ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ರತ್ಯೇಕತಾವಾದಿಗಳನ್ನು ದಕ್ಷಿಣ ಭಾರತದ ಜೈಲಿಗೆ ಹಾಕಿ'

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

Pulwama : ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನ ವಾಪಸ್ ಪಡೆದ ರಾಜ್ಯ ಸರ್ಕಾರ | Oneindia Kannada

ನವದೆಹಲಿ, ಫೆಬ್ರವರಿ 18: ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರ ಪಾಕಿಸ್ತಾನ ಪರ ದನಿಯೆತ್ತುವರ ಕೊರಳನ್ನು ಬಿಗಿಗೊಳಿಸುತ್ತಿರುವ ಮೋದಿ ಸರ್ಕಾರ, ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ವಿಶೇಷ ಭದ್ರತೆಯನ್ನು ಹಿಂಪಡೆದಿದೆ. ಈ ಬೆಳವಣಿಗೆಯನ್ನು R&AW ಸಂಸ್ಥೆಯ ಮಾಹಿ ಅಧಿಕಾರಿ ಅಮರ್ ಸ್ವಾಗತಿಸಿ, ಒನ್ಇಂಡಿಯಾ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಿರ್ವಾಜ್ ಉಮರ್ ಫಾರೂಕ್, ಅಬ್ಧುಲ್ ಗನಿಭಟ್, ಬಿಲಾಲ್ ಲೋನ್, ಹಶೀಮ್ ಖುರೇಷಿ ಮತ್ತು ಶಬ್ಬೀರ್ ಶಾ ಅವರಿಗೆ ನೀಡಲಾಗಿದ್ದ ವಿಶೇಷ ಸವಲತ್ತು ಮತ್ತು ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದೆ.

 ಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳು ಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳು

ಪೊಲೀಸ್ ಹೆಡ್ ಕ್ವಾರ್ಟಸ್ ಈ ಬಗ್ಗೆ ನಿಗಾವಹಿಸಿದ್ದು, ಈ ಐವರಲ್ಲದೆ ಇನ್ನಿತರ ಪ್ರತ್ಯೆಕತಾವಾದಿಗಳನ್ನು ಗುರುತಿಸಿ ಅವರಿಗೆ ನೀಡಿರುವ ಸೌಲಭ್ಯವನ್ನು ಹಿಂಪಡೆಯಲಾಗುವುದು ಎಂದು ರಾಜ್ಯಪಾಲರ ಸಹಿ ಇರುವ ಆದೇಶದ ಪ್ರತಿಯಲ್ಲಿ ಹೇಳಲಾಗಿದೆ.

 Security withdrawn, now lodge Separatists in South Indian jails says former R&AW officer

2004ರಲ್ಲಿ ಪ್ರತ್ಯೇಕತಾವಾದಿಗಳಿಗೆ ವಿಶೇಷ ಭದ್ರತೆ ನೀಡುವ ನಿರ್ಣಯ ಕೈಗೊಳ್ಳಲಾಯಿತು. ಎಸ್ಎಎಸ್ ಗುಲಾನಿ ನೇತೃತ್ವದ ಗುಂಪು ತಮ್ಮ ನಿಲುವಿಗೆ ಬದ್ಧವಾಗಿದ್ದು, ಕಾಶ್ಮೀರವನ್ನು ಪ್ರತ್ಯೇಕ ರಾಜ್ಯವನ್ನಾಗಿ ದೆಹಲಿ ಆಡಳಿತ ಒಪ್ಪಿಕೊಳ್ಳಲಿ ಎಂದು ಆಗ್ರಹಿಸಿದರು.

ಆದರೆ, ಮಿರ್ವಾಜ್ ನೇತೃತ್ವದ ಗುಂಪಿನ ಜತೆ ಮಾತುಕತೆ ನಡೆಸಿದ ಅಂದಿನ ಕೇಂದ್ರ ಸರ್ಕಾರವು, ಪ್ರತ್ಯೇಕತಾವಾದಿಗಳಿಗೆ ಈ ವಿಶೇಷ ಸೌಲಭ್ಯ ನೀಡಲು ನಿರ್ಧರಿಸಿತ್ತು.

 ಪುಲ್ವಾಮಾ ಆತ್ಮಾಹುತಿ ದಾಳಿಗೆ ಅಜರ್ ಅದೇಶ ನೀಡಲು ಏನು ಕಾರಣ? ಪುಲ್ವಾಮಾ ಆತ್ಮಾಹುತಿ ದಾಳಿಗೆ ಅಜರ್ ಅದೇಶ ನೀಡಲು ಏನು ಕಾರಣ?

'ರಾ' ಮಾಜಿ ಅಧಿಕಾರಿ ಪ್ರತಿಕ್ರಿಯೆ: ಮೋದಿ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಅಮರ್ ಭೂಷಣ್ ಅವರು, ಈ ನಡೆಯನ್ನು ತುಂಬಾ ಮುಂಚಿತವಾಗಿ ಮಾಡಬೇಕಿತ್ತು. ಎಲ್ಲಾ ಪ್ರತ್ಯೇಕತಾವಾದಿಗಳು, ದೇಶ ವಿರೋಧಿಗಳಿಗೆ ನೀಡುವ ಸವಲತ್ತುಗಳನ್ನು ರದ್ದು ಮಾಡಬೇಕು. ಎಲ್ಲರನ್ನು ಬಂಧಿಸಿ, ದಕ್ಷಿಣ ಭಾರತದ ಜೈಲಿನಲ್ಲಿರಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಪ್ರಕಾರವೆ ಎಲ್ಲವೂ ನಡೆಯಬೇಕು ಎಂದರೆ ಎಂದಿಗೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗದು ಎಂದರು.

ಫೆ.14 ರಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಆವಂತಿಪೊರ ಎಂಬಲ್ಲಿ ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The government has scrapped the security provided to separatists in Jammu and Kashmir. The state administration withdrew the security cover and all other government facilities which were given to Mirwaiz Umar Farooq, Abdul Ghani Bhat, Bilal Lone, Hashim Qureshi and Shabir Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X