ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿಗೆ ಬಳಸಿದ್ದು ಮಾರುತಿ ಸಂಸ್ಥೆ ನಿರ್ಮಿತ ವಾಹನ!

|
Google Oneindia Kannada News

Recommended Video

Pulwama : ಪುಲ್ವಾಮದಲ್ಲಿ ನಡೆದ ದಾಳಿಗೆ ಉಗ್ರರು ಬಳಸಿದ ಕಾರಿನ ಬಗ್ಗೆ ಮಾಹಿತಿ ಬಹಿರಂಗ

ಶ್ರೀನಗರ, ಫೆಬ್ರವರಿ 20: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೂರ್ ನಲ್ಲಿ ನಡೆದ ಆತ್ಮಾಹುತಿ ದಾಳಿಗೆ ಬಳಸಿದ ವಾಹನ ಯಾವುದು ಎಂಬ ರಹಸ್ಯ ಈಗ ಬಹಿರಂಗವಾಗಿದೆ. ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನ್ನ ತನಿಖೆಯನ್ನು ತೀವ್ರಗೊಳಿಸಿದ್ದು, ದಾಳೀಗೆ ಬಳಸಿದ ವಾಹನ ಮಾರುತಿ ಸಂಸ್ಥೆಯ ಎಕೋ ಕಾರು ಎಂದು ತಿಳಿದು ಬಂದಿದೆ.

ಪ್ರಾಥಮಿಕ ಹಂತದ ತನಿಖೆಯಲ್ಲಿ ಘಟನಾ ಸ್ಥಳದಲ್ಲಿ ಸಿಕ್ಕಿದ ವಸ್ತುಗಳಿಂದ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ, ಬಂಪರ್ ವೊಂದರಲ್ಲಿದ್ದ ನಂಬರ್ ನೋಡಿದ ಬಳಿಕ ಸ್ಕಾರ್ಪಿಯೋ ವಾಹನ ಬಳಸಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ನಂತರ ಎಕೋ ಎಂದು ದೃಢಪಟ್ಟಿದೆ.

ಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯ ಪಾಕಿಸ್ತಾನಿ ವಿರುದ್ಧ ಸೈಬರ್ ವಾರ್, ಹ್ಯಾಕರ್ ಅಂಶುಲ್ ಹೇಳಿದ ಸತ್ಯ

ಎಕೋ ವಾಹನದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಮಾರುತಿ ಸಂಸ್ಥೆಯ ಅಧಿಕಾರಿಗಳು, ಪುಲ್ವಾಮಾಕ್ಕೆ ತೆರಳಿದ್ದು, ತನಿಖಾ ಸಂಸ್ಥೆಗೆ ನೆರವಾಗಲಿದ್ದಾರೆ. ಮಾರುತಿ ಸಂಸ್ಥೆಯ ಡೇಟಾಬೇಸ್ ನಿಂದ ಸಿಕ್ಕಿರುವ ಸಂಖ್ಯೆ ಹಾಗೂ ಸಾಕ್ಷಿಗಳ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಎನ್ಐಎ ತಂಡದವರು ಒನ್ಇಂಡಿಯಾ ಪ್ರತಿನಿಧಿಗೆ ತಿಳಿಸಿದರು.

Pulwama attack: Maruti team holds key to ownership details of car

ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು ಕಾಶ್ಮೀರದಿಂದ ವಾಪಸ್ ಬಂದ ಪತ್ರಕರ್ತ ರವಿ ಬೆಳಗೆರೆ ಹಂಚಿಕೊಂಡ ಎದೆ ನಡುಗಿಸುವ ಮಾಹಿತಿಗಳು

ವಾಹನ ಖರೀದಿ, ವಾಹನದ ಮಾಲೀಕರು ಇನ್ನಿತರ ಮಾಹಿತಿಗಳು ಈ ತನಿಖೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಸದ್ಯಕ್ಕೆ ಈ ಘಟನೆಯ ಹೊಣೆ ಹೊತ್ತಿರುವ ಜೈಶ್ ಎ ಮೊಹಮ್ಮದ್ ನ ಮೌಲನಾ ಮಸೂದ್ ಅಜರ್ ನ ಅಳಿಯ ಮೊಹಮ್ಮ ಉಮೇರ್ ಕಾರಣ ಎಂದು ತಿಳಿದು ಬಂದಿದೆ.

'ಪ್ರತ್ಯೇಕತಾವಾದಿಗಳನ್ನು ದಕ್ಷಿಣ ಭಾರತದ ಜೈಲಿಗೆ ಹಾಕಿ' 'ಪ್ರತ್ಯೇಕತಾವಾದಿಗಳನ್ನು ದಕ್ಷಿಣ ಭಾರತದ ಜೈಲಿಗೆ ಹಾಕಿ'

ಫೆ.14 ರಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಆವಂತಿಪೊರ ಎಂಬಲ್ಲಿ ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು

English summary
With the investigators more or less ascertaining that a Maruti Eeco was used in the Pulwama attack, a team from the automobile manufacturer visited the blast site to gather more details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X