• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು: ಟೋಲ್ ಪ್ಲಾಜಾ ಬಳಿ 4 ಉಗ್ರರ ಎನ್‌ಕೌಂಟರ್

|

ಶ್ರೀನಗರ, ನವೆಂಬರ್ 19: ಜಮ್ಮುವಿನಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಗುಂಡಿನ ಮೊರೆತ ಕೇಳಿಸಿದೆ. ಶಂಕಿತ ಉಗ್ರರ ಮೇಲೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ದಾಳಿಯಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿದೆ.

ಜಮ್ಮುವಿನ ನಗ್ರೋಟಾದಲ್ಲಿನ ಬಾನ್ ಟೋಲ್ ಪ್ಲಾಜಾದ ಬಳಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಹೊಡೆದುರುಳಿಸಿದೆ. ಕಾರ್ಯಾಚರಣೆಯ ಸಲುವಾಗಿ ಭದ್ರತಾ ಪಡೆಗಳು ಮೊದಲೇ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿತ್ತು. ಹಲವು ಗಂಟೆಗಳವರೆಗೆ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯಿತು.

ಭದ್ರತಾ ಪಡೆ ಮೇಲಿನ ಉಗ್ರರ ಗ್ರೆನೇಡ್ ದಾಳಿ: ಗುರಿ ತಪ್ಪಿ 12 ನಾಗರಿಕರಿಗೆ ಗಾಯ

ಬಾನ್ ಟೋಲ್ ಪ್ಲಾಜಾದ ಬಳಿ ನಾಕಾ ಬಂದಿ ಹಾಕಿದ್ದ ಭದ್ರತಾ ಪಡೆಗಳು ಅಲ್ಲಿ ಸಾಗುವ ಪ್ರತಿ ವಾಹನಗಳನ್ನೂ ತಪಾಸಣೆ ನಡೆಸುತ್ತಿದ್ದರು. ಆಗ ಭಯೋತ್ಪಾದಕರ ಗುಂಪೊಂದು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಸಮೀಪದ ಅರಣ್ಯ ಪ್ರದೇಶದೊಳಗೆ ನುಗಿದ್ದ ಭಯೋತ್ಪಾದಕರ ಬೇಟೆಗೆ ಎನ್‌ಕೌಂಟರ್ ಶುರುವಾಗತ್ತು. ನಸುಕಿನ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

Video: ಭಾರತದ ಪ್ರತಿದಾಳಿಗೆ ಪಾಕ್ ಸೇನಾ ಬಂಕರ್ ನಾಶ, 8 ಯೋಧರು ಸಾವು

ಬಾನ್ ಟೋಲ್ ಪ್ಲಾಜಾದ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಎಲ್ಲ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Security forces have gunned down 4 terrorists in an encounter at the Ban toll plaza in Jammu-Srinagar national Highway in Jammu's Nagrota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X