• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಶ್ಮೀರ ಉಳಿಸಿಕೊಳ್ಳಬೇಕೆಂದರೆ 370ನೇ ವಿಧಿ ಪುನಃಸ್ಥಾಪಿಸಿ: ಮುಫ್ತಿ

|
Google Oneindia Kannada News

ಕಾಶ್ಮೀರ, ನವೆಂಬರ್ 25: ಕಾಶ್ಮೀರವನ್ನು ಉಳಿಸಿಕೊಳ್ಳಬೇಕೆಂದರೆ 370ನೇ ವಿಧಿಯನ್ನು ಪುನಃಸ್ಥಾಪಿಸಬೇಕು ಮತ್ತು ಕಣಿವೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಬನಿಹಾಲ್‌ನ ನೀಲ್ ಗ್ರಾಮದಲ್ಲಿ ಸಾರ್ವಜನಿಕ ಜಾಥಾವನ್ನುದ್ದೇಶಿಸಿ ಮಾತನಾಡಿದ ಮುಫ್ತಿ, ಜಮ್ಮು ಮತ್ತು ಕಾಶ್ಮೀರದ ಜನರು "ನಮಗೆ 370ನೇ ವಿಧಿ, ನಮ್ಮದೇ ಸಂವಿಧಾನ , ಮತ್ತು ಧ್ವಜವನ್ನು ನೀಡಿದ ಮಹಾತ್ಮ ಗಾಂಧಿಯವರ ಭಾರತದೊಂದಿಗೆ ತಮ್ಮ ಭವಿಷ್ಯ ನಿರ್ಧರಿಸಲು ಬಯಸುತ್ತಾರೆ. ಆದರೆ (ನಾಥುರಾಮ್)ಗೋಡ್ಸೆಯ ಭಾರತದೊಂದಿಗೆ ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕೇಂದ್ರವೇ ಕಾರಣ: ಮುಫ್ತಿಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕೇಂದ್ರವೇ ಕಾರಣ: ಮುಫ್ತಿ

ವಿಶೇಷ ಸ್ಥಾನಮಾನ ಮರುಸ್ಥಾಪನೆಗಾಗಿ ಜನರು ಒಗ್ಗಟ್ಟಾಗಿ ನಿಲ್ಲಬೇಕು ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಗುರುತು ಮತ್ತು ಗೌರವವನ್ನು ಕಾಪಾಡುವ ತಮ್ಮ ಹೋರಾಟವನ್ನು ಬಲಪಡಿಸಬೇಕು ಮಾಜಿ ಸಿಎಂ ಜನರನ್ನು ಕೇಳಿಕೊಂಡರು.

ಕಣಿವೆಯ ಜನರು ನಮ್ಮ ಗುರುತು ಮತ್ತು ಗೌರವವನ್ನು ಮರಳಿ ಪಡೆಯಲು ಬಯಸುತ್ತಾರೆ ಮತ್ತು ಅದು ಕೂಡ ಆಸಕ್ತಿಯಿಂದ ಕೂಡಿದೆ.

ಪಿಡಿಪಿ ಪಕ್ಷದ ಇಬ್ಬರು ನಾಯಕರುಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ ಹಾಗೂ ನನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಿದ್ದಾರೆ ಎಂದು ಆರೋಪ ಮಾಡಿದ್ದರು.

