• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಮತ್ತು ಕಾಶ್ಮೀರ; ಡ್ರೋನ್ ಹಾರಾಟಗಳ ಮೇಲೆ ನಿರ್ಬಂಧ

|
Google Oneindia Kannada News

ಶ್ರೀನಗರ, ಜೂನ್ 30; ಜಮ್ಮು ಮತ್ತು ಕಾಶ್ಮೀರದ ರಾಜೋರಿ ಜಿಲ್ಲಾಡಳಿತ ಡ್ರೋನ್ ಹಾರಾಟಗಳ ಮೇಲೆ ನಿರ್ಬಂಧ ಹೇರಿದೆ. ಭಾನುವಾರ ಮುಂಜಾನೆ ಡ್ರೋನ್ ಮೂಲಕ ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲಾಗಿತ್ತು.

ರಾಷ್ಟ್ರ ವಿರೋಧಿ ಶಕ್ತಿಗಳು ಡ್ರೋನ್ ಬಳಕೆ ಮಾಡಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಡ್ರೋನ್ ಬಳಕೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಡ್ರೋನ್‌ನಿಂದ ಆಸ್ತಿಗಳಿಗೆ ಮತ್ತು ಜೀವಕ್ಕೆಹಾನಿಯಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಮೋದಿ ಮಹತ್ವದ ಸಭೆ; ಶೀಘ್ರವೇ ಬರಲಿದೆ ಡ್ರೋನ್ ಪಾಲಿಸಿ ಮೋದಿ ಮಹತ್ವದ ಸಭೆ; ಶೀಘ್ರವೇ ಬರಲಿದೆ ಡ್ರೋನ್ ಪಾಲಿಸಿ

ಡ್ರೋನ್ ಸೇರಿದಂತೆ ಹಾರಾಟ ನಡೆಸುವ ವಸ್ತುಗಳ ಮಾರಾಟ, ಬಳಕೆ, ಸಂಗ್ರಹ, ಸಾಗಾಟಕ್ಕೆ ರಾಜೋರಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಬಳಕೆ ಅನಿವಾರ್ಯವಾದರೆ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಿದೆ.

ಜಮ್ಮು ಐಎಎಫ್ ಕೇಂದ್ರಕ್ಕೆ ನುಗ್ಗಿದ ಉಗ್ರರ ಡ್ರೋನ್: ತಪ್ಪು ಆಗಿದ್ದು ಎಲ್ಲಿ? ಜಮ್ಮು ಐಎಎಫ್ ಕೇಂದ್ರಕ್ಕೆ ನುಗ್ಗಿದ ಉಗ್ರರ ಡ್ರೋನ್: ತಪ್ಪು ಆಗಿದ್ದು ಎಲ್ಲಿ?

ರಾಜೋರಿ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ಕುಮಾರ್ ಶವನ್ ಈ ಕುರಿತು ಬುಧವಾರ ಆದೇಶ ಹೊರಡಿಸಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 144 ಅನ್ವಯ ಈ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟಕ್ಕೆ ಡ್ರೋನ್ ಬಳಕೆ ಹಿಂದೆ ಪಾಕ್ ಪಿತೂರಿ!? ಜಮ್ಮು ವಿಮಾನ ನಿಲ್ದಾಣದಲ್ಲಿ ಸ್ಫೋಟಕ್ಕೆ ಡ್ರೋನ್ ಬಳಕೆ ಹಿಂದೆ ಪಾಕ್ ಪಿತೂರಿ!?

ಡ್ರೋನ್ ಮೂಲಕ ಚಿತ್ರೀಕರಣ ಮಾಡಬೇಕಾದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಈ ಆದೇಶ ಜಾರಿಗೊಳಿಸುವ ಅಧಿಕಾರವನ್ನು ಎಸ್ಪಿಗೆ ನೀಡಲಾಗಿದೆ.

ಸರ್ಕಾರಿ ಸಂಸ್ಥೆಗಳು ಸಮೀಕ್ಷೆ, ಕಣ್ಗಾವಲು ಮುಂತಾದ ಉದ್ದೇಶಕ್ಕಾಗಿ ಡ್ರೋನ್ ಬಳಕೆ ಮಾಡುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಭಾನುವಾರ ಮುಂಜಾನೆ 2 ಗಂಟೆಯ ಸಮಯದಲ್ಲಿ ಡ್ರೋನ್ ಮೂಲಕ ವಾಯುಪಡೆ ಹಿಡಿತದಲ್ಲಿರುವ ಜಮ್ಮು ವಿಮಾನ ನಿಲ್ದಾಣದ ಮೇಲೆ ಸ್ಪೋಟಕಗಳ ಮೂಲಕ ದಾಳಿ ಮಾಡಲಾಗಿತ್ತು.

ಒಟ್ಟು ಎರಡು ಬಾರಿ ದಾಳಿ ನಡೆದಿದ್ದು, ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿದೆ. ಈ ಘಟನೆ ಬಳಿಕ ಡ್ರೋನ್ ಹಾರಾಟಕ್ಕೆ ನಿಯಮ ರೂಪಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಭಾರತ ತನ್ನದೇ ಆದ ಡ್ರೋನ್ ಹಾರಾಟದ ಬಗ್ಗೆ ನಿಯಮಗಳನ್ನು ರೂಪಿಸಲಿದೆ. ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಪಾಲ್ಗೊಂಡಿದ್ದರು.

English summary
After the attack on Jammu airport Rajouri district of Jammu & Kashmir imposed a ban/ restriction on the storage, sale, use and transport of any drone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X