ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದೊಂದಿಗೆ ಯುದ್ಧಕ್ಕೆ ಸಿದ್ಧ ಎಂಬ ಸೂಚನೆ ನೀಡಿದ ಪಾಕಿಸ್ತಾನ

|
Google Oneindia Kannada News

ಶ್ರೀನಗರ, ಫೆಬ್ರವರಿ 22: ಪುಲ್ವಾಮಾ ದಾಳಿಯ ನಂತರ ಭಾರತ ತನ್ನ ಮೇಲೆ ಯುದ್ಧ ಸಾರಬಹುದು ಎಂಬ ಭೀತಿಯಲ್ಲಿರುವ ಪಾಕಿಸ್ತಾನ ಈಗಾಗಲೇ ಯುದ್ಧವನ್ನು ಎದುರಿಸಲು ತಯಾರಿ ನಡೆಸಿದೆ.

"ಭಾರತದೊಂದಿಗೆ ಯುದ್ಧವಾಗುವ ಸಂಭವವಿರುವುದರಿಂದ ಎಲ್ಲರೀತಿಯ ವೈದ್ಯಕೀಯ ನೆರವು ನೀಡುವಂತೆ" ಕ್ವೆಟ್ಟಾದಲ್ಲಿರುವ ಪಾಕಿಸ್ತಾನ ಸೇನಾ ನೆಲೆಯ ಕೇಂದ್ರದಿಂದ ಪಾಕ್ ನ ಜಿಲಾನಿ ಆಸ್ಪತ್ರೆಗೆ ಪತ್ರ ಬರೆಯಲಾಗಿದೆ.

ವಿಶ್ವಸಂಸ್ಥೆಯಲ್ಲಿ ನಡೆಯದ ಚೀನಾ ಆಟ: ಉಗ್ರ ದಾಳಿಗೆ ಕಟುವಾದ ಖಂಡನೆವಿಶ್ವಸಂಸ್ಥೆಯಲ್ಲಿ ನಡೆಯದ ಚೀನಾ ಆಟ: ಉಗ್ರ ದಾಳಿಗೆ ಕಟುವಾದ ಖಂಡನೆ

"ಯುದ್ಧದ ಸನ್ನಿವೇಶ ಏರ್ಪಟ್ಟಿರುವುದರಿಂದ ಗಾಯಗೊಳ್ಳುವ ಸೈನಿಕರಿಗೆ ವೈದ್ಯಕೀಯ ನೆರವು ನೀಡಲು ಈಗಲೇ ಸಿದ್ಧರಾಗಿ. ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್ ಗಳನ್ನು ವ್ಯವಸ್ಥೆ ಮಾಡಿ" ಎಂದು ಪತ್ರದಲ್ಲಿ ಬರೆಯಲಾಗಿದೆ.

Pulwama terror attack: Pakistan indicates war against India

ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾದ ಸರಕಾರಿ ಮಾಧ್ಯಮಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾದ ಸರಕಾರಿ ಮಾಧ್ಯಮ

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಆದಿಲ್ ದಾರ್ ಎಂಬಾತ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 44 ಯೋಧರು ಹುತಾತ್ಮರಾಗಿದ್ದರು.

ಈ ಹೇಯಕೃತ್ಯದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮತ್ತು, ಭಯೋತ್ಪಾದನೆಯ ವಿರುದ್ಧ ಸಮರ ಸಾರಲು ಸಿದ್ಧವಾಗಿರುವ ಭಾರತ, ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬಹುದು ಎಂಬ ವದಂತಿ ಹಬ್ಬಿದೆ. ಇದು ಪಾಕ್ ವಲಯದಲ್ಲಿ ಭೀತಿ ಮೂಡಿಸಿದೆ.

English summary
After Pulwama terror attack, now Pakistan gives an indication that, it is ready to face war against India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X