ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಕತ್ತಲೆಯಿಂದ ಬೆಳಕಿನೆಡೆಗೆ ಜಮ್ಮು- ಕಾಶ್ಮೀರದ ಈ ಗ್ರಾಮ

|
Google Oneindia Kannada News

ರಜೌರಿ, ಅಕ್ಟೋಬರ್ 5: ಸ್ವಾತಂತ್ರ್ಯ ಬಂದರೂ ಕತ್ತಲೆಯಲ್ಲೇ ಇದ್ದ ಜಮ್ಮು-ಕಾಶ್ಮೀರದ ಈ ಗ್ರಾಮ ಅಂತೂ ಬೆಳಕು ಕಂಡಿದೆ.

ಸೌಭಾಗ್ಯ ವಿದ್ಯುದೀಕರಣ ಯೋಜನೆಯಡಿ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗ್ರಾಮ ಒಂದು ಇದೇ ಮೊದಲ ಬಾರಿಗೆ ವಿದ್ಯುತ್ ಸೌಕರ್ಯ ಪಡೆದುಕೊಂಡಿದೆ.

ಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕುಜಮ್ಮು- ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ 58 ದೇಶ ಯಾವುದು? ಸಿಟ್ಟಿಗೆ ಇಷ್ಟು ಸಾಕು

ಗಡಿ ಹತ್ತಿರ ಇರುವ ಪ್ರದೇಶವಾಗಿದ್ದರೂ ಕೂಡ ಇದುವರೆಗೆ ವಿದ್ಯುತ್ ಸೌಲಭ್ಯವಿರಲಿಲ್ಲ, ಈ ಗ್ರಾಮದ ಒಟ್ಟು 20 ಸಾವಿರ ಮನೆಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ.

Rajouri Gets Electricity For The First Time

ಕೇಂದ್ರ ಸರ್ಕಾರ ಸೌಭ್ಯಾಗ್ಯ ಯೋಜನೆಯಡಿ 20 ಸಾವಿರದ 300 ಮನೆಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಿದೆ ಎಂದು ರಜೌರಿ ಡಿಡಿಸಿ ಮೊಹಮ್ಮದ್ ಐಜಾಜ್ ಅಸಾದ್ ಹೇಳಿದ್ದಾರೆ.

ಎಲ್ ಒಸಿ ಸಮೀಪವಿರುವ ಅನೇಕ ಗ್ರಾಮಗಳಲ್ಲಿ 1947ರಿಂದಲೂ ವಿದ್ಯುತ್ ಸೌಲಭ್ಯ ಇಲ್ಲದಂತಾಗಿತ್ತು. ಈಗ ವಿದ್ಯುತ್ ಸೌಕರ್ಯ ದೊರೆತಿರುವುದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿದೆ.

ಈ ಹಿಂದೆ ವಿದ್ಯುತ್ ಇಲ್ಲದೆ ಕ್ಯಾಂಡಲ್ ಹಾಗೂ ಸೀಮೆಎಣ್ಣೆಯ ದೀಪದ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡಬೇಕಾಗಿತ್ತು ಎಂದು ಖಂಡರಿಯಾದ ಗ್ರಾಮಸ್ಥ ಖದಿಮ್ ಹುಸೈನ್ ಸಂತಸ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 25, 2017ರಂದು ಸೌಭಾಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ನೀಡಲಾಗುತ್ತದೆ.

ವಿದ್ಯುತ್ ಸೌಕರ್ಯದಿಂದ ವ್ಯಾಪಾರ ಚಟುವಟಿಕೆ ಬೆಳವಣಿಗೆಯಾಗಲಿದೆ. ಹೊಸ ಅಂಗಡಿಗಳನ್ನು ತೆರೆಯಬಹುದಾಗಿದೆ. ಈ ಪ್ರದೇಶದಲ್ಲಿ ಎರಡ್ಮೂರು ವಿದ್ಯುತ್ ಕಂಬಗಳನ್ನು ಹಾಕಲಾಗಿದ್ದು, ಮನೆಯಲ್ಲಿಯೇ ಮೊಬೈಲ್ ಪೋನ್ ಗಳ ಚಾರ್ಜಿಂಗ್ ಮಾಡಿಕೊಳ್ಳಲು ಅನುಕೂಲವಾಗಿದೆ.

English summary
People residing in far-flung and remote villages of Rajouri district here are overjoyed after receiving electricity under the Soubhagya Electricity scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X