• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಯೋಧರ ಪಡಿತರದಲ್ಲಿ ವಿಷ ಬೆರೆಸಲು ಪಾಕ್ ಏಜೆಂಟ್‌ಗಳ ಷಡ್ಯಂತ್ರ

|

ಜಮ್ಮು ಮತ್ತು ಕಾಶ್ಮೀರ, ಮಾರ್ಚ್ 2: ಯೋಧರಿಗೆ ನೀಡುವ ಪಡಿತರದಲ್ಲಿ ವಿಷ ಬೆರೆಸಲು ಪಾಕ್ ಏಜೆಂಟ್‌ಗಳು ಷಡ್ಯಂತ್ರ ನಡೆಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಒಂದೆಡೆ ವಿಂಗ್ ಕಮಾಂಡರ್ ಪಾಕಿಸ್ತಾನದಿಂದ ಸುರಕ್ಷಿತವಾಗಿ ಬಂದಿರುವ ಖುಷಿ ಇದ್ದರೆ ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದ ಎಲ್‌ಓಸಿಯಲ್ಲಿ ಐದು ಕಡೆಗಳಲ್ಲಿ ಗುಂಡಿನ ದಾಳಿ ನಡೆದಿದ್ದು, ತ್ರಾಲ್‌ನಲ್ಲಿ ನಡೆದ ದಾಳಿಯಲ್ಲಿ 9 ತಿಂಗಳ ಮಗು ಸೇರಿ ಮೂರು ಮಂದಿ ಮೃತಪಟ್ಟಿದ್ದಾರೆ.

ಪುಲ್ವಾಮಾದಲ್ಲಿ ಸುಧಾರಿತ ಬಾಂಬ್ ಸ್ಫೋಟ, ಓರ್ವ ನಾಗರಿಕನಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪಾಕ್ ಏಜೆಂಟ್‌ಗಳು ಅಲ್ಲಿರುವ ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಸಂಚು ರೂಪಿಸಿದ್ದರು ಆದರೆ ಪಾಕ್ ಷಡ್ಯಂತ್ರ ಬಯಲಾಗಿದೆ. ಭಾರತೀಯ ಸೈನಿಕರಿಗೆ ಬರುವ ಪಡಿತರದಲ್ಲಿ ವಿಷ ಬೆರೆಸಲು ಪ್ಲ್ಯಾನ್ ಮಾಡಲಾಗಿತ್ತು.

ಎಲ್ಲಾ ಕ್ಯಾಂಪ್‌ಗಳಿಗೆ ಬರುವ ಪಡಿತರವನ್ನು ಪರಿಶೀಲಿಸಲಾಗುತ್ತಿದೆ. ಯಾವುದೇ ಆಹಾರವನ್ನು ಪರೀಕ್ಷಿಸದೆ ಹಾಗೆಯೇ ಬಳಸಬಾರದು ಎಂದು ಸೂಚನೆ ನೀಡಲಾಗಿದೆ.

ಜಮ್ಮುವಿನಲ್ಲಿ ಪಾಕ್‌ ಗುಂಡಿನ ದಾಳಿಗೆ 9 ತಿಂಗಳ ಕೂಸು ಸೇರಿ ಮೂವರ ಬಲಿ

ಪಾಕಿಸ್ತಾನವು ಶಾಂತಿ ಮಂತ್ರ ಪಠಿಸುವಂತೆ ನಾಟಕವಾಡಿತ್ತು ಆದರೆ ಅವರ ಷಡ್ಯಂತ್ರ ಈಗ ಬಯಲಾಗಿದೆ. ಇದೇ ರೀತಿ ದಾಳಿಗಳು ಮುಂದುವರೆದರೆ ದೊಡ್ಡ ಯುದ್ಧಕ್ಕೆ ಕಾರಣವಾಗಬಲ್ಲದು ಎಂಬ ಅನುಮಾನವೂ ಹುಟ್ಟಿಕೊಂಡಿದೆ.

English summary
Pakistan Military intelligence (MI) and ISI may be planning to carry out another conspiracy against Indian Army jawans, according to intelligence sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X