ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿ ಸಂಚುಕೋರ ಅಬ್ದುಲ್ ರಶೀದ್ ಘಾಜಿ ಸುಳಿವು ಪತ್ತೆ

|
Google Oneindia Kannada News

ಜಮ್ಮು, ಫೆಬ್ರವರಿ 16: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14 ರಂದು ನಡೆದ ಭೀಕರ ಉಗ್ರದಾಳಿಯ ಸಂಚುಕೋರ ಎಂದು ನಂಬಲಾದ ಅಬ್ದುಲ್ ರಶೀದ್ ಘಾಜಿಯ ಸುಳಿವು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪುಲ್ವಾಮಾ ಅಥವಾ ಟ್ರಾಲ್ ಪ್ರದೇಶದ ಕಾಡಿನಲ್ಲಿ ರಶೀದ್ ಇದ್ದಿರುವ ಸುಳಿವು ಲಭ್ಯವಾಗಿದ್ದು ಆತನ ಪತ್ತೆಗೆ ಸಕಲ ಪ್ರಯತ್ನವನ್ನೂ ನಡೆಸಲಾಗುತ್ತಿದೆ. ಪುಲ್ವಾಮಾ ಸಮೀಪದ ಕಾಡಿನಲ್ಲೇ ಕುಳಿತು ಆತ ಈ ಎಲ್ಲಾ ದಾಳಿಯ ರೂಪುರೇಷೆಯನ್ನೂ, ಅದು ನಡೆಯಬೇಕಾದ ವಿಧಾನದ ಮಾರ್ಗದರ್ಶನವನ್ನೂ ಮಾಡುತ್ತಿದ್ದ ಎನ್ನಲಾಗುತ್ತಿದೆ.

ಗುಪ್ತಚರ ಇಲಾಖೆ ದಾರಿ ತಪ್ಪಿಸಲು ಉಗ್ರ ಸಂಘಟನೆಯ ಹೊಸ ತಂತ್ರ ಗುಪ್ತಚರ ಇಲಾಖೆ ದಾರಿ ತಪ್ಪಿಸಲು ಉಗ್ರ ಸಂಘಟನೆಯ ಹೊಸ ತಂತ್ರ

ಪಾಕಿಸ್ತಾನ ಮೂಲದ ಮೌಲಾನಾ ಮಸೂದ್ ಅಝರ್ ಎಂಬ ತನ್ನ ಬಾಸ್ ಮೂಲಕ ಸೂಚನೆ ಪಡೆಯುತ್ತಿದ್ದ ರಶೀದ್ ಭಾರತದಲ್ಲಿ ಇಂಥದೊಂದು ಘನಘೋರ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ.

Pulwama attack main conspirator Abdul Rashid Gazi traced

ರಶೀದ್ ನನ್ನು ಜೀವಂತ ಹಿಡಿಯಲು ಈಗಾಗಲೇ ಪ್ರಯತ್ನ ಆರಂಭವಾಗಿದೆ.

ಪುಲ್ವಾ,ಆಮಾದ ಅವಂತಿಪೊರ ಎಂಬಲ್ಲಿ ಗುರುವಾರ ಸಂಜೆ ಸಿಆರ್ ಪಿಎಫ್ ಬಸ್ ಮೇಲೆ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸುವ ಮೂಲಕ 44 ಯೋಧರು ಹುತಾತ್ಮರಾಗುವಂತೆ ಮಾಡಿದ್ದ.

ಪುಲ್ವಾಮಾ ದಾಳಿಯಲ್ಲಿ RDX ಬಳಸಲಾಗಿಲ್ಲ: ಪ್ರಾಥಮಿಕ ತನಿಖೆಪುಲ್ವಾಮಾ ದಾಳಿಯಲ್ಲಿ RDX ಬಳಸಲಾಗಿಲ್ಲ: ಪ್ರಾಥಮಿಕ ತನಿಖೆ

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐವರು ಶಂಕಿತರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ನಡುವೆ ಸ್ಫೋಟಕ್ಕೆ ಅಪಾಯಕಾರಿ ಸ್ಫೋಟಕವಾದ ಆರ್ ಡಿಎಕ್ಸ್ ಅನ್ನು ಬಳಸಲಾಗಿಲ್ಲ ಎಂದು ಪ್ರಾಥಮಿಕ ತನಿಖೆ ಹೇಳಿದೆ.

English summary
The investigators probing the Pulwama attack case have reportedly traced Abdul Rashid Gazi, who is believed to be the main conspirator of Pulwama terror attack case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X