ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಬುರ್ಹಾನ್ ವನಿ ಊರಲ್ಲಿ ಶೂನ್ಯ ಮತದಾನ

By ವಿಕಾಸ್ ನಂಜಪ್ಪ
|
Google Oneindia Kannada News

ಶ್ರೀನಗರ, ಮೇ 07: ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಬುರ್ಹಾನ್ ವನಿ ಗ್ಯಾಂಗಿನ ಕೊನೆ ಸದಸ್ಯ ಲತೀಫ್ ಟೈಗರ್ ಹತ್ಯೆಯಾದ ಬಳಿಕ ಶಾಂತಿ ವಾತಾವರಣ ಕಂಡು ಬಂದಿತ್ತು. ಆದರೆ, ವನಿ ಊರಲ್ಲಿ ಮತದಾನ ಮಾಡಲು ಯಾರು ಮುಂದೆ ಬಂದಿಲ್ಲ.

ಇನ್ನು ಆತ್ಮಾಹುತಿ ದಾಳಿಯನ್ನು ಕಂಡ ಪುಲ್ವಾಮಾದಲ್ಲಿ ಮತದಾನ ಪ್ರಮಾಣ ಶೇ 15 ದಾಟಿಲ್ಲ. ದಕ್ಷಿಣ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ.

ಬುರ್ಹಾನ್ ವನಿ ಗ್ಯಾಂಗಿನ ಕೊನೆ ಉಗ್ರನನ್ನು ಚೆಂಡಾಡಿದ ಭಾರತೀಯ ಸೇನೆ ಬುರ್ಹಾನ್ ವನಿ ಗ್ಯಾಂಗಿನ ಕೊನೆ ಉಗ್ರನನ್ನು ಚೆಂಡಾಡಿದ ಭಾರತೀಯ ಸೇನೆ

ತ್ರಾಲ್ ಪ್ರದೇಶದಲ್ಲಿ ವನಿಯ ಊರಾದ ಶರೀಫಾಬಾದ್ ಗ್ರಾಮದಲ್ಲಿ ಯಾರೊಬ್ಬರು ಮತದಾನ ಮಾಡುವ ಸಾಹಸ ಮಾಡಿಲ್ಲ. ಗುಂಡಿಬಾಗ್ ನಲ್ಲಿ 350 ಮತದಾರರಿದ್ದು, 15 ಮಂದಿ ಮಾತ್ರ ಧೈರ್ಯ ಮಾಡಿ ಮತದಾನ ಮಾಡಿದ್ದಾರೆ.

Number of votes cast in Burhan Wani’s village- 0

ಜೈಷ್ ಎ ಮೊಹಮ್ಮದ್ ಉಗ್ರ, ಗುಂಡಿಬಾಗ್ ನ ಆದಿಲ್ ದರ್ ಪುಲ್ವಾಮಾದಲ್ಲಿ ನಡೆಸಿದ ಆತ್ಮಾಹುತಿ ದಾಳಿಯಿಂದ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಫೆಬ್ರವರಿ 14ರಂದು ನಡೆದ ವಿಧ್ವಂಸಕ ಕೃತ್ಯದಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು.

ಅನ್ಸರ್ ಗಜಾವರ್ ಉಲ್ ಹಿಂದ್ ಉಗ್ರ ಸಂಘಟನೆಯ ಜಾಕೀರ್ ಮೂಸಾನ ಗ್ರಾಮವಾದ ನೂರಾಬಾದ್ ನಲ್ಲೂ ಶೂನ್ಯ ಮತದಾನವಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮ್ಯಾಂಡರ್ ರಿಯಾಜ್ ನಾಯ್ಕ್ ನ ಗ್ರಾಮ ಬೈಗ್ ಪೂರ್, ಮುದಾಸಿರ್ ಖಾನ್ ನ ಶೇಖ್ ಪೂರ್ ನಲ್ಲೂ ಯಾರೂ ಮತದಾನ ಮಾಡಿಲ್ಲ.

ವನಿ ಗ್ಯಾಂಗಿನ ಸದಸ್ಯರಿದ್ದ ಗ್ರೂಪ್ ಫೋಟೋದಲ್ಲಿದ್ದ 11 ಮಂದಿ ಪೈಕಿ ಒಬ್ಬನನ್ನು ಬಂಧಿಸಿ, ಮಿಕ್ಕವರನ್ನು ಕೊಂದು ಹಾಕಲಾಗಿದೆ.
2017ರಲ್ಲಿ ಗ್ಯಾಂಗಿನ ಪ್ರಮುಖ ಸದಸ್ಯ ಯಾಸೀನ್ ಯತ್ತೋ, ಘಜ್ನವಿಯನ್ನು ಬಲಿ ಪಡೆದಿದ್ದ ಭಾರತೀಯ ಯೋಧರು, ಈಗ ಲತೀಫ್ ಟೈಗರ್ ನನ್ನು ಮುಗಿಸುವ ಮೂಲಕ ಇಡೀ ಗ್ಯಾಂಗ್ ಧ್ವಂಸಗೊಳಿಸಿದ್ದರು. ಇದಾದ ಬಳಿಕ ಕಣಿವೆ ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ಹಂತದಲ್ಲಿ ನಡೆಸಲು ಉದ್ದೇಶಿಸಲಾಯಿತು. ಭಾರಿ ಬಿಗಿ ಭದ್ರತೆ ಒದಗಿಸಲಾಯಿತು. ಆದರೆ, ಮತದಾನ ಪ್ರಮಾಣ ಮಾತ್ರ ಏರಿಕೆಯಾಗಿಲ್ಲ.

English summary
The number of votes cast from the village of Burhan Wani was zero in the fifth phase of the Lok Sabha elections. In the native place of the Pulwama suicide bomber, the voting percentage stood at 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X