ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಹ್ಲಾ ರಶೀದ್ ವಿರುದ್ಧ ಅಪ್ಪನ ಗಂಭೀರ ಆರೋಪ: ತನಿಖೆ ನಡೆಸಲು ಒತ್ತಾಯ

|
Google Oneindia Kannada News

ಶ್ರೀನಗರ, ಡಿಸೆಂಬರ್ 1: ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಳೆದ ವರ್ಷ ನಡೆದ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಎನ್‌ಯು ಹಳೆ ವಿದ್ಯಾರ್ಥಿ ಒಕ್ಕೂಟದ ಶೆಹ್ಲಾ ರಶೀದ್ ವಿರುದ್ಧ ದೇಶ ವಿರೋಧಿ ಚಟುವಟಿಕೆಗಳ ತನಿಖೆ ನಡೆಸುವಂತೆ ಸ್ವತಃ ಆಕೆಯ ತಂದೆ ಪತ್ರ ಬರೆದಿದ್ದಾರೆ.

ಶೆಹ್ಲಾ ರಶೀದ್ ತಂದೆ ಅಬ್ದುಲ್ ರಶೀದ್ ಶೋರಾ ಅವರು ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಮಗಳ ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಮಗಳು ಶೆಹ್ಲಾ ರಶೀದ್‌ರಿಂದ ತಮಗೆ ಜೀವ ಬೆದರಿಕೆ ಬರುತ್ತಿದೆ. ಆಕೆಗೆ ಹಿರಿಯ ಮಗಳು ಅಸ್ಮಾ ರಶೀದ್ ಮತ್ತು ಪತ್ನಿ ಜುಬೈದಾ ಶೋರಾ ಅಲ್ಲದೆ ಆಕೆಯ ಭದ್ರತಾ ಸಿಬ್ಬಂದಿ ಸಕೀಬ್ ಅಹ್ಮದ್‌ ಬೆಂಬಲವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ನಾಗರಿಕರ ಮೇಲೆ ದೌರ್ಜನ್ಯ: ಶೆಹ್ಲಾ ರಶೀದ್ ಆರೋಪ ನಿರಾಕರಿಸಿದ ಸೇನೆನಾಗರಿಕರ ಮೇಲೆ ದೌರ್ಜನ್ಯ: ಶೆಹ್ಲಾ ರಶೀದ್ ಆರೋಪ ನಿರಾಕರಿಸಿದ ಸೇನೆ

'ಈ ಬೆದರಿಕೆಗಳು 2017ರಲ್ಲಿ ಆರಂಭವಾದವು. ಶೆಹ್ಲಾ ಆಗ ಇದ್ದಕ್ಕಿದ್ದಂತೆ ಕಾಶ್ಮೀರ ರಾಜಕಾರಣಕ್ಕೆ ಇಳಿದಿದ್ದಳು. ಭಯೋತ್ಪಾದನೆಗೆ ಹಣ ಸಂಗ್ರಹಿಸಿದ ಪ್ರಕರಣದಲ್ಲಿ ಜಹೂರ್ ವಟಾಲಿಯನ್ನು ಬಂಧಿಸುವ ಎರಡು ತಿಂಗಳ ಮುಂಚೆಯಷ್ಟೇ ಆಕೆ ರಾಜಕೀಯಕ್ಕೆ ಇಳಿದಿದ್ದಳು. 2017ರ ಜೂನ್‌ನಲ್ಲಿ ವಟಾಲಿ ಮತ್ತು ಮಾಜಿ ಶಾಸಕ ಎಂಜಿನಿಯರ್ ರಶೀದ್ ನನ್ನನ್ನು ಕರೆಸಿದ್ದರು. ಶೆಹ್ಲಾ ಈ ಪಾತಕಿಗಳನ್ನು ಸೇರಿಕೊಳ್ಳುವಂತೆ ನನಗೆ 3 ಕೋಟಿ ಆಫರ್ ನೀಡಿದ್ದರು' ಎಂದು ರಶೀದ್ ಪತ್ರದಲ್ಲಿ ಹೇಳಿದ್ದಾರೆ. ಮುಂದೆ ಓದಿ.

