ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿಗೂ ಮೊದಲು ಹುತಾತ್ಮ ಯೋಧ ಪತ್ನಿಗೆ ಕಳಿಸಿದ ಕಟ್ಟಕಡೆಯ ವಿಡಿಯೋ!

|
Google Oneindia Kannada News

Recommended Video

Pulwama : ಹುತಾತ್ಮನಾದ ಯೋಧನ ಕೊನೇ ವಿಡಿಯೋ ವೈರಲ್ | Oneindia Kannada

ಶ್ರೀನಗರ, ಫೆಬ್ರವರಿ 23: ಪುಲ್ವಾಮಾದ ಭಯಂಕರ ಘಟನೆ ನಡೆವ ಕೆಲವೇ ಕ್ಷಣ ಮೊದಲು ಯೋಧನೊಬ್ಬ ತನ್ನ ಪತ್ನಿಗೆ ಕಳಿಸಿದ ಕಟ್ಟಕಡೆಯ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಗುರುವಾರ ಘಟನೆ ನಡೆವ ಮೊದಲು ಪತ್ನಿಯ ಮೊಬೈಲ್ ಗೆ ಸುಖ್ಜಿಂದರ್ ಸಿಂಗ್ ಎಂಬುವವರು ವಿಡೀಯೋ ಕಳಿಸಿದ್ದಾರೆ.

ಈ ವಿಡೀಯೋ ಕಳಿಸಿದ ಕೆಲವೇ ಕ್ಷಣಗಳ ನಂತರ ಯೋಧ ಹುತಾತ್ಮರಾದ ಸುದ್ದಿ ಪತ್ನಿಗೆ ತಲುಪಿದೆ! ಆದರೆ ಪತಿ ಕಳಿಸಿದ ವಿಡಿಯೋವನ್ನು ಪತ್ನಿ ನೋಡಿದ್ದು ಶುಕ್ರವಾರ!

ವಿಡಿಯೋ: ಪತಿಯ ಕಳೇಬರದ ಮುಂದೆ ನಿಂತರೂ ಆಕೆಯ ಕಣ್ಣಲ್ಲಿ ಹನಿ ನೀರಿಲ್ಲ!ವಿಡಿಯೋ: ಪತಿಯ ಕಳೇಬರದ ಮುಂದೆ ನಿಂತರೂ ಆಕೆಯ ಕಣ್ಣಲ್ಲಿ ಹನಿ ನೀರಿಲ್ಲ!

ಅಷ್ಟರಲ್ಲಿ ಪತಿ ಬದುಕಿರಲೇ ಇಲ್ಲ! ಈ ಮನಕಲಕುವ ಸನ್ನಿವೇಶವನ್ನು ಅವರ ಪತ್ನಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಆ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಕೆಲವು ನ್ಯೂಸ್ ಚಾನೆಲ್ ಗಳು ಈ ಕಟ್ಟಕಡೆಯ ವಿಡಿಯೋವನ್ನು ಪ್ರಸಾರ ಮಾಡಿವೆ.

ವಿಡಿಯೋ ನೋಡುವ ಹೊತ್ತಿಗೆ ಪತಿ ಬದುಕಿರಲಿಲ್ಲ!

ಪುಲ್ವಾಮಾ ಘಟನೆ ಘಟನೆ ನಡೆಯುವ ಮುನ್ನ 76 ಬೆಟಾಲಿಯನ್ ನ ಸುಖ್ಜಿಂದರ್ ಸಿಂಗ್ ಎಂಬ ಯೋಧರೊಬ್ಬರು ತಮ್ಮ ಪತ್ನಿಗೆ ವಿಡಿಯೋ ಮೆಸೇಜ್ ಕಳಿಸಿದ್ದರು. ತಾವು ಬಸ್ಸಿನಲ್ಲಿ ತೆರಳುತ್ತಿರುವ ಈ ವಿಡಿಯೋವನ್ನು ಅವರು ಕಳಿಸಿದ ದಿನ ಪತ್ನಿ ನೋಡಿಲ್ಲ. ಆದರೆ ಶುಕ್ರವಾರ ಆ ವಿಡಿಯೋವನ್ನು ನೋಡುವ ಹೊತ್ತಿಗೆ ಪತಿ ಬದುಕಿರಲೇ ಇಲ್ಲ! ಈ ವಿಡಿಯೋವನ್ನು ಅವರ ಪತ್ನಿ ಇದೀಗ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಸ್ಫೋಟ ನಡೆವಾಗಲೂ ಪತಿಯೊಂದಿಗೆ ಫೋನಿನಲ್ಲಿದ್ದ ಯೋಧನ ಪತ್ನಿಸ್ಫೋಟ ನಡೆವಾಗಲೂ ಪತಿಯೊಂದಿಗೆ ಫೋನಿನಲ್ಲಿದ್ದ ಯೋಧನ ಪತ್ನಿ

ಕೊನೆಯ ಕ್ಷಣ ಎಂಬುದು ಯಾರಿಗೂ ಗೊತ್ತಿರಲಿಲ್ಲ!