ಪಿಡಿಪಿ ಪಕ್ಷದ ವಕ್ತಾರರಾದ ಸುಹೈಲ್‌ ಬುಖಾರಿಯಾ ಹಾಗೂ ನಜ್ಮು ಸಿದ್ದಿಕ್‌ರನ್ನು ಬಂಧನ ಮಾಡಲಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ತನ್ನ ಮನೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಿರುವ ಅಡ್ಡಲಾಗಿ ಪೊಲೀಸರು ವಾಹನವನ್ನು ನಿಲ್ಲಿಸಿರುವ ಚಿತ್ರಗಳನ್ನು ಕೂಡಾ ಹಾಕಿದ್ದಾರೆ. ನನ್ನನ್ನು ಮತ್ತೆ ಗೃಹ ಬಂಧನದಲ್ಲಿ ಇರಿಸಲಾಗಿದೆ. ಪಿಡಿಪಿ ವಕ್ತಾರರಾದ ಸುಹೈಲ್‌ ಬುಖಾರಿಯಾ ಹಾಗೂ ನಜ್ಮು ಸಿದ್ದಿಕ್‌ರನ್ನು ಬಂಧನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೊದಲಿನಿಂದಲೂ ಕೇಂದ್ರ ಸರ್ಕಾರವೂ ಸುಳ್ಳನೇ ಹೇಳುತ್ತಾ ಬಂದಿದೆ. ಅವರು ತಾವು ಮಾಡಿದ ತಪ್ಪಿನ, ಕ್ರಿಯೆಯ ಜವಾಬ್ದಾರಿಯನ್ನು ಹೊರಲು ಬಯಸಲ್ಲ, ಅದರಿಂದಾಗಿ ಈ ಕೇಂದ್ರ ಸರ್ಕಾರವು ಅನ್ಯಾಯ ಹಾಗೂ ದೌರ್ಜನ್ಯಗಳ ವಿರುದ್ಧವಾಗಿ ಮಾತನಾಡುವವರ ಧ್ವನಿಯನ್ನು ಹತ್ತಿಕ್ಕುವ ಯತ್ನವನ್ನು ಮಾಡುತ್ತಾರೆ, ಎಂದು ಕೂಡಾ ಆರೋಪ ಮಾಡಿದ್ದಾರೆ.

ಈ ಸರ್ಕಾರವು ಉಗ್ರಗಾಮಿಗಳ ಹೆಸರಿನಲ್ಲಿ ನಾಗರಿಕರನ್ನು ಹತ್ಯೆ ಮಾಡುವ ಕಾರಣದಿಂದಾಗಿ ನಾನು ಪ್ರತಿಭಟನೆ ನಡೆಸುತ್ತಿದ್ದೇನೆ. ಉಗ್ರಗಾಮಿಗಳನ್ನು ಕೊಲ್ಲುತ್ತಿದ್ದಾರೆಯೇ ಎಂದು ಯಾರಿಗೂ ತಿಳಿದಿಲ್ಲ. ಇತ್ತೀಚೆಗೆ ಮೂವರು ನಾಗರಿಕನರನ್ನು ಕೊಲೆ ಮಾಡಲಾಗಿದೆ. ಸರ್ಕಾರ ಈ ನಾಗರಿಕರ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿಲ್ಲ, ಎಂದು ಮೆಹಬೂಬ ಮುಫ್ತಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಹಲವಾರು ನಾಯಕರನ್ನು, ಸಾಮಾಜಿಕ ಕಾರ್ಯಕರ್ತರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮತ್ತು ನ್ಯಾಶ್ನಲ್ ಕಾನ್ಫಿರೆನ್ಸ್ ಉಖಂಡ ಒಮರ್ ಅಬ್ದುಲ್ಲಾ ಅವರನ್ನು ಬಂಧಿಸಲಾಗಿತ್ತು. ಮೆಹಬೂಬ ಮುಫ್ತಿರನ್ನು 2019 ರಂದು ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧನ ಮಾಡಲಾಗಿತ್ತು.

ಯಾವುದೇ ಒಂದು ನಿಗದಿತ ವಿಚಾರವಿಲ್ಲದೆ ವ್ಯಕ್ತಿಯನ್ನು ಮೂರು ತಿಂಗಳುಗಳ ಕಾಲ ಬಂಧನದಲ್ಲಿ ಇಡಲು ಕಾಯ್ದೆಯು ಅವಕಾಶ ನೀಡುತ್ತದೆ. ಆದರೆ ಮೆಹಬೂಬ ಮುಫ್ತಿರನ್ನು ಒಂದು ವರ್ಷಕ್ಕೂ ಅಧಿಕ ಕಾಲ ಬಂಧನದಲ್ಲಿ ಇರಿಸಲಾಗಿತ್ತು.

   ಹಾರ್ದಿಕ್ ಪಾಂಡ್ಯಾಗೆ ಪಾಕ್ ಆಟಗಾರನ ಟಿಪ್ಸ್ | Oneindia Kannada
   English summary
   Former Jammu and Kashmir Chief Minister and Peoples Democratic Party president Mehbooba Mufti on Wednesday said the Centre had only three ways to keep Kashmir — “return Article 370 along with interest, talk to Pakistan and address the Kashmir issue”.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X