• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರ; ಎನ್‌ಕೌಂಟರ್‌ನಲ್ಲಿ ಏಳು ಉಗ್ರರ ಹತ್ಯೆ

|
Google Oneindia Kannada News

ಶ್ರೀನಗರ, ಏಪ್ರಿಲ್ 9: ಜಮ್ಮು ಕಾಶ್ಮೀರದ ಶೋಪಿಯಾನ್ ಹಾಗೂ ಪುಲ್ವಾಮಾ ಜಿಲ್ಲೆಯಲ್ಲಿ ನಡೆಸಿದ ಎರಡು ಎನ್‌ಕೌಂಟರ್‌ನಲ್ಲಿ ಭಯೋತ್ಪಾದನಾ ಸಂಘಟನೆ ಅನ್ಸಾರ್ ಘಜ್ವಾತುಲ್ ಹಿಂದ್ ಮುಖ್ಯಸ್ಥ ಇಮ್ತಿಯಾಜ್ ಅಹ್ಮದ್ ಶಾ ಒಳಗೊಂಡಂತೆ ಏಳು ಮಂದಿ ಉಗ್ರರನ್ನು ಹೊಡೆದುರುಳಿಸಿರುವುದಾಗಿ ತಿಳಿದುಬಂದಿದೆ.

ಶೋಪಿಯಾನ್ ಪಟ್ಟಣದಲ್ಲಿ ಗುರುವಾರ ಸಂಜೆ ಭದ್ರತಾ ಪಡೆ ಎನ್‌ಕೌಂಟರ್ ನಡೆಸಿದ್ದು, ಐದು ಉಗ್ರರನ್ನು ಹತ್ಯೆ ಮಾಡಿತ್ತು. ಶುಕ್ರವಾರ ಇನ್ನಿಬ್ಬರನ್ನು ತ್ರಾಲ್ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ.

ಪಾಕಿಸ್ತಾನ: ದ್ವೇಷ ಹರಡುತ್ತಿದ್ದ ಐವರು ಐಎಸ್ಐಎಸ್ ಭಯೋತ್ಪಾದಕರ ಬಂಧನ ಪಾಕಿಸ್ತಾನ: ದ್ವೇಷ ಹರಡುತ್ತಿದ್ದ ಐವರು ಐಎಸ್ಐಎಸ್ ಭಯೋತ್ಪಾದಕರ ಬಂಧನ

ಶೋಪಿಯಾನ್‌ನಲ್ಲಿ ಮಸೀದಿಯೊಳಗೆ ಭಯೋತ್ಪಾದಕರಿಬ್ಬರು ಅಡಗಿ ಕುಳಿತಿದ್ದು, ಅವರನ್ನು ಶರಣಾಗತಿ ಮಾಡುವ ಪ್ರಯತ್ನವನ್ನೂ ನಡೆಸಲಾಯಿತು. ಅವರು ಕೂಡ ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸ್ಥಳವನ್ನು ಸುತ್ತುವರೆದ ಭದ್ರತಾ ಪಡೆ ಸಿಬ್ಬಂದಿಆ ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

English summary
Seven terrorists killed by securtiy forces in two encounters at Jammu Kashmir's shopian and pulwama
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X