ಕೊನೆಯ ಕ್ಷಣ ಎಂಬುದು ಯಾರಿಗೂ ಗೊತ್ತಿರಲಿಲ್ಲ!

ಈ ವಿಡಿಯೋ ನೋಡಿದರೆ, ಇದೇ ತಮ್ಮ ಕೊನೆಯ ಕ್ಷಣ ಎಂಬುದು ಆ ಬಸ್ಸಿನಲ್ಲಿದ್ದ ಯಾವ ಯೋಧರಿಗೂ ಪಾಪ ಗೊತ್ತಿರಲಿಲ್ಲ. ಕೆಲವೇ ಕ್ಷಣದಲ್ಲಿ ಉಗ್ರದಾಳಿ ನಡೆದು, ತಾವೆಲ್ಲ ಈ ಲೋಕದಿಂದಲೇ ದೂರಾಗುತ್ತೇವೆ ಎಂಬ ಪರಿವೆಯೇ ಇಲ್ಲದೆ, ಎಲ್ಲರೂ ಸಂತಸದಿಂದಿರುವುದನ್ನು ಕಂಡರೆ ಕರುಳು ಕಿವುಚುತ್ತದೆ.

ಭಾವುಕ ವಿಡಿಯೋ: ಮುದ್ದುಮಗಳ ಮುಗ್ಧದನಿಯಲ್ಲಿ ಇಣುಕುವ ಹುತಾತ್ಮ ಅಪ್ಪ ಭಾವುಕ ವಿಡಿಯೋ: ಮುದ್ದುಮಗಳ ಮುಗ್ಧದನಿಯಲ್ಲಿ ಇಣುಕುವ ಹುತಾತ್ಮ ಅಪ್ಪ

ಸ್ಫೋಟ ನಡೆವಾಗ ಪತಿಯೊಂದಿಗೆ ಮಾತನಾಡುತ್ತಿದ್ದರು!

ಸ್ಫೋಟ ನಡೆವಾಗ ಪತಿಯೊಂದಿಗೆ ಮಾತನಾಡುತ್ತಿದ್ದರು!

ಪುಲ್ವಾಮಾ ದಾಳಿ ನಡೆಯುವುದಕ್ಕೂ ಮುನ್ನ ಉತ್ತರ ಪ್ರದೇಶದ ಕಾನ್ಪುರದ ಹುತಾತ್ಮ ಯೋಧ ಪ್ರದೀಪ್ ಸಿಂಗ್ ಯಾದವ್ ತಮ್ಮ ಪತ್ನಿ ನೀರಜಾ ಅವರಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರೊಂದಿಗೆ ಮಾತನಾಡುತ್ತಿದ್ದಾಗಲೇ ಸ್ಫೋಟದ ಸದ್ದು ಕೇಳಿಸಿ, ನಂತರ ಸಂಪರ್ಕ ಕಡಿದು ಹೋಯಿತು ಎಂದು ಪತ್ನಿ ನೀರಜಾ ಅವರೇ ನಂತರ ಮಾಧ್ಯಮಗಳ ಮುಂದೆ ದುಃಖ ಹಂಚಿಕೊಂಡಿದ್ದರು.

ಫೆಬ್ರವರಿ 14

ಫೆಬ್ರವರಿ 14

ಫೆಬ್ರವರಿ 14 ರಂದು ಸೇನಾಬಸ್ಸಿನಲ್ಲಿ ತೆರಳುತ್ತಿದ್ದ ಸಿಆರ್ ಪಿಎಫ್ ಯೋಧರ ಮೇಲೆ ಪಾಕಿಸ್ತಾನ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯ ಉಗ್ರ ಆದಿಲ್ ದಾರ್ ಎಂಬಾತ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಒಟ್ಟು 44 ಯೋಧರು ಹುತಾತ್ಮರಾಗಿದ್ದರು.

English summary
Few minutes before the suicide attack on a CRPF convoy in Jammu and Kashmir's Pulwama on February 14, a CRPF braveheart had sent a video to his wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X