ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ISISನಿಂದ ರಕ್ಷಿಸಲ್ಪಟ್ಟಿದ್ದ ಯುವಕ ಮತ್ತೆ ಭಯೋತ್ಪಾದನೆಗೆ ಎಂಟ್ರಿ?

|
Google Oneindia Kannada News

ಶ್ರೀನಗರ, ಅಕ್ಟೋಬರ್ 18:ಐಎಸ್‌ಐಎಸ್‌ನಿಂದ ರಕ್ಷಿಸಲ್ಪಟ್ಟಿದ್ದ ಯುವ ಮತ್ತೆ ಭಯೋತ್ಪಾದನೆಗೆ ಕಾಲಿಟ್ಟಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾನವೀಯತೆ ಆಧಾರದ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಪರ್ವೇಜ್​ನನ್ನು ಅಂಕಾರಾದಿಂದ ರಕ್ಷಿಸಿ ಕರೆ ತಂದರು. ಬಳಿಕ ಆತ ತನ್ನ ಪಾಡಿಗೆ ತಾನಿದ್ದ. ಆದರೆ, ಇತ್ತೀಚೆಗೆ ಪರ್ವೇಜ್​​ ನಿಷೇಧಿತ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.

ದಾಳಿ ಭಯದಿಂದ ರಾಜ್ಯ ತೊರೆಯುತ್ತಿರುವ ಕಾಶ್ಮೀರಿ ಪಂಡಿತರುದಾಳಿ ಭಯದಿಂದ ರಾಜ್ಯ ತೊರೆಯುತ್ತಿರುವ ಕಾಶ್ಮೀರಿ ಪಂಡಿತರು

2017ರಲ್ಲಿ ಟರ್ಕಿಯಿಂದ ನಿಷೇಧಿತ ಐಸಿಸ್ ಭಯೋತ್ಪಾದಕ ಗುಂಪಿನಿಂದ ರಕ್ಷಿಸಲ್ಪಿಟ್ಟಿದ್ದ ಅಫ್ಶಾನ್ ಪರ್ವೇಜ್​, ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕ ಘಟಕದ ಸ್ಲೀಪರ್ ಸೆಲ್​ ಆಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

Rescued From ISIS In 2017, Kashmiri Youth Slips Again And Lands In Jail

2017ರಲ್ಲಿ ಖನ್ಶಾರ್​ನ ಪೇಟೆ ನಿವಾಸಿ ಪರ್ವೇಜ್​(ಆಗ 21 ವರ್ಷ) ಐಸಿಸ್​ ಗುಂಪು ಸೇರಿದ್ದ. ಈ ವೇಳೆ ಆತನ ಪೋಷಕರು, ನನ್ನ ಮಗನನ್ನು ಕರೆತನ್ನಿ ಎಂದು ಜಮ್ಮು-ಕಾಶ್ಮೀರದ ಪೊಲೀಸರಿಗೆ ಮನವಿ ಮಾಡಿದ್ದರು.

ರಾಷ್ಟ್ರೀಯ ತನಿಖಾ ಸಂಸ್ಥೆಯು ರಾಜ್ಯ ಮತ್ತು ಕೇಂದ್ರ ಏಜೆನ್ಸಿಗಳು ಒದಗಿಸಿದ ಗುಪ್ತಚರ ಮಾಹಿತಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಈ ತಿಂಗಳ ಆರಂಭದಲ್ಲಿ ಪರ್ವೇಜ್ ಗುರುತಿಸಿದ ತೌಹೀದ್ ಲತೀಫ್ ಮತ್ತು ಸುಹೇಲ್ ಅಹ್ಮದ್ ಎಂಬುವರನ್ನು ಬಂಧಿಸಲಾಯಿತು.

