• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌: ಓರ್ವ ಉಗ್ರನ ಹತ್ಯೆ

|

ಅನಂತ್‌ನಾಗ್, ಅಕ್ಟೋಬರ್ 17: ಜಮ್ಮು ಕಾಶ್ಮೀರದಲ್ಲಿ ಇಂದು ಭಾರತೀಯ ಸೇನೆ ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.

ಅನಂತ್ ನಾಗ್ ಜಿಲ್ಲೆಯ ಲರ್ನೂ ಎಂಬ ಪ್ರದೇಶದಲ್ಲಿ ಉಗ್ರರ ಅನುಮಾನಾಸ್ಪದ ಓಡಾಟಗಳು ಕಂಡುಬಂದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾಪಡೆಗಳು ಇಂದು ಬೆಳಿಗ್ಗೆಯಿಂದಲೇ ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು.

ನಾಟಕೀಯ ರೀತಿಯಲ್ಲಿ ಶರಣಾದ ಉಗ್ರ: ವಿಡಿಯೋ

ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಹತ್ಯೆಯಾದ ಉಗ್ರನ ಬಳಿಯಿದ್ದ ಎಕೆ ರೈಫಲ್ ಹಾಗೂ ಸ್ಫೋಟಕ ವಸ್ತುಗಳನ್ನು ಭದ್ರತಾಪಡೆಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಸ್ಥಳವನ್ನು ಸುತ್ತುವರೆದ ಭದ್ರತಾಪಡೆಗಳು ಎನ್ಕೌಂಟರ್ ನಡೆಸಿ ಇದೀಗ ಓರ್ವ ಉಗ್ರನನ್ನು ಹತ್ಯೆ ಮಾಡಿದ್ದಾರೆಂದು ತಿಳಿದುಬಂದಿದೆ.

ಎನ್‌ಕೌಂಟರ್‌ ಕಾರ್ಯಾಚರಣೆಯ ವೇಳೆ ಯುವ ಉಗ್ರನೊಬ್ಬ ಭಾರತೀಯ ಸೇನೆಗೆ ಶರಣಾಗಿದ್ದಾನೆ. ಉಗ್ರರು ಇರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬುದ್ಗಾಂನಲ್ಲಿ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಯಕ್ಕೆ ಬಿದ್ದ ಉಗ್ರನೊಬ್ಬ ಸೇನೆಗೆ ಶರಣಾಗಿದ್ದಾನೆ.

ಪ್ರದೇಶವನ್ನು ಸೇನೆ ಸುತ್ತವರಿದ ವೇಳೆ ಉಗ್ರ ನಾನು ಶರಣಾಗುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಸೈನಿಕರು, ನಿನ್ನನ್ನು ಏನು ಮಾಡುವುದಿಲ್ಲ. ಹತ್ತಿರ ಬರುವ ಮೊದಲು ಶರ್ಟ್‌ ತೆಗೆಯಬೇಕು ಎಂದು ಹೇಳಿದ್ದಾರೆ.

ಹತ್ತಿರ ಬಂದ ಬಳಿಕ ಆತನ ದೇಹದಲ್ಲಿ ಯಾವುದಾದರೂ ಶಸ್ತ್ರಾಸ್ತ್ರಗಳು ಇದೆಯೇ ಎಂದು ಪರಿಶೀಲಿಸಿದ್ದಾರೆ. ಬಳಿಕ ಇತನ ತಂದೆ ಸ್ಥಳಕ್ಕೆ ಬಂದು ಸೈನಿಕರ ಕಾಲಿಗೆ ಬಿದ್ದು ಕೃತಜ್ಞತೆ ಹೇಳಿದ್ದಾರೆ. ಬಳಿಕ ಮಗನಿಗೆ ಮತ್ತೆ ಉಗ್ರರ ಜೊತೆ ಕೈ ಜೋಡಿಸಬೇಡ ಎಂದು ಬುದ್ಧಿವಾದ ಹೇಳಿದ್ದಾರೆ.

English summary
One terrorist was eliminated and one AK rifle was recovered in an ongoing encounter between security forces and terrorists in the Larnoo area of Anantnag district on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X