• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿಓಕೆಯಲ್ಲಿನ ಶಾರದಾ ಪೀಠದಲ್ಲಿ 72 ವರ್ಷಗಳ ನಂತರ ಪೂಜೆ

|

ಶ್ರೀನಗರ, ಅಕ್ಟೋಬರ್ 08: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಾರದಾ ಪೀಠದಲ್ಲಿ ಬರೋಬ್ಬರಿ 72 ವರ್ಷಗಳ ನಂತರ ಹಿಂದೂ ದಂಪತಿಯೊಬ್ಬರು ಪೂಜೆ ನೆರವೇರಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ತೆರವುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿನ ಹಲವು ಹಿಂದೂ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗುತ್ತಿದ್ದು, ಭಾರತ ಅಧ್ಯಾತ್ಮಿಕ ಇತಿಹಾಸದಲ್ಲಿ ಪ್ರಮುಖವಾಗಿರುವ ಶಂಕರಾಚಾರ್ಯರಿಂದ ಸ್ಥಾಪಿತವಾದ ಶಾರದಾ ಪೀಠದಲ್ಲಿ ಎಪ್ಪತ್ತೆರಡು ವರ್ಷಗಳ ನಂತರ ಪೂಜೆ ನಡೆಸಲಾಗಿದೆ.

ಪಿ.ಟಿ.ವೆಂಕಟರಾಮನ್ ಮತ್ತು ಸುಜಾತಾ ದಂಪತಿ ಕೆಲವು ದಿನಗಳ ಹಿಂದೆ ಪಿಓಕೆಯಲ್ಲಿರುವ ಶಾರದಾ ಪೀಠದ ಬಳಿ ಪೂಜೆ ನಡೆಸಿದ್ದಾರೆ. ಭಾರತೀಯರಾದ ಇವರು ಹಾಂಕ್‌ಕಾಂಗ್‌ನಲ್ಲಿ ವಾಸವಿದ್ದು, ಶಾರದಾ ಪೀಠಕ್ಕೆ ಪೂಜೆ ಸಲ್ಲಿಸಲೆಂದೇ ಆಗಮಿಸಿದ್ದರು.

ವೆಂಕಟರಾಮನ್ ಮತ್ತು ಸುಜಾತಾ ದಂಪತಿಯಿಂದ ಪೂಜೆ

ವೆಂಕಟರಾಮನ್ ಮತ್ತು ಸುಜಾತಾ ದಂಪತಿಯಿಂದ ಪೂಜೆ

'ಸೇವ್ ಶಾರದಾ ಕಮ್ಯೂನಿಟಿ' ಹಾಗೂ ಪಿಓಕೆ ಯಲ್ಲಿ ಸಾಮಾಜಿಕ ಸಂಸ್ಥೆಗಳ ಸಂಯುಕ್ತ ನೆರವಿನಿಂದಾಗಿ ಈ ಪೂಜೆ ನೆರವೇರಿದ್ದು, ಪೂಜೆಯನ್ನು ವೆಂಕಟರಾಮನ್ ಮತ್ತು ಸುಜಾತಾ ದಂಪತಿ ಮಾಡಿದ್ದಾರೆ. ದೇವಿ ಶಾರದೆ ಹಾಗೂ ಸ್ವಾಮಿ ನಂದಲಾಲ್ ಜೀ ಅವರ ಚಿತ್ರಗಳನ್ನು ಇರಿಸಿ ಪೂಜೆ ನಡೆಸಲಾಗಿದೆ.

ಪಾಕಿಸ್ತಾನ ಹಿಂದೂ ಕೌನ್ಸಿಲ್ ಸಹಾಯ ಮಾಡಿದೆ

ಪಾಕಿಸ್ತಾನ ಹಿಂದೂ ಕೌನ್ಸಿಲ್ ಸಹಾಯ ಮಾಡಿದೆ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ತೆಗೆದ ನಂತರ ಪಿಓಕೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಇದರ ನಡುವೆಯೂ ಸೂಕ್ತ ಭದ್ರತೆಯ ನಡುವೆಯೇ ಈ ಜೋಡಿ ಪೂಜೆ ನೆರವೇರಿಸಿದ್ದಾರೆ. ಪಾಕಿಸ್ತಾನ ಹಿಂದೂ ಕೌನ್ಸಿಲ್ ಸಹ ಈ ದಂಪತಿಯ ಪೂಜೆಗೆ ಸಹಕಾರ ನೀಡಿದೆ.

ಶಾರದಾ ಪೂಜೆಯ ವಿಡಿಯೋ ವೈರಲ್

ಶಾರದಾ ಪೂಜೆಯ ವಿಡಿಯೋ ವೈರಲ್

ದಂಪತಿಯು ಶಾರದಾ ಪೀಠದ ಸಮೀಪದಲ್ಲೇ ಹರಿಯುವ ಗಂಗೆಯ ಬಳಿ ಪೂಜೆ ಮಾಡಿದ್ದು, ಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಸಾವಿರಾರು ಶೇರ್‌ಗಳನ್ನು ಕಂಡಿದೆ.

ಹದಿನೆಂಟು ಶಕ್ತಿಪೀಠಗಳಲ್ಲಿ ಶಾರದಾ ಪೀಠವೂ ಒಂದು

ಹದಿನೆಂಟು ಶಕ್ತಿಪೀಠಗಳಲ್ಲಿ ಶಾರದಾ ಪೀಠವೂ ಒಂದು

ಹದಿನೆಂಟು ಶಕ್ತಿಪೀಠಗಳಲ್ಲಿ ಶಾರದಾ ಪೀಠವೂ ಒಂದಾಗಿದ್ದು, ಇದೇ ವರ್ಷದ ಜೂನ್ 24ರಂದು ಐದು ಜನರ ವಿಶೇಷ ಸಮಿತಿಯು ಶಾರದಾ ಪೀಠಕ್ಕೆ ಭೇಟಿ ನೀಡಿತ್ತು. ಜಮ್ಮು ಕಾಶ್ಮೀರದಿಂದ ಶಾರದಾ ಪೀಠಕ್ಕೆ ದಾರಿಯನ್ನು ತೆರವುಗೊಳಿಸುವಂತೆ ಕೇಳಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pooja performed by Hindu couple in POK's Sharadha Peetha. After 72 years first time pooja has been performed in Sharadha Peetha. Video went viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more