• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಗ್ರರಿಂದ ಎಕ್-47ಗಿಂತಲೂ ಹೆಚ್ಚು ಪಿಸ್ತೂಲ್‌ಗಳು ವಶಕ್ಕೆ

|

ನವದೆಹಲಿ, ನವೆಂಬರ್ 09: ಭದ್ರತಾ ಪಡೆಗಳು ಉಗ್ರರಿಂದ ಎಕೆ 47ಗಿಂತಲೂ ಹೆಚ್ಚು ಪಿಸ್ತೂಲುಗಳನ್ನು ವಶಪಡಿಸಿಕೊಂಡಿದೆ.

ಹೀಗಾಗಿ ಉಗ್ರ ಸಂಘಟನೆಗಳಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಎದುರಾಗಿದೆ, ಹೀಗಾಗಿ ಆಕ್ರಮಣಕಾರಿ ರೈಫಲ್ಸ್ ಬದಲಿಗೆ ಪಿಸ್ತೂಲ್ ಗಳನ್ನು ಬಳಸುತ್ತಿದ್ದಾರೆ ಎಂದು ಉಗ್ರ ನಿಗ್ರಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರ ಸಂಘಟನೆಗಳಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು ಎಕೆ-47 ಹೊಂದಿರುತ್ತಾರೆ. ಆದರೆ, ಯುವ ಮತ್ತು ಹೊಸದಾಗಿ ನೇಮಕವಾದ ಉಗ್ರರಿಗೆ ಪಿಸ್ತೂಲ್ ಗಳನ್ನು ನೀಡಲಾಗುತ್ತಿದೆ. ಆಕ್ರಮಣಕಾರಿ ರೈಫಲ್ಸ್ ಗಳ ಕೊರತೆಯಾದಾಗ ಆಗಾಗ್ಗೆ ಪಿಸ್ತೂಲ್ ಗಳನ್ನು ಬಳಸುವುದನ್ನು ನೋಡುತ್ತಿರುವುದಾಗಿ ಸಿಆರ್ ಪಿಎಫ್ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್ ಎನ್ ಐ ಸುದ್ದಿಸಂಸ್ಥೆ ತಿಳಿಸಿದೆ.

ಈ ವರ್ಷದ ಅಕ್ಟೋಬರ್ 15ರವರೆಗೂ ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ 203 ಪಿಸ್ತೂಲ್ ಗಳು ಮತ್ತು 152 ಎಕೆ-47 ರೈಫಲ್ ಗಳನ್ನು ವಶಪಡಿಸಿಕೊಂಡಿರುವುದಾಗಿ ಭದ್ರತಾ ಪಡೆಗಳಿಂದ ಪಡೆಯಲಾದ ಅಧಿಕೃತ ಮಾಹಿತಿಯನ್ನು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಉಗ್ರರ ದಾಳಿ: ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿ ಎಚ್ಚರಿಕೆ

ಒಟ್ಟಾರೆ 190 ಹಿಂಸಾತ್ಮಕ ಘಟನೆಗಳಲ್ಲಿ ಗಡಿಯಲ್ಲಿ ಗುಂಡಿನ ದಾಳಿಯ ಕಾರಣ 100 ಘಟನೆಗಳು ದಾಖಲಾಗಿವೆ. ಉಗ್ರರು 44 ಗ್ರೇನೆಡ್ ದಾಳಿ, 1 ಐಇಡಿ ಸ್ಫೋಟ ನಡೆಸಿರುವುದಾಗಿ ಮಾಹಿತಿ ತಿಳಿದುಬಂದಿದೆ. ಎಲ್ಲಾ ಎನ್ ಕೌಂಟರ್ ಗಳಲ್ಲಿ ವಶಪಡಿಸಿಕೊಂಡಿ ಪಿಸ್ತೂಲ್ ಗಳು ಒಂದೇ ರೀತಿಯಲ್ಲಿ ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

English summary
Security forces recover more pistols than AK-47s from J-K terrorists, indicates shortage of weapons in terror outfits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X