ಪುಲ್ವಾಮಾದಲ್ಲಿ ಎನ್ಕೌಂಟರ್: ಮೂವರು ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ
ಶ್ರೀನಗರ, ಮೇ 16: ಉಗ್ರರು ಆತ್ಮಾಹುತಿ ಬಾಂಬ್ ಸ್ಫೋಟಿಸಿ 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದ ಪ್ರದೇಶಲ್ಲಿ ಗುರುವಾರ ಎನ್ಕೌಂಟರ್ ನಡೆದಿದ್ದು, ಮೂವರು ಉಗ್ರರು ಹತರಾಗಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಬುದ್ದ ಪೂರ್ಣಿಮೆಯ ದಿನ ದೊಡ್ಡ ದಾಳಿಗೆ ಮಹಿಳಾ ಉಗ್ರರ ಸಂಚು?
ಪುಲ್ವಾಮ ಜಿಲ್ಲೆಯ ದಲಿಪೋರಾದಲ್ಲಿನ ಮನೆಯೊಂದರಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿ ಪಡೆದ ಸೇನಾಪಡೆಗಳು ಕೂಡಲೇ ಉಗ್ರರಿದ್ದ ಮನೆಯನ್ನು ಸುತ್ತುವರೆದಿದ್ದಾರೆ. ಗುಂಡಿನ ದಾಳಿ ನಡೆಸಿದ್ದಾರೆ.
Jammu & Kashmir: An exchange of fire between terrorists and security forces began in Dalipora area of Pulwama earlier this morning. (Visuals deferred by unspecified time) pic.twitter.com/BW3aFWelN2
— ANI (@ANI) May 16, 2019
ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಪ್ರತಿ ದಾಳಿಯಲ್ಲಿ ಮೂವರು ಉಗ್ರರನ್ನು ಸದೆಬಡಿಯಲಾಗಿದೆ. ಮನೆಯಲ್ಲಿ ಮತ್ತಷ್ಟು ಉಗ್ರರಿರುವ ಶಂಕೆ ಇದ್ದು, ಕಾರ್ಯಾಚರಣೆ ಮುಂದುವರೆದಿದೆ.
ಮುಂಜಾಗ್ರತಾ ಕ್ರಮವಾಗಿ ದಲಿಪೋರಾ ಪ್ರಾಂತ್ಯದ ಸುತ್ತಮುತ್ತ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
Jammu and Kashmir: Army Jawan Sepoy Sandeep (in pic) who lost his life in Pulwama encounter earlier today; three terrorists were neutralised in the encounter. pic.twitter.com/trSZkJnYmQ
— ANI (@ANI) May 16, 2019
ಯೋಧನಿಗೆ ಗುಂಡೇಟು ತಗುಲಿದ್ದು, ಕೂಡಲೇ ಅವರನ್ನು ಸೇನಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಸಿಪಾಯಿ ಸಂದೀಪ್ ಎನ್ನುವವರು ಹುತಾತ್ಮರಾಗಿದ್ದಾರೆ. ಒಟ್ಟು ಮೂವರು ಉಗ್ರರನ್ನು ಸದೆಬಡಿಯಲಾಗಿದೆ.