ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಕಾಶ್ಮೀರಕ್ಕೆ ಭಯೋತ್ಪಾದಕರನ್ನು ಕಳುಹಿಸುತ್ತಿದೆ ಪಾಕಿಸ್ತಾನ

|
Google Oneindia Kannada News

ಶ್ರೀನಗರ, ಜೂನ್ 23: ಪಾಕಿಸ್ತಾನವೂ ಜಮ್ಮು ಕಾಶ್ಮೀರಕ್ಕೆ ಹೆಚ್ಚಿನ ಭಯೋತ್ಪಾದಕರನ್ನು ಕಳುಹಿಸುವ ಪ್ರಯತ್ನ ಮಾಡ್ತಿದೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಆರೋಪಿಸಿದ್ದಾರೆ.

Recommended Video

Shadab Khan, Haider Ali And Haris Rauf Test Positive For Coronavirus | Oneindia Kannada

''ಪಾಕಿಸ್ತಾನವು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಉಗ್ರರನ್ನು ನೌಶೇರಾ, ರಾಜೌರಿ-ಪೂಂಚ್ ಮತ್ತು ಕುಪ್ವಾರಾ-ಕೇರನ್ ಪ್ರದೇಶಗಳ ಮೂಲಕ ಕಾಶ್ಮೀರಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದೆ'' ಎಂದು ಪೊಲೀಸ್ ಇಲಾಖೆ ಹೇಳಿದೆ.

ಪುಲ್ವಾಮಾ ಎನ್ ಕೌಂಟರ್: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆಪುಲ್ವಾಮಾ ಎನ್ ಕೌಂಟರ್: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

''ನಮ್ಮ ಭದ್ರತಾ ಪಡೆಗಳ ವಿರುದ್ಧ ಐಇಡಿ ಮಾದರಿಯ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ನಮಗೆ ಮಾಹಿತಿ ಸಿಕ್ಕಿದೆ. ಹಾಗಾಗಿ, ನಾವು ಎಚ್ಚರದಿಂದ ಇದ್ದಿರಿ'' ಎಂದು ತಿಳಿಸಿದ್ದಾರೆ.

Pakistan is trying to send more terrorists into Jammu-Kashmir

ಪುಲ್ವಾಮಾ ಜಿಲ್ಲೆಯ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗೆ ಗೌರವ ಸೂಚಿಸಿದ ನಂತರ ಡಿಐಜಿ ದಿಲ್ಬಾಗ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಇತ್ತೀಚಿಗಷ್ಟೆ ಪುಲ್ವಾಮಾದ ಬುಂಡ್‌ಜೂ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಆರ್ಪಿಎಫ್‌ನ 182 ನೇ ಬೆಟಾಲಿಯನ್‌ನ ಹೆಡ್ ಕಾನ್‌ಸ್ಟೆಬಲ್ ಸುನಿಲ್ ಕೇಲ್ ಪ್ರಾಣ ಕಳೆದುಕೊಂಡಿದ್ದರು. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದಾರೆ.

ಅಂದ್ಹಾಗೆ, ಈ ವರ್ಷದ ಆರಂಭದಿಂದಲೂ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

English summary
Pakistan is trying to send more Jaish-e-Mohammad and Lashkar-e-Taiba militants to Kashmir through Nowshera, Rajouri-Poonch and Kupwara-Keran sectors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X