• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Breaking; ಲಡಾಖ್‌ನಲ್ಲಿ ಸೇನಾ ವಾಹನ ಅಪಘಾತ: ಏಳು ಯೋಧರ ಸಾವು

|
Google Oneindia Kannada News

ಲಡಾಖ್, ಮೇ 27: ಸೇನಾ ವಾಹನವೊಂದು ನದಿಯೊಳಗೆ ಬಿದ್ದು ಏಳು ಸೈನಿಕರು ಮೃತಪಟ್ಟ ಘಟನೆ ಲಡಾಖ್‌ನಲ್ಲಿ ಶುಕ್ರವಾರ ಸಂಭವಿಸಿರುವುದು ವರದಿಯಾಗಿದೆ.

ಲೋಕಸಭೆ ಚುನಾವಣೆ: ತೃತೀಯ ರಂಗದತ್ತ ಜೆಡಿಎಸ್ ಉತ್ಸುಕಲೋಕಸಭೆ ಚುನಾವಣೆ: ತೃತೀಯ ರಂಗದತ್ತ ಜೆಡಿಎಸ್ ಉತ್ಸುಕ

ಅಪಘಾತಕ್ಕೊಳಗಾದ ಸೇನಾ ವಾಹನದಲ್ಲಿ ಒಟ್ಟು 26 ಸೈನಿಕರಿದ್ದರೆನ್ನಲಾಗಿದೆ. ಶೈಲೋಕ್ ನದಿಗೆ ಈ ವಾಹನ ಉರುಳಿಬಿದ್ದಿರುವುದು ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿಯಾಗಿದೆ.

ಲಡಾಕ್‌ನ ತುರ್ಟುಕ್ ಸೆಕ್ಟರ್‌ನಲ್ಲಿ ಘಟನೆ ಸಂಭವಿಸಿದ್ದು, ಸೇನಾ ಬಸ್ ಚಾಲಕನ ನಿಯಂತ್ರಣ ತಪ್ಪಿ ೫೦ ಅಡಿ ಆಳದ ಕಂದಕದ ಕೆಳಗಿದ್ದ ನದಿಗೆ ಉರುಳಿತು ಎಂದು ಹೇಳಲಾಗಿದೆ. ಈ ದುರಂತದಲ್ಲಿ ಇನ್ನೂ ಬಹಳಷ್ಟು ಮಂದಿಗೆ ಗಾಯವಾಗಿದೆ. ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಸಾವಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಪಾರ್ತಪುರ್ ಎಂಬಲ್ಲಿರುವ ಟ್ರಾನ್ಸಿಟ್ ಕ್ಯಾಂಪ್‌ನಿಂದ ಹೊರಟು ಹನೀಫ್ ಸಬ್ ಸೆಕ್ಟರ್‌ನಲ್ಲಿನ ಮುನ್ನಡೆ ತಾಣಕ್ಕೆ ಹೋಗುತ್ತಿದ್ದ ವಾಹನದಲ್ಲಿ ೨೬ ಸೈನಿಕರಿದ್ದರು. ಏಳು ಮಂದಿ ಸತ್ತಿರುವುದು ದೃಢಪಟ್ಟಿದೆ. ಇನ್ನುಳಿದವರೆಲ್ಲರಿಗೂ ಗಾಯಗಳಾಗಿವೆ. ಹೆಚ್ಚು ಗಂಭೀರವಾಗಿ ಗಾಯಗೊಂಡವರನ್ನು ವೆಸ್ಟರ್ನ್ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೂ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Indian Army vehicle falls into Shylok river in Ladakh. Seven soldiers die in the accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X