ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಚಾಲನೆ ಕೊಟ್ಟ ಮೋದಿ

|
Google Oneindia Kannada News

ನವದೆಹಲಿ, ಫೆಬ್ರವರಿ 26: 2ನೇ ಖೇಲೋ ಇಂಡಿಯಾ ಚಳಿಗಾಲದ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಇ -ಚಾಲನೆ ನೀಡಿದ ಪ್ರಧಾನಿ ಮೋದಿ ಅವರು ಉದ್ಘಾಟನಾ ಭಾಷಣ ಮಾಡಿದ್ದಾರೆ.

2021 ಫೆಬ್ರವರಿ 26 ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ 2 ನೇ ಖೇಲೋ ಇಂಡಿಯಾ ಚಳಿಗಾಲದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದಾರೆ.

PM Modi e-inaugurates Khelo India Winter Games at Gulmarg

ಕ್ರೀಡೆ ಟೈಂಪಾಸ್ ಆಗಿ ಉಳಿದಿಲ್ಲ:
ಕ್ರೀಡೆ ಇಂದು ಹವ್ಯಾಸ, ಟೈಂಪಾಸ್ ಆಗಿ ಉಳಿದಿಲ್ಲ, ಕಲಿಕೆಯ ವಿಧಾನವಾಗಿದ್ದು, ತಂಡದ ಸ್ಫೂರ್ತಿ, ಸೋಲು ಕಲಿಸುವ ಪಾಠ ಎಲ್ಲವೂ ಬದುಕಿನ ಭಾಗವಾಗಲಿದೆ. ನಮ್ಮ ಜೀವನ ಹಾಗೂ ಜೀವನಶೈಲಿಯನ್ನು ಕ್ರೀಡೆ ರೂಪಿಸುತ್ತದೆ. ಆತ್ಮಸ್ಥೈರ್ಯ, ವಿಶ್ವಾಸ ಹೆಚ್ಚಿಸುತ್ತದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಖೇಲೋ ಇಂಡಿಯಾ ಚಳಿಗಾಲದ ಆಟಗಳನ್ನು ಆಯೋಜಿಸುವ ಮೂಲಕ ಹೊಸ ಕ್ರೀಡಾ ಸಾಧ್ಯತೆಯನ್ನು ಮುಂದಿಡಲಾಗುತ್ತಿದೆ. ಇದು ಪ್ರವಾಸೋದ್ಯಮಕ್ಕೆ ಇಂಬು ನೀಡಲಿದೆ ಎಂದು ಹೇಳಿದರು.

2021 ರ ಫೆಬ್ರವರಿ 26 ರಿಂದ ಮಾರ್ಚ್ 2 ರವರೆಗೆ ಕ್ರೀಡಾಕೂಟ ನಡೆಯಲಿದೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಜಮ್ಮು ಮತ್ತು ಕಾಶ್ಮೀರದ ಕ್ರೀಡಾಮಂಡಳಿ ಮತ್ತು ಜಮ್ಮು ಕಾಶ್ಮೀರದ ಕ್ರೀಡಾ ಸಂಘಟನೆಗಳ ಸಹಯೋಗದಲ್ಲಿ ಚಳಿಗಾಲದ ಕ್ರೀಡಾ ಕೂಟ ಆಯೋಜಿಸಲಾಗಿದೆ. ಐಸ್ ಸ್ಟಾಕ್, ಐಸ್ ಸ್ಕೇಟಿಂಗ್, ಐಸ್ ಹಾಕಿ, ಸ್ಕೈ ಮೌಂಟನೀಯರಿಂಗ್, ಸ್ನೋಬೋರ್ಡಿಂಗ್, ನೊರ್ಡಿಕ್ ಸ್ಕೈ, ಅಲ್ಪೇನ್ ಸ್ಕೈಯಿಂಗ್ ಮತ್ತಿತರ ಕ್ರೀಡಾ ಪ್ರಕಾರಗಳು ನಡೆಯಲಿವೆ. 27 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕ್ರೀಡಾ ಮಂಡಳಿಗಳ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ.

English summary
Prime Minister Narendra Modi e-inaugurates 2nd Khelo India National Winter Games at Gulmarg today(February 26).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X