ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂಂಛ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ

|
Google Oneindia Kannada News

ಶ್ರೀನಗರ, ಡಿಸೆಂಬರ್ 19: ಒಂದೆಡೆ ದೇಶಾಂದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿದೆ.

ಪಾಕಿಸ್ತಾನದ ಸೇನಾ ಪಡೆ ಗುರುವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಭಾರತದ ಗಡಿಭಾಗದಲ್ಲಿರುವ ಗ್ರಾಮಗಳು, ಸೇನಾ ಪೋಸ್ಟ್​ಗಳ ಮೇಲೆ ದಾಳಿ ನಡೆಸಿದೆ.

ಪೂಂಛ್ ಜಿಲ್ಲೆಯ ಮನ್​ಕೋಟೆ ಸೆಕ್ಟರ್ ನಲ್ಲಿ ಇಂದು ಬೆಳಗ್ಗೆ 7.15ರ ಸುಮಾರಿಗೆ ಶೆಲ್ಲಿಂಗ್ ಮತ್ತು ಮೋರ್ಟಾರ್ ಬಾಂಬ್​ ದಾಳಿ ನಡೆದಿದೆ. ಶೆಲ್ ದಾಳಿಯಲ್ಲಿ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಕುರಿತು ಇನ್ನಷ್ಟೇ ಸೇನಾಮೂಲಗಳು ಮಾಹಿತಿ ನೀಡಬೇಕಿದೆ.

Pakistan Violates Ceasefire In Poonch

ಒಂದೆಡೆ ಪ್ರತಿಭಟನೆ ನಡೆಯುತ್ತಿದ್ದರೆ ಇನ್ನೊಂದೆಡೆ ಗಡಿಯಲ್ಲಿ ಕುತಂತ್ರಿ ಪಾಕಿಸ್ತಾನ ತನ್ನ ಉದ್ಧಟನ ಮುಂದುವರೆಸಿದೆ. ಇನ್ನು ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ಕೂಡ ಸೂಕ್ತ ತಿರುಗೇಟು ನೀಡಿದ್ದು, ಪ್ರತಿದಾಳಿಯಲ್ಲಿ ಸೈನಿಕರು ಮಗ್ನರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Pakistani troops on Thursday violated ceasefire by firing small arms and shelling mortar bombs on forward posts and villages along the Line of Control (LoC) in Poonch district of Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X