ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣಿವೆ ರಾಜ್ಯದ ಗಡಿಯಲ್ಲಿ ಕಾಲ್ಕೆರೆದು ನಿಲ್ಲುತ್ತಿದೆಯಾ ಪಾಕಿಸ್ತಾನ?

|
Google Oneindia Kannada News

ಶ್ರೀನಗರ್, ಫೆಬ್ರವರಿ.25: ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಸೇನೆಯು ಪದೇ ಪದೆ ಕಾಲ್ಕೆರದು ನಿಲ್ಲುತ್ತಿದೆ. ಗಡಿಯುದ್ದಕ್ಕೂ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಇತ್ತೀಚಿಗಷ್ಟೇ ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದರು.
ಹಿರಿಯ ಪೊಲೀಸ್ ಅಧಿಕಾರಿ ನೀಡಿದ ಹೇಳಿಕೆ ಬೆನ್ನಲ್ಲೇ ಮಂಗಳವಾರ ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ. ಕಾಶ್ಮೀರಕ್ಕೆ ತೆರಳಲಿರುವ ಸೇನಾ ಮುಖ್ಯಸ್ಥರು ಗಡಿಯಲ್ಲಿನ ಸೇನಾ ಸುರಕ್ಷತೆ ಮತ್ತು ಪ್ರತಿದಾಳಿ ಕಾರ್ಯಾಚರಣೆ ಕುರಿತು ಅವಲೋಕನ ನಡೆಸಲಿದ್ದಾರೆ. ಕಾಶ್ಮೀರ ಭೇಟಿ ಸಂದರ್ಭದಲ್ಲಿ ಸೇನಾ ಕಮಾಂಡರ್ ಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ದೇಶ ಸುತ್ತಿ ಪುಲ್ವಾಮಾ ಹುತಾತ್ಮರ ಮನೆಯ ಮಣ್ಣು ಸಂಗ್ರಹಿಸಿದ ಬೆಂಗಳೂರಿಗ
ಇಂಡೋ-ಪಾಕ್ ಗಡಿಯುದ್ದಕ್ಕೂ ನುಸುಳುಕೋರರನ್ನು ನಿಯಂತ್ರಿಸುವಲ್ಲಿ ಭಾರತೀಯ ಸೇನಾ ಪಡೆಯು ಯಶಸ್ವಿಯಾಗಿದೆ. ಗಡಿ ನುಸುಳುಕೋರರಿಗೆ ಕಡಿವಾಣ ಬೀಳುತ್ತಿದ್ದಂತೆ ಪಾಕಿಸ್ತಾನ ಸೇನೆಯು ಗಡಿಯಲ್ಲಿ ಕದನ ವಿರಾಮ ಉಲ್ಲಂಘಟನೆ ಮಾಡುತ್ತಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಆರೋಪಿಸಿದ್ದಾರೆ.

Pakistan Army Increase Ceasefire Along J-K Boarder

ಭಾನುವಾರವಷ್ಟೇ ಪಾಕ್ ಕುರಿತು ತಿಳಿಸಿದ್ದ ಡಿಜಿಪಿ:
ಕಳೆದ ಫೆಬ್ರವರಿ.23ರಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಪಾಕಿಸ್ತಾನ ಸೇನೆಯು ಗಡಿಯುದ್ದಕ್ಕೂ ಪದೇ ಪದೆ ಕದನ ವಿರಾಮ ಉಲ್ಲಂಘಟಿಸಿ ಭಾರತೀಯ ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದರು.
ಗಡಿಯಲ್ಲಿ ಉಗ್ರರು ನುಸುಳಲು ಅನುಕೂಲವಾಗಲೆಂದು ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘಟನೆ ಮಾಡುತ್ತಿದೆ. ಹೀಗಾಗಿ 240 ರಿಂದ 250 ಮಂದಿ ಗಡಿಯಲ್ಲಿ ನುಸುಳಿರುವ ಶಂಕೆಯಿದ್ದು, ಎಲ್ಲ ಶಂಕಿತರ ಸೆರೆಗೆ ಭಾರತೀಯ ಸೇನಾಪಡೆಯು ಕಾರ್ಯಾಚರಣೆ ನಡೆಸುತ್ತಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.

English summary
Pakistan Army Increase Ceasefire Along J-K Boarder. Tuesday Indian Army Chief M M Naravane Visit Kashmir To Review Security Situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X