ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕಾಶ್ಮೀರದಲ್ಲಿ ನದಿಗೆ ಉರುಳಿದ ಬಸ್, 7 ಯೋಧರು ಹುತಾತ್ಮ

|
Google Oneindia Kannada News

ಶ್ರೀನಗರ, ಆಗಸ್ಟ್ 16: ಜಮ್ಮು ಮತ್ತು ಕಾಶ್ಮೀರದಲ್ಲಿ 39 ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ನದಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಏಳು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನೂ ಹಲವಾರು ಸಿಬ್ಬಂದಿ ಗಾಯಗೊಂಡಿದ್ದಾರೆ, ಅವರನ್ನು ಚಿಕಿತ್ಸೆಗಾಗಿ ಶ್ರೀನಗರದ ಸೇನಾ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

37 ಐಟಿಬಿಪಿ ಸಿಬ್ಬಂದಿ ಮತ್ತು ಇಬ್ಬರು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ನದಿಪಾತ್ರಕ್ಕೆ ಬಿದ್ದಿದೆ.

Pahalgam: ITBP Bus carrying 39 security force personnel falls into river bed

ಬಸ್‌ ಬ್ರೇಕ್ ಫೇಲ್ ಆಗಿ ರಸ್ತೆ ಬದಿಯಿಂದ ನದಿಗೆ ಬಿದ್ದಿದೆ. ಭದ್ರತಾ ಪಡೆಗಳು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಹೋಗುತ್ತಿದ್ದರು ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ತಿಳಿಸಿದ್ದಾರೆ.

ಅಮರನಾಥ ಯಾತ್ರೆಗಾಗಿ ಈ ಪ್ರದೇಶದಲ್ಲಿ ಯೋಧರನ್ನು ನಿಯೋಜಿಸಲಾಗಿತ್ತು.

Recommended Video

ಇಷ್ಟೊಂದು ತಲ್ಲೀರಾಗಿ ರಾಷ್ಟ್ರಗೀತೆಯನ್ನು ಹೇಳೋಕೆ ಯಾರಿಗಾದ್ರೂ ಸಾಧ್ಯಾನಾ? | *Viral | OneIndia Kannada

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ಗಾಯಗೊಂಡು ದಾಖಲಾಗಿರುವ ITBP ಯೋಧರನ್ನು ಭೇಟಿ ಮಾಡಿದರು.

ITBP ಬಸ್ ಅಪಘಾತದಲ್ಲಿ ಮೃತಪಟ್ಟವರನ್ನು ಪಂಜಾಬ್‌ನ ತರನ್ ತರ‌ನ್ ಊರಿನ ಹೆಡ್ ಕಾನ್‌ಸ್ಟೆಬಲ್ ದುಲಾ ಸಿಂಗ್, ಬಿಹಾರದ ಲಖಿಸರಾಯ್‌ನಿಂದ ಕಾನ್‌ಸ್ಟೆಬಲ್ ಅಭಿರಾಜ್, ಉತ್ತರ ಪ್ರದೇಶದ ಕಾನ್ಸ್‌ಟೇಬಲ್ ಅಮಿತ್ ಕೆ, ಆಂಧ್ರಪ್ರದೇಶದ ಕಡಪಾ ಮೂಲದ ಕಾನ್‌ಸ್ಟೆಬಲ್ ಡಿ ರಾಜ್ ಶೇಖರ್, ರಾಜಸ್ಥಾನದ ಕಾನ್‌ಸ್ಟೆಬಲ್ ಸುಭಾಷ್ ಸಿ ಬೈರ್ವಾಲ್, ಉತ್ತರಾಖಂಡದ ಕಾನ್‌ಸ್ಟೆಬಲ್ ದಿನೇಶ್ ಬೋಹ್ರಾ ಮತ್ತು ಜಮ್ಮು ಕಾಶ್ಮೀರದ ಕಾನ್ಸ್‌ಟೇಬಲ್ ಸಂದೀಪ್ ಕುಮಾರ್ ಎಂದು ಗುರುತಿಸಲಾಗಿದೆ.

"ಜಮ್ಮು ಕಾಶ್ಮೀರದಲ್ಲಿ ಏಳು ITBP ಸಿಬ್ಬಂದಿ ಪ್ರಾಣ ಕಳೆದುಕೊಂಡ ಭೀಕರ ಅಪಘಾತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ದುಃಖತಪ್ತರ ಕುಟುಂಬಕ್ಕೆ ನನ್ನ ಸಂತಾಪಗಳು. ಈ ದುಃಖದ ಸಮಯದಲ್ಲಿ ನಾನು ಅವರ ಜೊತೆ ನಿಲ್ಲುತ್ತೇನೆ. ನಾವು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ. ಅವರು ಬೇಗ ಚೇತರಿಸಿಕೊಳ್ಳುತ್ತಾರೆ" ಎಂದು ಐಟಿಬಿಪಿ ಡಿಜಿ ಡಾ. ಸುಜೋಯ್ ಲಾಲ್ ಥಾಸೆನ್ ಹೇಳಿದ್ದಾರೆ.

English summary
Bus carrying 39 security force personnel falls into river bed in Jammu and Kashmir's Pahalgam. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X