ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕ್ ಗಡಿಯಲ್ಲಿ ರಬ್ಬರ್ ಬೋಟ್ ಪತ್ತೆ: ಹೈ ಅಲರ್ಟ್

|
Google Oneindia Kannada News

ಶ್ರೀನಗರ, ಸೆಪ್ಟೆಂಬರ್ 12: ಭಾರತ-ಪಾಕಿಸ್ತಾನ ಗಡಿಯಲ್ಲಿ ಸಣ್ಣ ರಬ್ಬರ್ ಬೋಟ್‌ಗಳು ಪತ್ತೆಯಾಗಿರುವ ಕಾರಣ ಹೈ ಅಲರ್ಟ್ ಘೋಷಿಸಲಾಗಿದೆ.

ಗಡಿಯಲ್ಲಿ ಗಸ್ತು ಹೆಚ್ಚಿಸಲಾಗಿದೆ. ಭಯೋತ್ಪಾದಕರು ಭಾರತದೊಳಗೆ ನುಗ್ಗಲು ರಬ್ಬರ್ ಬೋಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ನೀಡಿದೆ.

ಪಿಒಕೆ ಕುರಿತ ಕೇಂದ್ರದ ಯಾವುದೇ ನಿರ್ಧಾರಕ್ಕೂ ನಾವು ಬದ್ಧ: ಬಿಪಿನ್ ರಾವತ್ಪಿಒಕೆ ಕುರಿತ ಕೇಂದ್ರದ ಯಾವುದೇ ನಿರ್ಧಾರಕ್ಕೂ ನಾವು ಬದ್ಧ: ಬಿಪಿನ್ ರಾವತ್

ಅಂತಾರಾಷ್ಟ್ರೀಯ ಗಡಿ ಅಖ್ನೂರ್, ಸಾಂಬಾ, ಕತುವಾ ಬಳಿ 13 ನೀರಿನ ಮೂಲಗಳು ಪತ್ತೆಯಾಗಿವೆ. ಗುರೇಜ್ ಸೆಕ್ಟರ್‌ನ ಕೃಷ್ಣಗಂಗಾ ನದಿ ಹರಿಯುವ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಭಯೋತ್ಪಾದಕರು ಕೃಷ್ಣಾಘಾಟಿ ನದಿ ಕಡೆಯಿಂದಲೇ ಬರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Rubber Boat Found Near LOC

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಾಗಿನಿಂದ ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಗಿ ನಿಂತಿದೆ. ಗಡಿಯಲ್ಲಿ ಹೆಚ್ಚು ಸೇನೆಯನ್ನು ನಿಯೋಜಿಸಿಕೊಂಡಿದೆ. ಅಫ್ಘಾನಿಸ್ತಾನವು ಕೂಡ ಗಡಿಯಲ್ಲಿ ದಾಳಿಗೆ ಎತ್ನಿಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿರುವ ಕಾರಣ ಗಡಿಯಲ್ಲಿ ಹೆಚ್ಚುವರಿಯಾಗಿ 230-280 ಮಂದಿ ಸೈನಿಕರು ತೆರಳಿದ್ದಾರೆ.

ಕಾಶ್ಮೀರದಲ್ಲಿ ಎಕೆ 47 ಹೊತ್ತ ಉಗ್ರರ ಟ್ರಕ್ ಪೊಲೀಸ್ ವಶಕ್ಕೆಕಾಶ್ಮೀರದಲ್ಲಿ ಎಕೆ 47 ಹೊತ್ತ ಉಗ್ರರ ಟ್ರಕ್ ಪೊಲೀಸ್ ವಶಕ್ಕೆ

ಪಾಕಿಸ್ತಾನ ಸ್ಪೈ ಏಜೆನ್ಸಿಯು ಭಯೋತ್ಪಾದಕ ಸಂಘಟನೆಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಪಾಕ್ ಆಕ್ರಮಿತ ಪ್ರದೇಶ(ಪಿಒಕೆ) ಪ್ರದೇಶದ ಕುರಿತು ಕೇಂದ್ರ ಸರ್ಕಾರವು ಏನೇ ತೀರ್ಮಾನ ತೆಗೆದುಕೊಂಡರೂ ನಾವು ಬದ್ಧ ಎಂದು ಭಾರತೀಯ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿರುವ ಬಿಪಿನ್ ಅವರು, ಪಾಕ್ ಆಕ್ರಮಿತ ಪ್ರದೇಶ ಕುರಿತು ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ಸೇನೆಯು ತಯಾರಿದೆ ಎಂದು ತಿಳಿಸಿದ್ದಾರೆ.

ಕಾಶ್ಮೀರ ವಿಚಾರ ICJ ಮುಂದಿಡಲು ಸೂಕ್ತ ಸಾಕ್ಷ್ಯವಿಲ್ಲ ಎಂದ ಪಾಕ್ ವಕೀಲಕಾಶ್ಮೀರ ವಿಚಾರ ICJ ಮುಂದಿಡಲು ಸೂಕ್ತ ಸಾಕ್ಷ್ಯವಿಲ್ಲ ಎಂದ ಪಾಕ್ ವಕೀಲ

ಕಾಶ್ಮೀರದಲ್ಲಿ ಎಕೆ 47 ಹೊತ್ತ ಉಗ್ರರ ಟ್ರಕ್ ಪೊಲೀಸ್ ವಶಕ್ಕೆ ಜಮ್ಮು ಕಾಶ್ಮೀರದ ಕುರಿತು ಮಾತನಾಡಿರುವ ಅವರು, ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸುವುದು ಮುಖ್ಯ ಅದಕ್ಕಾಗಿ ನಾವು ಸಿದ್ಧರಿದ್ದೇವೆ. ಇಷ್ಟು ದಿನ ಭಯೋತ್ಪಾದನೆ ವಿರುದ್ಧ ಸೇನೆ ಹೋರಾಡಿದೆ. ಈಗ ಸರ್ಕಾರವು ಕೆಲವು ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ.ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

English summary
Rubber Boat Found Near LOC, Security forces are on high alert after intelligence agencies spotted small rubber boats at various launch pads near the Line of Control (LoC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X