ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿಯ ರೂವಾರಿ ಜೈಷ್ ನ ಕಮ್ರನ್ ಮತ್ತೊಬ್ಬ ಖಲಾಸ್

|
Google Oneindia Kannada News

ಶ್ರೀನಗರ, ಫೆಬ್ರವರಿ 18 : ಪಾಕಿಸ್ತಾನದಲ್ಲಿ ನೆಲೆಯೂರಿರುವ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ನ ಇಬ್ಬರು ಪ್ರಮುಖ ಉಗ್ರರನ್ನು ಹೊಡೆದುರುಳಿಸುವ ಮೂಲಕ ಭಾರತದ ಸೈನಿಕರು ಉಗ್ರರ ವಿರುದ್ಧ ಮೊದಲ ಸೇಡು ತೀರಿಸಿಕೊಂಡಿದ್ದಾರೆ.

ಫೆಬ್ರವರಿ 14ರಂದು ನಡೆದ ಭೀಕರ ಆತ್ಮಾಹುತಿ ದಾಳಿ ನಡೆದು, ಸಿಆರ್‌ಪಿಎಫ್ ನ 49 ಯೋಧರನ್ನು ಬಲಿ ತೆಗೆದುಕೊಂಡ ನಂತರ, ನಡೆದ ಪ್ರಥಮ ಪ್ರತೀಕಾರ ದಾಳಿ ಇದಾಗಿದ್ದು, ಭಯೋತ್ಪಾದಕರಿಗೆ ಭರ್ಜರಿ ತಿರುಗೇಟು ನೀಡಿದ್ದಾರೆ. ಆದರೆ, ದುರಾದೃಷ್ಟವಶಾತ್ ಈ ಗುಂಡಿನ ಚಕಮಕಿಯಲ್ಲಿ ನಾಲ್ವರು ಭಾರತೀಯ ಯೋಧರು ಕೂಡ ಹತರಾಗಿದ್ದಾರೆ.

ಪುಲ್ವಾಮಾ ಸಂಚುಕೋರ ಅಬ್ದುಲ್ ರಶೀದ್ ಘಾಜಿ ಹತ್ಯೆ?!ಪುಲ್ವಾಮಾ ಸಂಚುಕೋರ ಅಬ್ದುಲ್ ರಶೀದ್ ಘಾಜಿ ಹತ್ಯೆ?!

ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆದ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿ, ಫೆಬ್ರವರಿ 14ರ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾಗಿರುವ ಕಮ್ರನ್ ನನ್ನು ನಮ್ಮ ಸೈನಿಕರು ಹೊಡೆದುರುಳಿಸಿದ್ದಾರೆ. ಈತ, ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನ ಬಲಗೈ ಬಂಟನಾಗಿದ್ದ.

Pulwama terror attack mastermind gunned down by Indian army

ಸತತ ಹನ್ನೆರಡು ಗಂಟೆ ನಡೆದ ಈ ಪ್ರತಿದಾಳಿಯಲ್ಲಿ ಹಿಲಾಲ್ ಅಹ್ಮದ್ ಎಂಬಾತನನ್ನೂ ಅಲ್ಲಾಹುವಿನ ಪಾದಕ್ಕೆ ಸೈನಿಕರು ಕಳಿಸಿದ್ದಾರೆ. ಆತ ಸ್ಥಳೀಯ ಬಾಂಬ್ ತಜ್ಞನಾಗಿದ್ದ ಎಂದು ತಿಳಿದುಬಂದಿದೆ. ಹಿಲಾಲ್ ಕಾಶ್ಮೀರದವನಾಗಿದ್ದರೆ, ಕಮ್ರನ್ ಪಾಕಿಸ್ತಾನದ ಪ್ರಜೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಕೈಯಲ್ಲಿ ಎಕೆ-47 ರೈಫಲ್ ಹಿಡಿದಿದ್ದ ಕಮ್ರನ್ ತೆಳ್ಳಗಿನ ವ್ಯಕ್ತಿಯಾಗಿದ್ದು, ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಚೀಫ್ ಆಪರೇಷನಲ್ ಕಮಾಂಡ್ ಆಗಿದ್ದ. ಕಾಶ್ಮೀರದಲ್ಲಿ ತಮ್ಮ ಸಂಘಟನೆಗೆ ಜನರನ್ನು ಸೇರಿಸಿಕೊಂಡು, ಅವರಿಗೆ ತರಬೇತಿ ನೀಡುವುದು ಮತ್ತು ಜಿಹಾದ್ ಗಾಗಿ ಅವರನ್ನು ತಯಾರಿ ಮಾಡುವ ಜವಾಬ್ದಾರಿಯನ್ನು ಕಮ್ರನ್ ಗೆ ವಹಿಸಲಾಗಿತ್ತು.

ಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯ ಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯ

ಕಮ್ರನ್ ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತ ಯುವಕರನ್ನು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿಸಿಕೊಳ್ಳುತ್ತಲೇ, ಭಾರತೀಯ ಸೈನಿಕರಿಂದ ತಪ್ಪಿಸಿಕೊಳ್ಳುತ್ತಲೇ ತಿರುಗುತ್ತಿದ್ದ. ಆತನನ್ನು ಮುಗಿಸಿಹಾಕಲು ಹಲವಾರು ವರ್ಷಗಳಿಂದ ಭಾರತೀಯ ಸೇನೆ ಪ್ರಯತ್ನಿಸುತ್ತಿತ್ತು. ಇವರು ಅದಕ್ಕೆ ಮುಹೂರ್ತ ಕೂಡಿ ಬಂದಿತ್ತು.

ಫೆಬ್ರವರಿ 14ರಂದು ನಡೆಸಲಾಗಿದ್ದ ದಾಳಿಯ ರೂವಾರಿ ಕಮ್ರನ್ ಆಗಿದ್ದ. ಆ ದಾಳಿಯಲ್ಲಿ 19 ವರ್ಷದ ಉಗ್ರ ಆದಿಲ್ ಅಹ್ಮದ್ ದಾರ್ ತಾನು ಚಲಾಯಿಸುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಸಿಆರ್‌ಪಿಎಫ್ ಜವಾನರಿದ್ದ ಬಸ್ಸಿಗೆ ನುಗ್ಗಿಸಿ ಸ್ಫೋಟಗೊಳಿಸಿದ್ದ. ಆತ ತನ್ನ ಕಾರಿನಲ್ಲಿ ಸುಮಾರ್ 60 ಕೆಜಿಯಷ್ಟು ಆರ್‌ಡಿಎಕ್ಸ್ ತುಂಬಿಕೊಂಡಿದ್ದ. ಈ ಆದಿಲ್ ನನ್ನು ಕೂಡ ಕಮ್ರನ್ ನೇ ಉಗ್ರ ಸಂಘಟನೆಗೆ ಸೇರಿಸಿಕೊಂಡು ತರಬೇತಿ ನೀಡಿದ್ದ.

'ಪ್ರತ್ಯೇಕತಾವಾದಿಗಳನ್ನು ದಕ್ಷಿಣ ಭಾರತದ ಜೈಲಿಗೆ ಹಾಕಿ' 'ಪ್ರತ್ಯೇಕತಾವಾದಿಗಳನ್ನು ದಕ್ಷಿಣ ಭಾರತದ ಜೈಲಿಗೆ ಹಾಕಿ'

5 ರಾಷ್ಟ್ರೀಯ ರೈಫಲ್ಸ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಮತ್ತು ಜಮ್ಮು ಮತ್ತು ಕಾಶ್ಮೀರದ ಸ್ಪೆಷಲ್ ಆಪರೇಷನ್ ಗ್ರೂಪ್ ಈ ಪ್ರತಿಕಾರ ದಾಳಿಯಲ್ಲಿ ಭಾಗವಹಿಸಿದ್ದವು. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಭಾರತೀಯ ಯೋಧರನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪ್ರಶಂಸಿಸಿದ್ದಾರೆ.

English summary
Mastermind of the Pulwama Terrorist Attack- Kamran, a resident of Pakistan belonging to terror outfit Jaish-e-Mohammed, was killed by security forces in an encounter in Pulwama earlier on Monday. Another terrorist Hilal has also been killed by Indian army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X