ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರದಲ್ಲಿ ಎರಡು ದಿನ ಹೆದ್ದಾರಿಯಲ್ಲಿ ನಾಗರಿಕರಿಗೆ ಪ್ರವೇಶ ನಿಷೇಧ, ಆಕ್ರೋಶ

|
Google Oneindia Kannada News

ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಏಪ್ರಿಲ್ 7: ಮುಖ್ಯವಾದ ಹೆದ್ದಾರಿಯಲ್ಲಿ ವಾರದಲ್ಲಿ ಎರಡು ದಿನ ನಾಗರಿಕರಿಗೆ ನಿಷೇಧ ಹೇರುವ ಕ್ರಮ ಭಾನುವಾರದಿಂದ ಜಾರಿಗೆ ಬಂದಿದ್ದು, ಈ ನಿಯಮಕ್ಕೆ ಜಮ್ಮು-ಕಾಶ್ಮೀರದಲ್ಲಿ ಎಲ್ಲ ಭೇದ ಮರೆತು, ರಾಜಕೀಯ ಪಕ್ಷಗಳು ಒಟ್ಟಾಗಿ ವಿರೋಧ ವ್ಯಕ್ತಪಡಿಸಿವೆ. ಈ ನಿಷೇಧವನ್ನು ವಿರೋಧಿಸುವಂತೆ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಜನರಿಗೆ ಕರೆ ನೀಡಿದ್ದಾರೆ.

ಈ ನಿಷೇಧವನ್ನು ಒಪ್ಪಿಕೊಳ್ಳಬೇಡಿ ಎಂದು ಜನರನ್ನು ಮನವಿ ಮಾಡುತ್ತೇನೆ. ಇದನ್ನು ವಿರೋಧಿಸಿ ಹಾಗೂ ನಿಮಗೆ ಬೇಕಾದ ಕಡೆ ಸಂಚರಿಸಿ. ಈ ನಿಷೇಧವನ್ನು ನಾವು ಕೋರ್ಟ್ ನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಆಕೆ ತಮ್ಮ ವಿಡಿಯೋ ಕೂಡ ಅಪ್ ಲೋಡ್ ಮಾಡಿದ್ದಾರೆ. ಪಿಡಿಪಿ ನಾಯಕರು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹಾಗೂ ಅವರ ಆಡಳಿತದ ವಿರುದ್ಧ ಪ್ರತಿಭಟಿಸಿದ್ದಾರೆ.

ಜಮ್ಮು-ಕಾಶ್ಮೀರ ಸೇನಾ ಶಿಬಿರದಲ್ಲಿ ನಿಗೂಢ ಸ್ಫೋಟಜಮ್ಮು-ಕಾಶ್ಮೀರ ಸೇನಾ ಶಿಬಿರದಲ್ಲಿ ನಿಗೂಢ ಸ್ಫೋಟ

ಇದು ಕಾಶ್ಮೀರ. ಪ್ಯಾಲೆಸ್ತೀನ್ ಅಲ್ಲ. ನಮ್ಮ ಪ್ರೀತಿಯ ಭೂಮಿಯನ್ನು ಬಯಲು ಬಂದೀಖಾನೆಯಾಗಿ ಮಾಡಲು ಬಿಡುವುದಿಲ್ಲ ಎಂದು ಆಕೆ ಹೇಳಿದ್ದಾರೆ. ಇನ್ನ್ನು ನ್ಯಾಷನಲ್ ಕ್ಯಾನ್ಫರೆನ್ಸ್ ನ ಒಮರ್ ಅಬ್ದುಲ್ಲಾ, ಇದು ಬುದ್ಧಿ ಇಲ್ಲದ ನಿಷೇಧ ಎಂದು ಕರೆದಿದ್ದಾರೆ. ಇನ್ನೂ ಅನೇಕ ನಾಯಕರು ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

jammu and Kashmir protest

ಪ್ರತಿ ಭಾನುವಾರ ಹಾಗೂ ಬುಧವಾರ ಬಾರಾಮುಲ್ಲಾದಿಂದ ಉಧಂಪುರ್ ತನಕ ಭದ್ರತಾ ಪಡೆಗಳ ವಾಹನಕ್ಕಾಗಿಯೇ ತೆರೆದಿಡಲಾಗುತ್ತದೆ. ಇನ್ನೂರಾ ಎಪ್ಪತ್ತು ಕಿ.ಮೀ. ಉದ್ದದ ಈ ಹೆದ್ದಾರಿಯಲ್ಲಿ ನಾಗರಿಕರ ಸಂಚಾರ ನಿಷೇಧಿಸಿ, ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಈ ಮಧ್ಯೆ ತುರ್ತು ಸಂದರ್ಭಗಳಲ್ಲಿ ಸಂಚರಿಸಲು ಮಾತ್ರ ಪಾಸ್ ವಿತರಿಸಲಾಗುತ್ತದೆ. ಅದರ ಪರಿಶೀಲನೆಗೆ ಕೆಲವರ ನೇಮಕ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನಿಹಾಲ್‌ ಸ್ಫೋಟ : ದಾಳಿಗೆ ಪೋನ್ ಮೂಲಕ ಸೂಚನೆ ಬಂದಿತ್ತುಬನಿಹಾಲ್‌ ಸ್ಫೋಟ : ದಾಳಿಗೆ ಪೋನ್ ಮೂಲಕ ಸೂಚನೆ ಬಂದಿತ್ತು

ಕಳೆದ ಫೆಬ್ರವರಿ ಹದಿನಾಲ್ಕನೇ ತಾರೀಕು ಜಮ್ಮು-ಶ್ರೀನಗರ್ ಹೆದ್ದಾರಿಯಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ನಡೆದು, ನಲವತ್ತು ಸಿಆರ್ ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದರು. ಬೆಂಗಾವಲು ಪಡೆಯ ವಾಹನದ ಮೇಲೆ ಉಗ್ರನೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ. ಅಂಥ ದಾಳಿಗಳು ನಡೆಯದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

English summary
Setting aside their differences, political parties in Jammu and Kashmir have come together in their opposition to the ban on civilian traffic for two days a week on an important highway that came into effect on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X