• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಗ್ರರ ಅಡಗುತಾಣದ ಮೇಲೆ ದಾಳಿ: ಚೀನಾದ ಶಸ್ತ್ರಾಸ್ತ್ರಗಳು ವಶ

|

ಶ್ರೀನಗರ, ಜುಲೈ 22: ರಜೌರಿಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆ ಜಂಟಿಯಾಗಿ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ತನಮಂಡಿ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.ಉಗ್ರರ ಅಡಗುತಾಣದಿಂದ 1 ಪೈಕ್ ರೈಫಲ್, 1 ಚೈನೀಸ್ ಪಿಸ್ತೂಲ್, 1 ನಾಡ ಬಂದೂಕು, 1 ಎಕೆ ಮ್ಯಾಗಜೀನ್, 2 ಪಿಸ್ತೂಲ್ ಮ್ಯಾಗಜಿನ್, 168 ಪಿಕಾ ಸುತ್ತುಗಳು, 47 ಎಕೆ ಸುತ್ತು​ಗಳು, 4 ಪಿಸ್ತೂಲ್ ಸುತ್ತುಗಳು, 2 ಯುಬಿಜಿಎಲ್ ಗ್ರೆನೇಡ್​​ಗಳು, 1 ಬೈನಾಕ್ಯುಲರ್, 8 ಮದ್ದುಗುಂಡು ಬೆಲ್ಟ್‌ಗಳು, 1 ಆಂಟೆನಾ ಮತ್ತು 1 ಟೇಪ್ ರೆಕಾರ್ಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು : ಮೂವರು ಉಗ್ರರ ಹತ್ಯೆ

ಥನಮಂಡಿಯ ಮನ್ಯಾಲ್ ಪ್ರದೇಶದಲ್ಲಿ ಉಗ್ರಗಾಮಿ ಅಡಗುತಾಣವಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕ ನಂತರ ವಿಶೇಷ ಕಾರ್ಯಾಚರಣೆ ಗುಂಪು ಮತ್ತು ರಾಷ್ಟ್ರೀಯ ರೈಫಲ್ಸ್ ತಂಡಗಳು ಮಂಗಳವಾರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.

ಇಡೀ ಪ್ರದೇಶವನ್ನು ಪೊಲೀಸ್ ಹಾಗೂ ಸೇನಾ ಕಣ್ಗಾವಲಿನಲ್ಲಿರಿಸಲಾಗಿತ್ತು ಮತ್ತು ಬುಧವಾರ ಬೆಳಗ್ಗೆ ಶೋಧ ಕಾರ್ಯಾಚರಣೆ ನಡೆಯಿತು, ಈ ವೇಳೆ ದಟ್ಟ ಪೊದೆಗಳಡಿ ಇದ್ದ ಉಗ್ರರ ಅಡಗುತಾಣವನ್ನು ಧ್ವಂಸಗೊಳಿಸಲಾಯಿತು ಎಂದು ರಾಜೌರಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ತಿಳಿಸಿದ್ದಾರೆ.

English summary
Security forces on Wednesday busted a terror hideout and seized a cache of arms and ammunition in Jammu and Kashmir’s Rajouri district, a senior police official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X