಕೆ ಕಪ್ಪುಪಟ್ಟಿ ಎಚ್ಚರಿಕೆ

ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದರೆ ಪಾಕಿಸ್ತಾನವನ್ನು ಜಾಗತಿಕ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿತ್ತು. ಇದರಿಂದಾಗಿ ಮೇ ತಿಂಗಳಿನಿಂದ ಜುಲೈ ತಿಂಗಳವರೆಗೆ ಉಗ್ರರ ನುಸುಳುವಿಕೆ ಕೊಂಚ ಮಟ್ಟಿಗೆ ತಗ್ಗಿತ್ತು. ಆದರೆ ಆಗಸ್ಟ್ 5ರಿಂದ ಪಾಕ್ ಬೆಂಬಲಿತ ಉಗ್ರ ಸಂಘಟನೆಗಳು ಮತ್ತೆ ಸಕ್ರಿಯವಾಗಿವೆ. ಈ ಮೂರು ತಿಂಗಳ ಅವಧಿಯಲ್ಲಿ ಕಾಶ್ಮೀರದಲ್ಲಿ ನಿರಂತರವಾಗಿ ಎನ್‌ಕೌಂಟರ್‌ ನಡೆಯುತ್ತಲೇ ಇದೆ.

25 ಕಳ್ಳದಾರಿಗಳಿವೆ

25 ಕಳ್ಳದಾರಿಗಳಿವೆ

ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿ ಒಳಗೊಂಡಂತೆ ಕಣಿವೆ ರಾಜ್ಯದ 25 ಕಡೆ ಉಗ್ರರ ಕಳ್ಳದಾರಿಗಳನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿವೆ. ಅಚ್ಚರಿ ಎಂದರೆ ಗಡಿ ನಿಯಂತ್ರಣ ರೇಖೆ ಸೇರಿದಂತೆ ಈ ಪ್ರದೇಶಗಳಲ್ಲಿ ಮೂರು ಹಂತದ ಭದ್ರತಾ ಏರ್ಪಾಡುಗಳಿದ್ದರೂ ಭಯೋತ್ಪಾದಕರು ತಮ್ಮ ಕೈ ಚಳಕ ತೋರಿಸಿ ಗಡಿಯೊಳಗೆ ನುಸುಳುತ್ತಿದ್ದಾರೆ. ಭಾರತೀಯ ಸೇನೆ, ಗಡಿ ಭದ್ರತಾ ಪಡೆ ಹಾಗೂ ಗ್ರಾಮ ರಕ್ಷಣಾ ಸಮಿತಿ ಸೇರಿದಂತೆ ಹಲವು ಕೇಂದ್ರೀಯ ಪಡೆಗಳು ನಿರಂತರವಾಗಿ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ.

English summary
Since August 5 35 Terrorists Have Infiltrated . Three months after the abrogation of Article 370 in Jammu and Kashmir, Pakistan-based terrorist groups have managed to infiltrate nearly 135 of their men into the Valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X