ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆ ಜತೆಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

|
Google Oneindia Kannada News

Recommended Video

Prime Minister Narendra Modi celebrated Diwali with the Indian Army | Oneindia Kannada

ಶ್ರೀನಗರ್, ಅಕ್ಟೋಬರ್ 27: ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಬಳಿಯ ರಜೌರಿ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಜತೆಗೆ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದರು. ಸೇನಾ ದಿರಿಸಿನ ಬಣ್ಣದಲ್ಲೇ ಕಾಣಿಸಿಕೊಂಡ ಅವರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಾಥ್ ನೀಡಿದರು.

ಜತೆಗೆ ನಾರ್ಥರ್ನ್ ಆರ್ಮಿ ಕಮ್ಯಾಂಡರ್ ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್ ಕೂಡ ಯೋಧರಿಗೆ ಶುಭಾಶಯ ಕೋರಿದರು. ಈ ಶುಭ ಸಂದರ್ಭದಲ್ಲಿ ಸಿಹಿಯನ್ನು ಕೂಡ ವಿತರಿಸಲಾಯಿತು. ಯೋಧರ ಜತೆಗೆ ಹಬ್ಬವನ್ನು ಆಚರಿಸಿರುವ ಫೋಟೋಗಳನ್ನು ಇನ್ ಸ್ಟಾಗ್ರಾಮ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಮಂತ್ರಿ ಮೋದಿ ಹಂಚಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಾರತೀಯ ಸೇನೆಯ ಧೈರ್ಯವಂತ ಯೋಧರ ಜತೆಗೆ ದೀಪಾವಳಿ ಆಚರಿಸಲಾಗಿದೆ. ಈ ಧೈರ್ಯವಂತ ಸಿಬ್ಬಂದಿ ಜತೆಗೆ ಕಾಲ ಕಳೆಯುವುದು ಯಾವಾಗಲೂ ಬಹಳ ದೊಡ್ಡ ಸಂತೋಷವನ್ನು ನೀಡುತ್ತದೆ ಎಂದು ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

PM Modi Deepavali

ನಮ್ಮ ಯೋಧರ ಜತೆ ಸಂವಾದದ ವೇಳೆ, ಅವರ ಚರಿತ್ರಾರ್ಹ ಸಾಧನೆಗಾಗಿ ಭಾರತದ ಜನತೆ ಪರವಾಗಿ ಧನ್ಯವಾದ ಹೇಳಿದ್ದೇನೆ. ಅವರ ನಿಗಾ ಹಾಗೂ ಕಣ್ಗಾವಲಿನಿಂದ ನಮ್ಮ ದೇಶ ಸುರಕ್ಷಿತವಾಗಿದೆ. ಯೋಧರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ತೆಗೆದುಕೊಂಡ ಮುಖ್ಯ ಹೆಜ್ಜೆಗಳ ಬಗ್ಗೆ ಕೂಡ ಮಾತನಾಡಿದ್ದೇನೆ ಎಂದಿದ್ದಾರೆ.

PM Modi Deepavali

ಪಠಾಣ್ ಕೋಟ್ ವಾಯು ನೆಲೆಯಲ್ಲಿ ವಾಯುಸೇನೆ ಸಿಬ್ಬಂದಿ ಜತೆಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ತಿಂಗಳ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್'ನಲ್ಲಿ ಪ್ರಧಾನಿ ಮೋದಿ ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರಿದರು.

English summary
Auspicious Deepavali celebrated by PM Narendra Modi in Jammu and Kashmir's Rajauri district on Sunday with India army personnel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X