ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 144 ಜಾರಿ: ಸ್ತಬ್ಧಗೊಂಡ ಕಣಿವೆ ರಾಜ್ಯ

|
Google Oneindia Kannada News

ಶ್ರೀನಗರ, ಆಗಸ್ಟ್ 5:ಕಣಿವೆ ರಾಜ್ಯದಲ್ಲಿ ಗೊಂದಲ ಹಾಗೂ ಆತಂಕ ಮುಂದುವರೆದ ಬೆನ್ನಲ್ಲೇ ಇಂದು ಬೆಳಗ್ಗೆ 6 ಗಂಟೆಯಿಂದ ಅನ್ವಯವಾಗುವಂತೆ ಶ್ರೀನಗರ ಜಮ್ಮು ಸೇರಿ ರಾಜ್ಯಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ.

ಕಾಶ್ಮೀರದ ವಿಶೇಷ ಸ್ಥಾನಮಾನ, ರಾಜ್ಯದ ತ್ರಿ ವಿಭಜನೆ ಸೇರಿ ಇತರೆ ವಿಚಾರಗಳ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಸಂದೇಹಗಳ ಮಧ್ಯೆಯೇ ಈ ಆದೇಶವಾಗಿದೆ.

ಮೋದಿ ಸರ್ಕಾರದಿಂದ ಇಂದಿನಿಂದ ಆಪರೇಷನ್ ಕಾಶ್ಮೀರ? ಮೋದಿ ಸರ್ಕಾರದಿಂದ ಇಂದಿನಿಂದ ಆಪರೇಷನ್ ಕಾಶ್ಮೀರ?

ಹಾಗೆಯೇ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಗಸ್ಟ್ 5-10ರವರೆಗೆ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ.

Section 144 Imposed on Jammu and Kashmir

ಹಾಗೆಯೇ ರಾಜ್ಯಾದ್ಯಂತ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರತ್ಯೇಕತಾವಾದಿಗಳ ಸಾವು ಸೇರಿ ಇತರೆ ವಿಚಾರಗಳ ಬಗ್ಗೆ ಕಣಿವೆ ರಾಜ್ಯದಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿರುವ ಬೆನ್ನಲ್ಲೇ ಈ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾತೂ ಹಬ್ಬುತ್ತಿದೆ.

ಉದ್ವಿಗ್ನ ಸ್ಥಿತಿ ನಡುವೆ ಕಣಿವೆ ರಾಜ್ಯಕ್ಕೆ ಅಮಿತ್ ಶಾ ಭೇಟಿ ಉದ್ವಿಗ್ನ ಸ್ಥಿತಿ ನಡುವೆ ಕಣಿವೆ ರಾಜ್ಯಕ್ಕೆ ಅಮಿತ್ ಶಾ ಭೇಟಿ

ಸಾಮಾನ್ಯವಾಗಿ ಬುಧವಾರ ಅಥವಾ ಗುರುವಾರ ನಡೆಯಬೇಕಿದ್ದ, ಕೇಂದ್ರ ಸಚಿವ ಸಂಪುಟ ಸಭೆ ಇಂದು ಸಂಸತ್ ಭವನದಲ್ಲಿ ನಡೆಯುತ್ತಿದೆ.ಕಾಶ್ಮೀರ ವಿಚಾರದ ಬಗ್ಗೆ ಈ ಸಭೆಯಲ್ಲಿ ಏನಾದರೂ ತೀರ್ಮಾನ ಮಾಡಬಹುದೇನೋ ಎಂಬ ಸಂದೇಹಗಳು ವ್ಯಕ್ತವಾಗುತ್ತಿದೆ.

ಆದರೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಏನು ಸ್ಪಷ್ಟನೆ ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

English summary
Operation Jammu and Kashmir have begun according to top sources, section 144 imposed on Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X