ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂಂಚ್; ಉಗ್ರರ ವಿರುದ್ಧ ಕಾರ್ಯಾಚರಣೆ 10ನೇ ದಿನಕ್ಕೆ!

|
Google Oneindia Kannada News

ಶ್ರೀನಗರ, ಅಕ್ಟೋಬರ್ 20; ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆ ಬುಧವಾರ 10ನೇ ದಿನಕ್ಕೆ ಕಾಲಿಟ್ಟಿದೆ. ಸುಮಾರು 13 ವರ್ಷಗಳ ಬಳಿಕ ಪೂಂಚ್‌ ಮತ್ತೊಂದು ಬಹುದೊಡ್ಡ ಉಗ್ರರ ಜೊತೆಗಿನ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ.

ಅಕ್ಟೋಬರ್ 11ರಂದು ಪೂಂಚ್‌ ಜಿಲ್ಲೆಯಲ್ಲಿ ಉಗ್ರರ ಜೊತೆ ಆರಂಭವಾದ ಎನ್‌ಕೌಂಟರ್ ಬುಧವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಉಗ್ರರ ದೊಡ್ಡ ಗುಪೊಂದು ಅಡಗಿಗೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಆರಂಭಗೊಂಡ ಕಾರ್ಯಾಚರಣೆ ಇನ್ನೂ ನಡೆಯುತ್ತಲೇ ಇದೆ.

ಪೂಂಚ್‌ನಲ್ಲಿ ಉಗ್ರರು: ಅಡಗಿ ಕುಳಿತವರ ವಿರುದ್ಧ ಅಂತಿಮ ಸೇನಾ ಕಾರ್ಯಾಚರಣೆಪೂಂಚ್‌ನಲ್ಲಿ ಉಗ್ರರು: ಅಡಗಿ ಕುಳಿತವರ ವಿರುದ್ಧ ಅಂತಿಮ ಸೇನಾ ಕಾರ್ಯಾಚರಣೆ

ಉಗ್ರರಿಗಾಗಿ ಹುಡುಕಾಟ ಆರಂಭಿಸಿದ ಭದ್ರತಾ ಪಡೆಗಳು ಗುಂಡಿನ ಚಕಮಕಿಯನ್ನು ಆರಂಭಿಸಿದವು. ಅಕ್ಟೋಬರ್ 11ರಂದು ಎನ್‌ಕೌಂಟರ್‌ನಲ್ಲಿ ಒಬ್ಬರು ಜೆಓಸಿ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಅಕ್ಟೋಬರ್ 14ರಂದು ಮತ್ತೊಂದು ಸುತ್ತಿನ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಯೋಧರು ಹುತಾತ್ಮರಾದರು.

ಜಮ್ಮು ಮತ್ತು ಕಾಶ್ಮೀರ: ಎರಡು ವಾರದಲ್ಲಿ ಒಟ್ಟು 15 ಉಗ್ರರ ಹತ್ಯೆಜಮ್ಮು ಮತ್ತು ಕಾಶ್ಮೀರ: ಎರಡು ವಾರದಲ್ಲಿ ಒಟ್ಟು 15 ಉಗ್ರರ ಹತ್ಯೆ

ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಜೆಓಸಿ ಮತ್ತು ಯೋಧರ ಮೃತದೇಹ ಪತ್ತೆಯಾಗಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆ ಆರಂಭವಾದ ಬಳಿಕ 9 ಯೋಧರು, ಇಬ್ಬರು ಜೆಓಸಿಗಳು ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆ ವಿಶೇಷವಾಗಿ ತರಬೇತಿ ಪಡೆದ ಪ್ಯಾರಾ-ಕಾಮಾಂಡೋ ಪಡೆಯನ್ನು ಈ ಸ್ಥಳದಲ್ಲಿ ಕಾರ್ಯಾಚರಣೆಗೆ ನಿಯೋಜನೆ ಮಾಡಿದೆ.

ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಬಿಹಾರ ಕಾರ್ಮಿಕರ ಹತ್ಯೆಯ ಹೊಣೆ ಹೊತ್ತ ಲಷ್ಕರ್!ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಬಿಹಾರ ಕಾರ್ಮಿಕರ ಹತ್ಯೆಯ ಹೊಣೆ ಹೊತ್ತ ಲಷ್ಕರ್!

ಆಧುನಿಕ ಶಸ್ತ್ರಾಸ್ತ್ರ ಬಳಕೆ

ಆಧುನಿಕ ಶಸ್ತ್ರಾಸ್ತ್ರ ಬಳಕೆ

ದಟ್ಟ ಕಾಡಿನ ನಡುವೆ ಉಗ್ರರ ಗುಂಪು ಅಡಗಿದೆ ಎಂಬ ಮಾಹಿತಿ ಇದೆ. ಮಾಧ್ಯಮಗಳನ್ನು ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಿಂದ 11 ಕಿ. ಮೀ. ದೂರದಲ್ಲಿವೆ. ಡ್ರೋನ್ ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಉಗ್ರರನ್ನು ಸೆದೆ ಬಡಿಯಲು ಬಳಕೆ ಮಾಡಲಾಗುತ್ತಿದೆ. ಎಷ್ಟು ಜನ ಉಗ್ರರು ಅಡಗಿದ್ದಾರೆ? ಎಂಬ ಬಗ್ಗ ಖಚಿತವಾ ಯಾವುದೇ ಮಾಹಿತಿ ಇಲ್ಲ.

