ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ ಹೊಡೆದುರುಳಿಸಿದ BSF: ಶಸ್ತ್ರಾಸ್ತ್ರ ವಶ

|
Google Oneindia Kannada News

ಶ್ರೀನಗರ, ಜೂನ್ 20: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭದ್ರತಾ ಪಡೆ ಶನಿವಾರ (ಜೂನ್ 20) ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿವೆ. ಎಎನ್‌ಐ ವರದಿ ಪ್ರಕಾರ ಕತುವಾ ಜಿಲ್ಲೆಯಲ್ಲಿ ಹಾರಾಡುತ್ತಿದ್ದ ಡ್ರೋನ್‌ ಮೇಲೆ ಗುಂಡು ಹಾರಿಸಿ ಹೊಡೆದುರುಳಿಸಿದ್ದು ಶಸ್ತ್ತಾಸ್ತ್ರಗಳನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ.

Recommended Video

ಟಿ20 ವಿಶ್ವಕಪ್ ನಡೆಯೋ ಬಗ್ಗೆ ಸುಳಿವು ನೀಡಿದ ಆಸ್ಟ್ರೇಲಿಯಾ | Oneindia Kannada

ಕತುವಾ ಜಿಲ್ಲೆಯ ಹಿರಾನಗರ ತಾಲ್ಲೂಕಿನ ರಾತುವಾ ಗ್ರಾಮದಲ್ಲಿರುವ ಫಾರ್ವರ್ಡ್ ಪೋಸ್ಟ್‌ನಲ್ಲಿ ಈ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಇದನ್ನು ಶಸ್ತ್ತಾಸ್ತ್ರ ಸಾಗಾಣೆ ಮತ್ತೆ ಪತ್ತೆದಾರಿಗೂ ಬಳಸಲಾಗಿದೆ.

LOCಯಲ್ಲಿ ಭಾರತೀಯ ಸೇನೆಯಿಂದ ದಾಳಿ, ನಾಲ್ವರು ಸಾವು: ಪಾಕ್ ಆರೋಪLOCಯಲ್ಲಿ ಭಾರತೀಯ ಸೇನೆಯಿಂದ ದಾಳಿ, ನಾಲ್ವರು ಸಾವು: ಪಾಕ್ ಆರೋಪ

Pakistani Drone Shot Down BY BSF In JK: Weapons Recovered

19 ಬೆಟಾಲಿಯನ್‌ನ ಬಿಎಸ್‌ಎಫ್‌ನ ಪೆಟ್ರೋಲಿಂಗ್ ತಂಡವು ಹಿರಾನಗರ ಸೆಕ್ಟರ್‌ನ ಕತುವಾ ಪ್ರದೇಶದಲ್ಲಿ ಪಾಕ್‌ನ ಡ್ರೋನ್ ಹಾರಾಟ ನಡೆಸುತ್ತಿರುವುದನ್ನು ಕಂಡು ಅದರ ಮೇಲೆ ಬೆಳಗ್ಗೆ ಎಂಟರಿಂದ ಒಂಬತ್ತು ಸುತ್ತು ಗುಂಡು ಹಾರಿಸಿ ಅದನ್ನು ನೆಲಕಚ್ಚಿಸಿದೆ.

ಜಮ್ಮು-ಕಾಶ್ಮೀರದಲ್ಲಿ 9 ಹಿಜ್ಬುಲ್ ಉಗ್ರರನ್ನು ಹೊಡೆದುರುಳಿಸಿದ ಸೇನೆಜಮ್ಮು-ಕಾಶ್ಮೀರದಲ್ಲಿ 9 ಹಿಜ್ಬುಲ್ ಉಗ್ರರನ್ನು ಹೊಡೆದುರುಳಿಸಿದ ಸೇನೆ

Pakistani Drone Shot Down BY BSF In JK: Weapons Recovered

ಶನಿವಾರ ಬೆಳಿಗ್ಗೆ 5.10 ರ ಸುಮಾರಿಗೆ ಪಾಕಿಸ್ತಾನದ ಪತ್ತೇದಾರಿ ಡ್ರೋನ್ ಬಿಎಸ್‌ಎಫ್ ಬಾರ್ಡರ್ ಔಟ್‌ಪೋಸ್ಟ್ ಪನ್ಸಾರ್ ಬಳಿ ಹಾರಾಡುತ್ತಿರುವುದು ಗಮನಕ್ಕೆ ಬಂದಿದೆ. ಡ್ರೋನ್ ಅನ್ನು ಪತ್ತೆಹಚ್ಚಿದ ನಂತರ ಸಬ್ ಇನ್ಸ್‌ಪೆಕ್ಟರ್ ದೇವೇಂದರ್ ಸಿಂಗ್ ಅವರು 9 ಎಂಎಂ ಬ್ಯಾರೆಟ್ಟಾದ 8 ಸುತ್ತುಗಳನ್ನು ಹಾರಿಸಿದರು ಮತ್ತು ಅದನ್ನು ಹೊಡೆದುರುಳಿಸಿದರು.

English summary
At about 5:10 am, a Pakistani spy drone was shot down by Border Security Force (BSF) personnel in Pansar, Kathua. Weapons recovered from the BSF
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X