ದೇಶವಿರೋಧಿ ಚಟುವಟಿಕೆ ನಡೆಯುತ್ತಿದೆ

ದೇಶವಿರೋಧಿ ಚಟುವಟಿಕೆ ನಡೆಯುತ್ತಿದೆ

ಆ ಹಣವು ಅಕ್ರಮ ಮೂಲಗಳಿಂದ ಬಂದಿರುವುದರಿಂದ ಮತ್ತು ತಮ್ಮನ್ನು ಅಕ್ರಮ ಚಟುವಟಿಕೆಗಳಿಗೆ ಬಳಸುವ ಸಾಧ್ಯತೆ ಇರುವುದರಿಂದ ಅದನ್ನು ಸ್ವೀಕರಿಸದಂತೆ ಮಗಳಿಗೆ ಹೇಳಿದ್ದಾಗಿ ತಿಳಿಸಿದ್ದಾರೆ.

ತಮ್ಮ ಮನೆಯಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದು, ತಮ್ಮ ಮಗಳು ತಮ್ಮನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದ್ದಳು ಎಂದು ಅವರು ಆರೋಪಿಸಿದ್ದಾರೆ. ಅಪ್ಪನಿಂದ ದೂರವಾಗಿರುವ ಶೆಹ್ಲಾ, ಟ್ವಿಟ್ಟರ್‌ನಲ್ಲಿ ಆರೋಪಗಳನ್ನು ನಿರಾಕರಿಸಿದ್ದಾರೆ.

ದೂರಿಗೆ ಪ್ರತಿಕ್ರಿಯೆ ಇದು

ದೂರಿಗೆ ಪ್ರತಿಕ್ರಿಯೆ ಇದು

'ನನ್ನ ತಂದೆ ನನ್ನ ಮೇಲೆ, ಅಮ್ಮ ಮತ್ತು ಸಹೋದರಿಯ ವಿರುದ್ಧ ಕೆಟ್ಟ ಆರೋಪಗಳನ್ನು ಮಾಡುವ ವಿಡಿಯೋವನ್ನು ನಿಮ್ಮಲ್ಲಿ ಅನೇಕರು ನೋಡಿರಬಹುದು. ಸಂಕ್ಷಿಪ್ತ ಮತ್ತು ನೇರವಾಗಿ ಹೇಳುತ್ತೇನೆ, ಅವರು ಪತ್ನಿ ಪೀಡಕ ಮತ್ತು ನಿಂದಕ, ನೀತಿಭ್ರಷ್ಟ ವ್ಯಕ್ತಿ. ನಾವು ಕೊನೆಗೂ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೆವು. ಅದಕ್ಕೆ ಆತನ ಪ್ರತಿಕ್ರಿಯೆ ಇದು' ಎಂದು ಶೆಹ್ಲಾ ಟ್ವೀಟ್ ಮಾಡಿದ್ದಾರೆ.

ಯೋಧರ ಬಗ್ಗೆ ಸುಳ್ಳು ಆರೋಪ: ಶೆಹ್ಲಾ ರಶೀದ್ ವಿರುದ್ಧ ಕ್ರಿಮಿನಲ್ ಕೇಸ್ಯೋಧರ ಬಗ್ಗೆ ಸುಳ್ಳು ಆರೋಪ: ಶೆಹ್ಲಾ ರಶೀದ್ ವಿರುದ್ಧ ಕ್ರಿಮಿನಲ್ ಕೇಸ್