ಪರ್ವೇಜ್​​ ಐಸಿಸ್​​ ಸಂಘಟನೆಯ ಆಪರೇಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ, ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಅಧಿಕಾರಿಗಳ ಪ್ರಕಾರ ಪರ್ವೇಜ್, ಅಫ್ಘಾನಿಸ್ತಾನದಲ್ಲಿರುವ ಐಸಿಸ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿಂದ ದೇಶದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಕಾರ್ಯಸೂಚಿಯನ್ನು ಮುಂದುವರಿಸುವ ಸೂಚನೆಗಳನ್ನು ಪಡೆಯುತ್ತಿದ್ದ. 2017ರಲ್ಲಿ ಕಾಲೇಜಿಗೆ ಸೇರಲು ಬಯಸಿದ್ದ ತನ್ನ ತಂದೆಯೊಂದಿಗೆ ಜಗಳವಾಡಿದ ನಂತರ ಪರ್ವೇಜ್ ಅವರು ಮನೆ ಬಿಟ್ಟು ಹೋಗಿದ್ದರು.

ಗುಪ್ತಚರ ಸಂಸ್ಥೆಗಳು ಕಳೆದ ವರ್ಷ ಕಾಶ್ಮೀರದ ಅಹ್ಮದ್ ನಗರದ ಭಯೋತ್ಪಾದಕ ಪ್ರಕರಣದ ತನಿಖೆ ನಡೆಸುತ್ತಿದ್ದಾಗ, ಐಸಿಸ್ ಪ್ರಚಾರವನ್ನು ಬೆಂಬಲಿಸುವ 'ವಾಯ್ಸ್ ಆಫ್ ಹಿಂದ್' ಎಂಬ ವೆಬ್ ನಿಯತಕಾಲಿಕೆಯಲ್ಲಿ ಧ್ವನಿ ಮಾದರಿ ಮತ್ತು ಬರಹಗಳನ್ನು ಗಮನಿಸಿದಾಗ ಪರ್ವೇಜ್ ವಿರುದ್ಧ ಅನುಮಾನಗಳು ಮತ್ತಷ್ಟು ಹೆಚ್ಚಾದವು.

ದೂರನ್ನಾಧರಿಸಿದ ನಂತರ ಪೊಲೀಸರು ಆತನ ಪತ್ತೆಗಾಗಿ ತನಿಖೆ ಆರಂಭಿಸಿದರು. ಜತೆಗೆ ಇರಾನಿನಲ್ಲಿದ್ದ ಆತನ ಸಹವರ್ತಿಗಳನ್ನೂ ಸಂಪರ್ಕಿಸಿದ್ರು. ಆಗ, ಅವರು ಅಂಕಾರಾಗೆ ತೆರಳಿರುವುದು ಬೆಳಕಿಗೆ ಬಂದಿತು.

ನಮ್ಮ ದೇಶದ ಅಧಿಕಾರಿಗಳು ಅಂಕಾರಾದ ಅಧಿಕಾರಿಗಳನ್ನ ಸಂಪರ್ಕಿಸಿ, ಟರ್ಕಿಶ್ ರಾಜಧಾನಿಯಿಂದ ಪರ್ವೇಜ್​ರನ್ನು ಕರೆ ತಂದರು. ಮೇ 25, 2017ರಂದು ಟರ್ಕಿಶ್ ಏರ್​ಲೈನ್ಸ್​ ವಿಮಾನದಿಂದ ಆತನನ್ನು ಭಾರತಕ್ಕೆ ಕಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆ ತನಿಖೆಯನ್ನು ತೀವ್ರಗೊಳಿಸಿದಾಗ, ಆತ ವರ್ಚುವಲ್ ಪ್ರೈವೇಟ್ ನೆಟ್​ವರ್ಕ್​​ ಬಳಸುತ್ತಿದ್ದ ಎನ್ನಲಾಗಿದೆ. ಇದರಲ್ಲಿ ವಿಡಿಯೋ ತುಣುಕೊಂದನ್ನು ಅಪ್​ಲೋಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ, ಭದ್ರತಾ ಏಜೆನ್ಸಿ ಆತನನ್ನು ವಶಕ್ಕೆ ಪಡೆದಿದೆ.