ಭಾರತೀಯ ಸೇನಾ ಮುಖ್ಯಸ್ಥ ಎಂ. ಎಂ. ನಾರ್ವಾನೆ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಮಂಗಳವಾರ ಅವರು ಸ್ಥಳದಿಂದ ವಾಪಸ್ ಆಗಿದ್ದು, ಭದ್ರತಾ ಪಡೆಗಳು ಅಂತಿಮ ಹಂತದ ಕಾರ್ಯಾಚರಣೆಗೆ ಸಿದ್ಧಗೊಳ್ಳುತ್ತಿವೆ.

ಸ್ಥಳೀಯರನ್ನು ವಶಕ್ಕೆ ಪಡೆಯಲಾಗಿದೆ

ಸ್ಥಳೀಯರನ್ನು ವಶಕ್ಕೆ ಪಡೆಯಲಾಗಿದೆ

ಸ್ಥಳೀಯ ಮಸೀದಿಗಳಲ್ಲಿರುವ ಮೈಕ್‌ಗಳ ಮೂಲಕ ಜಮೀನಿಗೆ ತೆರಳಿರುವ ಜನರು ಮನೆಗೆ ವಾಪಸ್ ಆಗಬೇಕು. ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರಬಾರದು ಎಂದು ಘೋಷಣೆ ಮಾಡಲಾಗುತ್ತಿದೆ. ಉಗ್ರರಿಗೆ ಸಹಕಾರ ನೀಡಿದ ಆರೋಪದ ಮೇಲೆ ಹಲವಾರು ಸ್ಥಳೀಯರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪೂಂಚ್ ಪ್ರದೇಶದ ಕಾಡಿನಲ್ಲಿ ಉಗ್ರರ ಗುಂಪು ಅಡಗಿದೆ. ದಟ್ಟವಾದ ಕಾಡಿನ ಪ್ರದೇಶ ಇದಾಗಿದ್ದು, ಉಗ್ರರನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ. ತಜ್ಞರು ಪಾಕಿಸ್ತಾನ ಸೇನೆಯ ಅಧಿಕಾರಿಗಳು ಉಗ್ರರಿಗೆ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದು ಸಹ ಶಂಕಿಸಿದ್ದಾರೆ.

2009ರ ಕಾರ್ಯಚರಣೆ ನೆನಪು

2009ರ ಕಾರ್ಯಚರಣೆ ನೆನಪು

2009ರಲ್ಲಿ ಇದೇ ಪೂಂಚ್‌ ಜಿಲ್ಲೆಯಲ್ಲಿ ಅತಿ ದೊಡ್ಡ ಕಾರ್ಯಾಚರಣೆ ನಡೆದಿತ್ತು. ಜನವರಿ 1 ರಿಂದ 9ರ ತನಕ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬರು ಜೆಓಸಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದರು. ನಾಲ್ವರು ಉಗ್ರರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಆದರೆ ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಯಾವುದೇ ಮೃತದೇಹ ಪತ್ತೆಯಾಗಿರಲಿಲ್ಲ.

ಈಗ ನಡೆಯುತ್ತಿರುವ ಕಾರ್ಯಾಚರಣೆ ಬುಧವಾರ 10ನೇ ದಿನಕ್ಕೆ ಕಾಲಿಟ್ಟಿದೆ. ಉಗ್ರರು ಸುಮಾರು 2 ತಿಂಗಳಿನಿಂದ ಈ ಪ್ರದೇಶದಲ್ಲಿ ಅಡಗಿದ್ದಾರೆ ಎಂದು ಶಂಕಿಸಲಾಗಿದೆ. ಆಗಸ್ಟ್‌ನಲ್ಲಿ ಪೂಂಚ್‌ ವಲಯದಲ್ಲಿ ಹಲವಾರು ಉಗ್ರರ ದಾಳಿ ಪ್ರಕರಣಗಳು ನಡೆದಿದ್ದವು. ಈ ದಾಳಿಯಲ್ಲಿ ಇಲ್ಲಿ ಅಡಗಿರುವ ಉಗ್ರರು ಭಾಗಿಯಾಗಿದ್ದಾರೆ ಎಂದು ಸಹ ಶಂಕಿಸಲಾಗಿದೆ.

ಎರಡು ದೊಡ್ಡ ಎನ್‌ಕೌಂಟರ್‌ಗಳು

ಎರಡು ದೊಡ್ಡ ಎನ್‌ಕೌಂಟರ್‌ಗಳು

370ನೇ ವಿಧಿ ರದ್ದುಗೊಳಿಸಿದ 2ನೇ ವರ್ಷದ ದಿನದ ಬಳಿಕ ಅಂದರೆ ಆಗಸ್ಟ್ 6ರಂದು ನಡೆದ ಎನ್‌ಕೌಂಟರ್‌ನಲ್ಲಿ ರಾಜೋರಿ ಸಮೀಪ ಕಾಡಿನಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಆಗಸ್ಟ್ 19ರಂದು ಮತ್ತೊಂದು ಎನ್‌ಕೌಂಟರ್ ನಡೆದಿತ್ತು. ಒಬ್ಬ ಉಗ್ರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಈ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಉಗ್ರರು ಈಗ ಕಾಡಿನಲ್ಲಿ ಅಡಗಿರುವ ಉಗ್ರರ ಗುಂಪಿನ ಭಾಗವಾಗಿರಬಹುದು ಎಂದು ಶಂಕಿಸಲಾಗಿದ್ದು, ಅವರನ್ನು ಹುಡುಕಿ ಸದೆ ಬಡಿಯಲು ಕಾರ್ಯಾಚರಣೆಯನ್ನು ಯೋಧರು ಮುಂದುವರೆಸಿದ್ದಾರೆ.

English summary
In Poonch district operation was launched against terrorists on October 11 and it's tenth day. After 13 years this is the biggest encounter with terrorists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X