ಶೆಹ್ಲಾ ರಶೀದ್ ಆರೋಪ

ಶೆಹ್ಲಾ ರಶೀದ್ ಆರೋಪ

'ನಾವು ಕುಟುಂಬದ ಆಪ್ತರ ಸಾವಿನ ದುಃಖದಲ್ಲಿದ್ದರೆ ನಮ್ಮ ತಂದೆ ಅಬ್ದುಲ್ ರಶೀದ್ ಶೋರಾ ಅವರು ಈ ಸಮಯದಲ್ಲಿ ಅತ್ಯಂತ ಕೀಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದು ಅತೀವ ದುಃಖಕರವಾಗಿದೆ. ಇದು ನನ್ನ ಕುಟುಂಬದ ವಿಚಾರವಾಗಿದ್ದರೂ ಈ ಆರೋಪಗಳು ಬಹಳ ಗಂಭೀರ ಸ್ವರೂಪದ್ದಾಗಿರುವುದರಿಂದ ನಾನು ಇಲ್ಲಿ ಪ್ರತಿಕ್ರಿಯೆ ನೀಡಬೇಕಿದೆ. ಸುದೀರ್ಘಕಾಲದಿಂದ ನಮಗೆ ಹಿಂಸೆ ನೀಡುತ್ತಿರುವ ಅಪ್ಪನ ವಿರುದ್ಧ ಕೋರ್ಟ್‌ನಲ್ಲಿ ಕೌಟುಂಬಿಕ ದೌರ್ಜನ್ಯ ದೂರು ಸಲ್ಲಿಸಿದ್ದೆವು. ನಾವು ಚಿಕ್ಕವರಾಗಿದ್ದಾಗ ಅಮ್ಮ ಈ ಹಿಂಸೆಗಳನ್ನು ಸಹಿಸಿಕೊಂಡಿದ್ದರು. ಆಗ ನಮಗೆ ಅವರನ್ನು ರಕ್ಷಿಸಲು ಆಗಿರಲಿಲ್ಲ. ಈಗ ನಾವು ಅಪ್ಪನಿಗೆ ತಿರುಗಿಬಿದ್ದಿದ್ದೇವೆ. ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ಶೆಹ್ಲಾ ಹೇಳಿದ್ದಾರೆ.

ಐಎಎಸ್ ಟಾಪರ್ ಹೆಸರು

ಐಎಎಸ್ ಟಾಪರ್ ಹೆಸರು

ಈ ಘಟನೆಯಲ್ಲಿ ತಮ್ಮ ಹೆಸರು ಕೇಳಿಬಂದಿರುವುದಕ್ಕೆ 2010ರ ಐಎಎಸ್ ಟಾಪರ್ ಶಾ ಫೈಸಲ್ ಸ್ಪಷ್ಟನೆ ನೀಡಿದ್ದಾರೆ. ಎರಡು ವರ್ಷಕ್ಕೂ ಹಿಂದೆ ರಶೀದ್ ಜತೆ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್‌ ಆರಂಭಿಸಿದ್ದ ಫೈಸಲ್, ಈ ಕುಟುಂಬದ ವಿವಾದದಲ್ಲಿ ತಮ್ಮ ಹೆಸರನ್ನು ಎಳೆಯದಂತೆ ಟ್ವೀಟ್ ಮಾಡಿದ್ದಾರೆ. ನನ್ನ ಮಾಜಿ ಸಹೋದ್ಯೋಗಿಯ ಕುಟುಂಬದ ವಿವಾದದಲ್ಲಿ ನನ್ನ ಹೆಸರನ್ನು ಎಳೆಯಲಾಗಿದೆ. ನಾನು ಯಾವುದೇ ಭಯೋತ್ಪಾದನಾ ಆರೋಪಿ ವ್ಯಕ್ತಿಯನ್ನು ಭೇಟಿ ಮಾಡಿಲ್ಲ ಅಥವಾ ಸಂಪರ್ಕಿಸಿಲ್ಲ ಎಂದು ಅವರು ಹೇಳಿದ್ದಾರೆ.

English summary
Shehla Rashid's father Abdul Rashid Shora, in a letter to DGP Dilbag Singh urged to probe into the anti national activities of his daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X