ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತೆ ಬಂಧನ

|
Google Oneindia Kannada News

ಶ್ರೀನಗರ, ನವೆಂಬರ್ 27: ತನ್ನನ್ನು ಮತ್ತೆ ವಶಕ್ಕೆ ಪಡೆದಿದ್ದು, ಮಗಳು ಇಲ್ಟಿಜಾಳನ್ನು ಗೃಹಬಂಧನದಲ್ಲಿ ಇರಿಸಿರುವುದಾಗಿ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಇಂದು ಆರೋಪಿಸಿದ್ದಾರೆ.

ಬಿಜೆಪಿ ಸಚಿವರು ಮತ್ತು ಅವರ ಕೈಗೊಂಬೆಗಳು ಕಾಶ್ಮೀರದ ಪ್ರತಿ ಮೂಲೆ ಮೂಲೆಗೂ ಭೇಟಿ ನೀಡುತ್ತಿದ್ದಾರೆ. ಆದರೆ ನನ್ನ ವಿಚಾರದಲ್ಲಿ ಮಾತ್ರ ಭದ್ರತೆಯ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.

ಮತ್ತೆ ಮೂವರು ಪಿಡಿಪಿ ನಾಯಕರ ರಾಜೀನಾಮೆ: ಮೆಹಬೂಬಾ ಮುಫ್ತಿಗೆ ಹಿನ್ನಡೆ ಮತ್ತೆ ಮೂವರು ಪಿಡಿಪಿ ನಾಯಕರ ರಾಜೀನಾಮೆ: ಮೆಹಬೂಬಾ ಮುಫ್ತಿಗೆ ಹಿನ್ನಡೆ

ಪಿಡಿಪಿ ಯುವ ಘಟಕದ ಅಧ್ಯಕ್ಷ ವಾಹೀದ್ ಉರ್ ರೆಹಮಾನ್ ಕುಟುಂಬ ಸದಸ್ಯರನ್ನು ಭೇಟಿಯಾಗಲು ತನಗೆ ಅವಕಾಶ ನೀಡುತ್ತಿಲ್ಲ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನಾವೀದ್ ಬಾಬು ಜತೆ ಸಂಪರ್ಕದಲ್ಲಿರುವ ಆರೋಪದಡಿ ವಾಹೀದ್‌ನನ್ನು ಬುಧವಾರ ಎನ್‌ಐಎ ಬಂಧಿಸಿತ್ತು.

PDP Chief Mehbooba Mufti Detained Again

ಉಗ್ರರ ಉಪಟಳ ಹೆಚ್ಚಿರುವ ಪುಲ್ವಾಮಾದಲ್ಲಿ ವಾಹೀದ್ ನವೆಂಬರ್ 28 ರಂದು ನಡೆಯಲಿರುವ ಮೊದಲ ಹಂತದ ಡಿಡಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.

ವಾಹೀದ್ ಉರ್ ರೆಹಮಾನ್ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿಗೆ ನಿಕಟವಾಗಿರುವುದಾಗಿ ವರದಿ ವಿವರಿಸಿದೆ.

ಆಪ್ತ ಸಹಾಯಕ ವಹೀದ್‌ ಪರ್ರಾ ಬಂಧನವನ್ನು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತೀಕ್ಷ್ಣವಾದ ಟೀಕೆಗಳ ಮೂಲಕ ಟೀಕಿಸಿದ್ದಾರೆ. ಮುಫ್ತಿ, ಗೃಹ ಸಚಿವ ರಾಜನಾಥ್ ಸಿಂಗ್ ಅವರ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು, "ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಿದ್ದಕ್ಕಾಗಿ ಎನ್ಐಎ ಆಧಾರರಹಿತ ಆರೋಪದ ಮೇಲೆ ಇಂದು ವಹೀದ್‌ ಪರ್ರಾ ಅವರನ್ನು ಬಂಧಿಸಿದೆ.

ವಹೀದ್‌ ಪರ್ರಾ ನವೆಂಬರ್ 20 ರಂದು ಡಿಡಿಸಿಗೆ ನಾಮಪತ್ರ ಸಲ್ಲಿಸಿದರು ಮತ್ತು ಮರುದಿನವೇ ಎನ್ಐಎ ಸಮನ್ಸ್ ಪಡೆದರು. ಇದು ಕಾಕತಾಳೀಯವಲ್ಲ" ಎಂದು ವ್ಯಂಗ್ಯವಾಡಿದ್ದಾರೆ.

English summary
People's Democratic Party (PDP) leader and former Jammu and Kashmir Chief Minister Mehbooba Mufti has alleged that she has been "illegally detained yet again" and that her daughter Iltija has been "placed under house arrest".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X