ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು & ಕಾಶ್ಮೀರಕ್ಕೆ 1350 ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಲೆಫ್ಟಿನೆಂಟ್ ಗವರ್ನರ್

|
Google Oneindia Kannada News

ಜಮ್ಮು&ಕಾಶ್ಮೀರ, ಸೆಪ್ಟೆಂಬರ್ 19: ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯಾಪಾರ ಮತ್ತು ಇತರ ಅನಾರೋಗ್ಯ ಪೀಡಿತ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಸಲುವಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಶನಿವಾರ 1350 ಕೋಟಿ ರೂಪಾಯಿ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ.

ರಾಜಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಲ್.ಜಿ ಸಿನ್ಹಾ, "ಇದು ಕೇವಲ ಒಂದು ಆರಂಭ ಮತ್ತು ಇನ್ನೂ ಹೆಚ್ಚಿನ ಕಾರ್ಯಗಳು ನಡೆಯುತ್ತವೆ" ಎಂದಿದ್ದು, ಒಂದು ನಿರ್ದಿಷ್ಟ ಸಮಯದೊಳಗೆ ವರದಿಯನ್ನು ಸಲ್ಲಿಸಿದ್ದಕ್ಕಾಗಿ ಅವರು ಸಮಿತಿಯನ್ನು ಶ್ಲಾಘಿಸಿದ್ದಾರೆ.

ಜಮ್ಮು ಕಾಶ್ಮೀರ: 3 ಎಲ್‌ಇಟಿ ಉಗ್ರರನ್ನು ಬಂಧಿಸಿದ ಭಾರತೀಯ ಸೇನೆಜಮ್ಮು ಕಾಶ್ಮೀರ: 3 ಎಲ್‌ಇಟಿ ಉಗ್ರರನ್ನು ಬಂಧಿಸಿದ ಭಾರತೀಯ ಸೇನೆ

"ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ವ್ಯಾಪಾರ ಸಮುದಾಯದ ಜನರಿಗೆ 1,350 ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಲು ನನಗೆ ಸಂತೋಷವಾಗಿದೆ. ಇದು ಆತ್ಮ ನಿರ್ಭರ ಭಾರತದ ಪ್ರಯೋಜನಗಳಿಗೆ ಹೆಚ್ಚುವರಿಯಾಗಿರುತ್ತದೆ ಮತ್ತು ವ್ಯಾಪಾರ ಸಮುದಾಯವನ್ನು ಸುಧಾರಿಸಲು ನಾವು ಕೈಗೊಂಡ ಇತರ ಕ್ರಮಗಳಾಗಿವೆ" ಎಂದು ಅವರು ಹೇಳಿದರು.

Rs 1350 Crore Package For Jammu And Kashmir

"ಪ್ರಸಕ್ತ ಹಣಕಾಸು ವರ್ಷದಲ್ಲಿ ಆರು ತಿಂಗಳವರೆಗೆ ಯಾವುದೇ ಷರತ್ತುಗಳಿಲ್ಲದೆ, ವ್ಯಾಪಾರ ಸಮುದಾಯದಿಂದ ಪ್ರತಿ ಸಾಲಗಾರನಿಗೆ ಶೇಕಡಾ 5 ರಷ್ಟು ಬಡ್ಡಿ ಸಬ್ವೆನ್ಷನ್ ನೀಡಲು ನಾವು ನಿರ್ಧರಿಸಿದ್ದೇವೆ. ಇದು ಒಂದು ದೊಡ್ಡ ಪರಿಹಾರ ಮತ್ತು ಇಲ್ಲಿ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

English summary
Lt Governor Sinha announces Rs 1350 cr economic package for Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X