ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಓರ್ವ ಪೈಲಟ್‌ನನ್ನು ಬಂಧಿಸಿದ್ದೇವೆ ಎಂದು ಸುಳ್ಳು ಹೇಳಿತೇ ಪಾಕ್?

|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಫೆಬ್ರವರಿ 27: ಭಾರತೀಯ ಸೇನೆಗೆ ಸೇರಿದ ಮಿಗ್ ಯುದ್ಧ ವಿಮಾನದ ಪೈಲಟ್‌ ಓರ್ವರನ್ನು ಬಂಧಿಸಲಾಗಿದೆ ಎನ್ನುವ ಸುಳ್ಳು ಸುದ್ದಿಯನ್ನು ಪಾಕ್ ಹುಟ್ಟುಹಾಕಿದೆ.

ಹಾಗೆಯೇ ಭಾರತದಿಂದ ಬಂದಿದ್ದ ಎರಡು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎನ್ನುವ ತಪ್ಪು ಮಾಹಿತಿಯನ್ನು ನೀಡಲಾಗಿದೆ.

ಒಂದು ಜಮ್ಮು ಕಾಶ್ಮೀರದೊಳಗೆ ಪತನವಾಗಿದ್ದರೆ ಇನ್ನೊಂದು ಪಾಕಿಸ್ತಾನದಲ್ಲಿ ಪತನವಾಗಿದೆ ಎಂದು ಪಾಕ್ ಸೇನಾ ಡಿಜಿ ಮೇಜರ್ ಜನರಲ್ ಆಸೀಫ್ ಗಫೂರ್ ಟ್ವೀಟ್ ಮಾಡಿದ್ದಾರೆ.

ವಿಮಾನವು ಬದ್ಗಾಮ್‌ನಲ್ಲಿ ಪತನವಾಗಿದೆ. ಈ ಸ್ಥಳವು ಗಡಿ ರೇಖೆ ರಜೌರಿಯಿಂದ ಸುಮಾರು 180 ಕಿ.ಮೀ ದೂರದಲ್ಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಪಾಕಿಸ್ತಾನ ಭಾರತೀಯ ವಿಮಾನವನ್ನು ಹೊಡೆದುರುಳಿಸಲು ಸಾಧ್ಯವೇ ಇಲ್ಲ.

ವಿಮಾನವು ತಾಂತ್ರಿಕ ದೋಷದಿಂದ ಪತನವಾಗಿದೆಯೇ ಹೊರತು ಯಾರೂ ದಾಳಿ ಮಾಡಿಲ್ಲ ಎಂದು ಭಾರತೀಯ ವಾಯುಸೇನೆ ಸ್ಪಷ್ಟಪಡಿಸಿದೆ.

ಉಗ್ರನೆಲೆ ಧ್ವಂಸ: ಪಾಕಿಸ್ತಾನದ F-16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತಉಗ್ರನೆಲೆ ಧ್ವಂಸ: ಪಾಕಿಸ್ತಾನದ F-16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ

ಜಮ್ಮು ಕಾಶ್ಮೀರದ ಬುದ್ಗಾಮ್‌ನಲ್ಲಿ ಮಿಗ್-17 ಸರಕು ಸಾಗಣೆ ಹೆಲಿಕಾಪ್ಟರ್‌ ಒಂದು ಪತನವಾಗಿದೆ ಅದರಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಅವರ ಮೃತದೇಹಗಳೂ ಸಿಕ್ಕಿವೆ.

Pakistan army lying on Indian pilot arrest

ಮೊದಲು ಅದು ಮಿಗ್ 21 ಯುದ್ಧ ವಿಮಾನ ಎಂದು ಊಹೆ ಮಾಡಲಾಗಿತ್ತು ಬಳಿಕ ಮಿಗ್ 17 ಸರಕು ಸಾಗಣೆ ವಿಮಾನ ಅದು ಯುದ್ಧ ವಿಮಾನ ಅಲ್ಲ ಎಂದು ಭಾರತೀಯ ವಾಯು ಸೇನೆ ಸ್ಪಷ್ಟಪಡಿಸಿತ್ತು.

ವಿಮಾನ ಪತನವಾದ ಜಾಗದಲ್ಲಿ ಇಬ್ಬರು ಪೈಲಟ್‌ಗಳ ಮೃತದೇಹಗಳು ಕೂಡ ದೊರೆತಿದೆ. ಆದರೆ ಗಡಿ ರೇಖೆ ಉಲ್ಲಂಘಿಸಿ ಪಾಕಿಸ್ತಾನದೊಳಗೆ ಬಂದಿದ್ದ ಮಿಗ್ ವಿಮಾನವನ್ನು ಹೊಡೆದುರುಳಿಸಿ ಓರ್ವ ಪೈಲಟ್‌ನನ್ನು ಬಂಧಿಸಿದ್ದೇವೆ ಎಂದು ಬೀಗುತ್ತಿದೆ.

ಭಾರತದ ಗಡಿಯೊಳಗೆ ಬಂದ ಪಾಕ್ ವಿಮಾನ ಹೊಡೆದುರುಳಿಸಿದ ಸೇನೆ ಭಾರತದ ಗಡಿಯೊಳಗೆ ಬಂದ ಪಾಕ್ ವಿಮಾನ ಹೊಡೆದುರುಳಿಸಿದ ಸೇನೆ

ಆದರೆ ಪತನವಾಗಿದ್ದು ಯುದ್ಧ ವಿಮಾನವೂ ಅಲ್ಲ ಅದರ ಜೊತೆಗೆ ಪೈಲಟ್‌ಗಳ ಮೃತದೇಹವೂ ಅದೇ ಜಾಗದಲ್ಲಿದೆ. ಪಾಕ್ ಬಂಧಿಸಿದ್ದು ಯಾರನ್ನು ಎನ್ನುವ ಪ್ರಶ್ನೆ ಕಾಡುತ್ತಿದೆ. ಅವರ ಈ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಎಂದು ಭಾರತ ತಳ್ಳಿ ಹಾಕಿದೆ.

English summary
Pakistan army says they arrested one Indian pilot, but later it came to know that is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X