ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿಗೆ ಬಳಸಿದ ವಾಹನದ ಮಾಲಿಕ ಸಜ್ಜದ್ ಭಟ್

|
Google Oneindia Kannada News

ಶ್ರೀನಗರ, ಫೆಬ್ರವರಿ 25 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ವಾಹನಕ್ಕೆ ಗುದ್ದಿ ಅವರನ್ನು ಆಹುತಿ ತೆಗೆದುಕೊಂಡು ವಾಹನದ ಮಾಲಿಕ ಯಾರೆಂದು ರಾಷ್ಟ್ರೀಯ ತನಿಖಾ ಸಂಸ್ಥೆ ಪತ್ತೆ ಹಚ್ಚಿದೆ.

ಬೆಂಕಿಯೊಂದಿಗೆ ಸರಸವಾಡಬೇಡಿ : ಮೋದಿಗೆ ಮೆಹಬೂಬಾ ಚಾಲೆಂಜ್!ಬೆಂಕಿಯೊಂದಿಗೆ ಸರಸವಾಡಬೇಡಿ : ಮೋದಿಗೆ ಮೆಹಬೂಬಾ ಚಾಲೆಂಜ್!

ಆತನನ್ನು ಸಜ್ಜದ್ ಭಟ್ ಎಂದು ಗುರುತಿಸಲಾಗಿದ್ದು, ಆತ ಈ ಆತ್ಮಾಹುತಿ ದಾಳಿಯ ಹೊಣೆಯನ್ನು ಹೊತ್ತಿರುವ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಅನ್ನು ಸೇರಿಕೊಂಡಿದ್ದಾನೆ ಎಂಬ ಮಾಹಿತಿಯನ್ನು ಎನ್ಐಎ ಖಚಿತಪಡಿಸಿದೆ. ಆತನ ಚಿತ್ರವನ್ನೂ ಎನ್ಐಎ ಬಿಡುಗಡೆ ಮಾಡಿದೆ.

ಪುಲ್ವಾಮಾ ಭಯೋತ್ಪಾದಕ ದಾಳಿಗೆ ಬಳಸಲಾದ ವಾಹನವನ್ನು ಮಾರುತಿ ಇಕೋ ಎಂದು ವಿಧಿವಿಜ್ಞಾನ ಸಂಸ್ಥೆ ಮತ್ತು ಆಟೋಮೊಬೈಲ್ ತಜ್ಞರ ಸಹಾಯದಿಂದ ಪತ್ತೆ ಹಚ್ಚಲಾಗಿದ್ದು, ಇದರ ಮಾಲಿಕ ಅನಂತನಾಗ್ ಜಿಲ್ಲೆಯ ಬಿಜ್ಬೆಹಾರಾದ ನಿವಾಸಿಯಾಗಿರುವ ಸಜ್ಜದ್ ಭಟ್.

ಉ.ಪ್ರ.ದಲ್ಲಿ ಸಿಕ್ಕಿಬಿದ್ದ ಕಾಶ್ಮೀರಿ ಯುವಕರು ಬಾಯ್ಬಿಟ್ಟರು ಸ್ಫೋಟಕ ಮಾಹಿತಿಉ.ಪ್ರ.ದಲ್ಲಿ ಸಿಕ್ಕಿಬಿದ್ದ ಕಾಶ್ಮೀರಿ ಯುವಕರು ಬಾಯ್ಬಿಟ್ಟರು ಸ್ಫೋಟಕ ಮಾಹಿತಿ

Pulwama terror attack : Maruti vehicle owner Sajjad Bhat

ಆತ ತಲೆಮರೆಸಿಕೊಂಡಿದ್ದು, ಶೋಪಿಯನ್ ನಲ್ಲಿರುವ ಸಿರಾಜ್-ಉಲ್-ಉಲೂಮ್ ಮದ್ರಸಾದ ವಿದ್ಯಾರ್ಥಿಯಾಗಿದ್ದ. ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಸಹಾಯದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಆತನ ನಿವಾಸದ ಮೇಲೆ ದಾಳಿ ಮಾಡಿತ್ತು. ಆದರೆ ಆತ ಪರಾರಿಯಾಗಿದ್ದಾನೆ. ಶಸ್ತ್ರಾಸ್ತ್ರವನ್ನು ಕೈಯಲ್ಲಿ ಹಿಡಿದುಕೊಂಡಿರುವ ಆತನ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸುತ್ತಾಡುತ್ತಿವೆ.

English summary
Pulwama terror attack : NIA has Maruti vehicle owner Sajjad Bhat. NIA investigators, with support of forensic & automobile experts have been able to identify the vehicle used in Pulwama Attack. Sajjad Bhat has reportedly joined Jaish-e-Mohammed (JeM).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X