ಜತೆಗೆ ಧಾರ್ಮಿಕ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ವರ್ಷದ ಮಾರ್ಚ್‌ನಲ್ಲಿ ಇರಾನ್‌ಗೆ ತೆರಳಿದ್ದ ಪರ್ವೇಜ್​, ಅಲ್ಲಿಂದ ಏಪ್ರಿಲ್ 9ರಂದು ದೆಹಲಿಗೆ ಹಿಂದಿರುಗುವ ವೇಳೆಗೆ ಯುರೋಪಿನಲ್ಲಿ ಧಾರ್ಮಿಕ ಅಧ್ಯಯನದ ಮಾರ್ಗಗಳನ್ನು ಅನ್ವೇಷಿಸಿದ್ದ. ಬಳಿಕ ಕುಟುಂಬಸ್ಥರು, ಆತ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಮುಂದುವರೆದಿದ್ದು, ಕುಲ್ಗಾಂ ಜಿಲ್ಲೆಯಲ್ಲಿ ಭಾನುವಾರ ಉಗ್ರರು ಮತ್ತೆ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಮತ್ತೊಬ್ಬರನ್ನು ಗಾಯಗೊಳಿಸಿದ್ದಾರೆ.

"ಕುಲ್ಗಾಂನ ವಾನ್ಪೋಹ್ ಪ್ರದೇಶದಲ್ಲಿ ಕಾರ್ಮಿಕರ ಮೇಲೆ ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಹೊರ ರಾಜ್ಯದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ" ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಉಗ್ರರಿಗಾಗಿ ಪೊಲೀಸರು ಮತ್ತು ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿವೆ ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ಬಾಡಿಗೆ ಮನೆಯಲ್ಲಿದ್ದ ಕಾರ್ಮಿಕರ ಮೇಲೆ ಉಗ್ರರು ಮನಬಂದಂತೆ ಗುಂಡು ಹಾರಿಸಿದರು.

ಕಳೆದ 24 ಗಂಟೆಗಳಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ. ಬಿಹಾರದ ಬೀದಿ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಬಡಗಿಯನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ತಮ್ಮ ಮೇಲೆ ನಡೆಯಬಹುದಾದ ದಾಳಿ ಭಯದಿಂದ ಕೆಲವು ಕಾಶ್ಮೀರಿ ಪಂಡಿತರು ರಾಜ್ಯವನ್ನು ತೊರೆಯುತ್ತಿದ್ದಾರೆ. ಕಾಶ್ಮೀರಿ ಪಂಡಿತರಲ್ಲದೆ ಕೆಲ ಕುಟುಂಬಗಳು ಸಹ ತೊರೆಯುತ್ತಿದ್ದಾರೆ. 1990ರ ದಾಳಿ ಮರು ಕಳಿಸುತ್ತಿದೆ ಎಂದು ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಅಧ್ಯಕ್ಷ ಸಂಜಯ್ ಟಿಕು ಹೇಳಿದ್ದಾರೆ.

ಜೂನ್ ನಲ್ಲಿ ಉಪ ರಾಜ್ಯಪಾಲರ ಭೇಟಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಈವರೆಗೂ ಭೇಟಿಗೆ ಅವಕಾಶ ದೊರೆತಿಲ್ಲ. ಸಾಮಾಜಿಕ ಮಾಧ್ಯಮಗಳಿಂದ ಇಂತಹ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದರು.

ಇಬ್ಬರು ಶಿಕ್ಷಕರ ಹತ್ಯೆ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆಗೆ ಗುರಿ ಇಡಲಾಗಿದೆ ಎಂಬ ಅನುಮಾನದಿಂದ 2010-11ರ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಸರ್ಕಾರಿ ಕೆಲಸ ಪಡೆದಿರುವ ಸಮುದಾಯದ ಕೆಲವು ನೌಕರರು, ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದು, ತಮ್ಮ ಜೀವ ಭಯದಿಂದ ನಿಧಾನವಾಗಿ ಜಮ್ಮುವನ್ನು ತೊರೆಯಲು ಆರಂಭಿಸಿದ್ದಾರೆ ಎಂದು ಕಾಶ್ಮೀರಿ ಪಂಡಿತ್ ಸಂಘಟನೆಯೊಂದು ಶುಕ್ರವಾರ ಹೇಳಿದೆ.

English summary
After being rescued from the clutches of banned ISIS terror group from Turkey in 2017, Afshan Parvez has been found to be a sleeper cell of a terror module in Jammu and Kashmir that is promoting the armed crusade against the sovereignty of the country, officials here said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X