ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಅತ್ಮಾಹುತಿ ದಾಳಿಗೂ ಮುನ್ನ ಜೈಷ್ ಉಗ್ರ ಆದಿಲ್ ಹೇಳಿದ್ದೇನು?

|
Google Oneindia Kannada News

ಶ್ರೀನಗರ, ಫೆಬ್ರವರಿ 14: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ(ಫೆಬ್ರವರಿ 14)ದಂದು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿಕೋರ ಆದಿಲ್ ಆಹ್ಮದ್ ದರ್ ದಾಳಿ ಮಾಡಿ ಸಾಯುವುದಕ್ಕೂ ಮುನ್ನ ವಿಡಿಯೋ ಸಂದೇಶ ನೀಡಿದ್ದಾನೆ.

ಉರಿ ನಂತರದ ಭೀಕರ ದಾಳಿ; 30ಕ್ಕೆ ಏರಿತು ಹುತಾತ್ಮರಾದವರ ಸಂಖ್ಯೆ ಉರಿ ನಂತರದ ಭೀಕರ ದಾಳಿ; 30ಕ್ಕೆ ಏರಿತು ಹುತಾತ್ಮರಾದವರ ಸಂಖ್ಯೆ

ಉಗ್ರರ ದಾಳಿಯಲ್ಲಿ ಸುಮಾರು 30ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. 45ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪುಲ್ವಾಮಾದಲ್ಲಿ ಭಯೋತ್ಪಾದನಾ ದಾಳಿಯಾದ ಬಳಿಕ ಜೈಷ್ ಸಂಘಟನೆ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಕಕ್ಪೋರಾದ ಗಂಡಿಬಾಗ್ ನ ಆದಿಲ್ ಅಹ್ಮದ್ ದರ್ ಅಲಿಯಾಸ್ ವಖಾಸ್ ಕಮ್ಯಾಂಡೋ ಕಾಣಿಸಿಕೊಂಡಿದಾನೆ.

ಆದಿಲ್ ಹಿಂಬದಿಯಲ್ಲಿ ಜೈಷ್ ಎ ಮೊಹಮ್ಮದ್ ಬ್ಯಾನರ್ ಇದ್ದು, ರೈಫಲ್ಸ್ ಗಳನ್ನು ಹಿಡಿದುಕೊಂಡು ಮಾತನಾಡಿರುವ ಆದಿಲ್, ಕಳೆದ ವರ್ಷ ನಿಷೇಧಿತ ಉಗ್ರ ಸಂಘಟನೆಯನ್ನು ಸೇರಿಕೊಂಡೆ, ಈ ವರ್ಷ ಮಾರಣಾಂತಿಕ ದಾಳಿ ನಡೆಸುವ ಹೊಣೆ ಸಿಕ್ಕಿದೆ. ಈ ವಿಡಿಯೋ ಪ್ರಸಾರವಾಗುವ ವೇಳೆಗೆ ನಾನು ಜನ್ನತ್(ಸ್ವರ್ಗ)ದಲ್ಲಿರುತ್ತೇನೆ ಎಂದಿದ್ದಾನೆ.

ಪುಲ್ವಾಮದ ಉಗ್ರರ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ ಪುಲ್ವಾಮದ ಉಗ್ರರ ದಾಳಿಯನ್ನು ಖಂಡಿಸಿದ ಪ್ರಧಾನಿ ಮೋದಿ

Pulwama terror attack: Jaish-e-Mohammed claims responsibility with video of suicide bomber Adil Dar

ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಎಲ್ ಇ ಡಿ ಸ್ಫೋಟಕ್ಕಾಗಿ ಜೈಷ್ ಸಿದ್ಧತೆ ನಡೆಸಿತ್ತು. 50ಕ್ಕೂ ಅಧಿಕ ಸಿ ಆರ್ ಪಿಎಫ್ ವಾಹನಗಳನ್ನು ಗುರಿಯನ್ನಾಗಿಸಿ ಈ ಕೃತ್ಯ ಎಸಗಲಾಗಿದೆ. ಪ್ರತಿ ವಾಹನದಲ್ಲೂ 40 ರಿಂದ 45 ಸೈನಿಕರಿದ್ದರು.

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರ ದಾಳಿ, 18 ಸಿಬ್ಬಂದಿ ಹುತಾತ್ಮ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರ ದಾಳಿ, 18 ಸಿಬ್ಬಂದಿ ಹುತಾತ್ಮ

2016ರ ಸೆಪ್ಟೆಂಬರ್ ನಲ್ಲಿ ಉರಿ ಪ್ರದೇಶದಲ್ಲಿ 23 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಮೋದಿ ಸರ್ಕಾರವು ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನ ಸೇನಾ ಕ್ಯಾಂಪ್ ಗಳನ್ನು ಧ್ವಂಸಗೊಳಿಸಿತ್ತು.

English summary
Adil Dar can be seen brandishing rifles and standing in front of Jaish-e-Mohammed banners in the video. Dar claims in the video he joined the ranks of the banned terror outfit last year and after a year, he has been "assigned" the task of the deadly attack. He adds that when the video is released, he will be in jannat (heaven).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X