ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆಯಿಂದ ಮತ್ತೊಂದು ಸುರಂಗ ಪತ್ತೆ

|
Google Oneindia Kannada News

ಶ್ರೀನಗರ, ಜನವರಿ 23: ಉಗ್ರರು ಗಡಿಯೊಳಗೆ ನುಸುಳಲು ಅನುಕೂಲವಾಗುವಂತೆ ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಸಮೀಪ ಕೊರೆದಿದ್ದ ಸುರಂಗವನ್ನು ಗಡಿ ಭದ್ರಾತಾ ಪಡೆ ಶನಿವಾರ ಪತ್ತೆ ಮಾಡಿದೆ. ಗಣರಾಜ್ಯೋತ್ಸವದ ಸಲುವಾಗಿ ಭದ್ರತಾ ಪಡೆ ಹಮ್ಮಿಕೊಂಡಿರುವ ಸುರಂಗ ಪತ್ತೆ ಕಾರ್ಯಾಚರಣೆ ವೇಳೆ ಈ ರಹಸ್ಯ ಸುರಂಗ ಕಡುಬಂದಿದೆ.

ಉಗ್ರರು ಗಡಿಯೊಳಗೆ ನುಸುಳಲು ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಪನ್ಸಾರ್ ಪ್ರದೇಶದ ಕಥುವಾ ಜಿಲ್ಲೆಯಲ್ಲಿ ಈ ಸುರಂಗ ಕೊರೆದಿದೆ ಎಂದು ಗಡಿ ಭದ್ರತಾ ಪಡೆ ವಕ್ತಾರರು ತಿಳಿಸಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಹಿರಾನಗರ ಪ್ರದೇಶದಲ್ಲಿ ಪತ್ತೆ ಹಚ್ಚಿರುವ ಎರಡನೇ ಸುರಂಗ ಇದಾಗಿದೆ. ಕಳೆದ ಆರು ತಿಂಗಳುಗಳ ಕಾರ್ಯಾಚರಣೆಯಲ್ಲಿ ಪತ್ತೆಯಾದ ನಾಲ್ಕನೇ ಸುರಂಗ ಇದಾಗಿದೆ.

"ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿನ ದಾಳಿ ನಡೆದಿರುವುದೇ ಸುಳ್ಳು"

ಶನಿವಾರ ಪತ್ತೆಯಾಗಿರುವ ಸುರಂಗ 150 ಮೀಟರ್ ಉದ್ದವಿದ್ದು, 30 ಅಡಿ ಆಳವಿದೆ. ಪಾಕಿಸ್ತಾನದ ಕಡೆಯಿಂದ ಸುರಂಗ ಕೊರೆಯಲಾಗಿದೆ. ಜನವರಿ 13ರಂದು ಬೋಬಿಯಾನ ಗ್ರಾಮದಲ್ಲಿ 150 ಮೀಟರ್ ಉದ್ದದ ಸುರಂಗ ಪತ್ತೆಹಚ್ಚಲಾಗಿತ್ತು.

Second Terror Tunnel Busted In Kathua At Jammu Kashmir

ಶನಿವಾರ ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಜಿಲ್ಲೆಯ ಸುರಂಕೋಟೆಯಲ್ಲಿ ಭದ್ರತಾ ಪಡೆ ಕೈಗೊಂಡಿದ್ದ ಮತ್ತೊಂದು ಕಾರ್ಯಾಚರಣೆಯಲ್ಲಿ ಉಗ್ರರ ಅಡಗುತಾಣವನ್ನು ಪತ್ತೆಹಚ್ಚಲಾಗಿದೆ. ಸ್ಥಳದಲ್ಲಿ ಎಕೆ 47, ಮೂರು ಪಿಸ್ತೂಲುಗಳು, ಮೂರು ಎಕೆ ಮ್ಯಾಗ್, ಒಂದು UBGL ಗ್ರೆನೇಡ್, ನಾಲ್ಕು ಗ್ರೆನೇಟ್ ಹಾಗೂ ಒಂದು ಆರ್ ಎಸ್ ಮೋಟೊಟೊಲಾ ಒಳಗೊಂಡಂತೆ ಹಲವು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
Border Security Forces has busted a second terror tunnel in Pansar area in Jammu and Kashmir's Kathua district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X