ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರದಲ್ಲಿ ಸೋಮವಾರದಿಂದ ಶಾಲೆ, ಸರ್ಕಾರಿ ಕಚೇರಿಗಳು ಓಪನ್

|
Google Oneindia Kannada News

ನವದೆಹಲಿ, ಆಗಸ್ಟ್ 16: ಜಮ್ಮು ಕಾಶ್ಮೀರದಲ್ಲಿ ಬರುವ ಸೋಮವಾರದಿಂದ ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು ತೆರೆಯಲಿವೆ ಎಂದು ಜಮ್ಮು ಕಾಶ್ಮೀರ ಆಡಳಿತ ತಿಳಿಸಿದೆ.

ಆದರೆ ಮೊಬೈಲ್ ಫೋನ್‌, ಲ್ಯಾಂಡ್‌ಲೈನ್ ಸೇವೆ, ಟಂತರ್ಜಾಲ ಸೇವೆಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದೆ. ಮುಂದಿನ ಕೆಲವು ದಿನಗಳಲ್ಲಿ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಕಾಶ್ಮೀರಿಗಳನ್ನು ಪ್ರಾಣಿಗಳಂತೆ ಬಂಧಿಸಿಟ್ಟಿದ್ದಾರೆ: ಅಮಿತ್‌ ಶಾ ಗೆ ಮುಫ್ತಿ ಮಗಳ ಪತ್ರ ಕಾಶ್ಮೀರಿಗಳನ್ನು ಪ್ರಾಣಿಗಳಂತೆ ಬಂಧಿಸಿಟ್ಟಿದ್ದಾರೆ: ಅಮಿತ್‌ ಶಾ ಗೆ ಮುಫ್ತಿ ಮಗಳ ಪತ್ರ

ಹಾಕಿರುವ ನಿರ್ಬಂಧಗಳನ್ನು ಶೀಘ್ರ ತೆರವುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಕೇಳಿದ್ದ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡಿತ್ತು. ಸರ್ಕಾರಿ ಕಚೇರಿಗಳನ್ನು ಇಂದಿನಿಂದಲೇ ತೆರೆಯುವಂತೆ ಗವರ್ನರ್ ಸತ್ಯಪಾಲ್ ಮಲಿಕ್ ಸೂಚನೆ ನೀಡಿದ್ದಾರೆ.

Schools Colleges Offices to Reopen on Monday In Kashmir

ನಿತ್ಯ ಅಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಗ್ರೌಂಡ್ ರಿಪೋರ್ಟ್ ಪಡೆಯಲಾಗುತ್ತದೆ. ಮಾಧ್ಯಮ ನಿರ್ಬಂಧ ಇನ್ನಿತರೆ ವಿಚಾರ ಕುರಿತು ಮುಂದಿನ ವಿಚಾರಣೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

OneIndia exclusive: ಕಾಶ್ಮೀರದಲ್ಲಿ ಕರ್ತವ್ಯನಿರತ ಪತಿಗೆ ತಲುಪುತ್ತಿಲ್ಲ ಪತ್ನಿಯ ಪ್ರೀತಿಯ ಕರೆOneIndia exclusive: ಕಾಶ್ಮೀರದಲ್ಲಿ ಕರ್ತವ್ಯನಿರತ ಪತಿಗೆ ತಲುಪುತ್ತಿಲ್ಲ ಪತ್ನಿಯ ಪ್ರೀತಿಯ ಕರೆ

ಸರ್ಕಾರವು ಸಂವಿಧಾನದ ವಿಧಿ 370 ರದ್ದುಗೊಳಿಸುವ ಒಂದು ದಿನ ಮುಂಚಿತವಾಗಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಕರ್ಫ್ಯೂ ಹಿಂತೆಗೆಯಲಾಗಿದೆ. ಹೀಗೆ ಹಂತ ಹಂತವಾಗಿ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

English summary
Schools Colleges Offices to Reopen on Monday In Kashmir, Governor Satya Pal Malik has directed the civil secretariat in Srinagar and government offices to resume normal functioning from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X