• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆಯಲ್ಲಿಯೇ ಕುಳಿತು ವೈಷ್ಣೋ ದೇವಿಯ ದರ್ಶನ ಪಡೆಯಿರಿ

|

ಶ್ರೀನಗರ, ಸೆಪ್ಟೆಂಬರ್ 23: ವೈಷ್ಣೋ ದೇವಿ ದೇವಾಲಯದ ಭಕ್ತರಿಗೆ ಸಿಹಿಸುದ್ದಿ. ಮನೆಯಲ್ಲಿಯೇ ಕುಳಿತು ದೇವರ ದರ್ಶನವನ್ನು ಭಕ್ತರು ಪಡೆಯಬಹುದಾಗಿದೆ. ಇದಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಕತ್ರಾ ಪಟ್ಟಣದಿಂದ ಸುಮಾರು 40 ಕಿ. ಮೀ. ದೂರದಲ್ಲಿ ವೈಷ್ಣೋ ದೇವಿ ದೇವಾಲಯವಿದೆ. ಉತ್ತರ ಭಾರತದ ಪ್ರಸಿದ್ಧ ದೇವಾಲಗಳಲ್ಲಿ ವೈಷ್ಣೋ ದೇವಿ ದೇವಾಲಯವೂ ಒಂದು. ದೇಶವ ವಿವಿಧ ರಾಜ್ಯಗಳ ಭಕ್ತರು ದೇವಿಯ ದರ್ಶನ ಪಡೆಯಲು ತೆರಳುತ್ತಾರೆ.

ವೈಷ್ಣೋ ದೇವಿ ಭಕ್ತರಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರ

ಅಕ್ಟೋಬರ್ 17ರಂದು ಮೊಬೈಲ್ ಅಪ್ಲಿಕೇಶನ್‌ ಬಿಡುಗಡೆಯಾಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. ಅಪ್ಲಿಕೇಶನ್‌ ಮೂಲಕ ಮನೆಯಲ್ಲಿಯೇ ಕುಳಿತು ನೇರವಾಗಿ ಪೂಜೆ, ದರ್ಶನವನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಅಬ್ಬಾ..! ನದಿಯಿಂದ ಇದ್ದಕ್ಕಿದ್ದಂತೆ ಹೊರಬಂತು 500 ವರ್ಷಗಳ ಹಳೆಯ ವಿಷ್ಣು ದೇವಾಲಯ

"ಕೋವಿಡ್ ಸಂದರ್ಭದಲ್ಲಿ ಹೆಚ್ಚು ಜನರು ಸೇರದಂತೆ ನಿರ್ಬಂಧ ಹೇರಲಾಗಿದೆ. 12 ಕಿ. ಮೀ. ಚಾರಣ ಮಾಡಿ, ದೇವರ ದರ್ಶನವನ್ನು ಪಡೆಯಲು ಸಾಧ್ಯವಾಗದ ಭಕ್ತರಿಗಾಗಿ ಈ ಅಪ್ಲಿಕೇಶನ್‌ ಬಿಡುಗಡೆ ಮಾಡಲಾಗುತ್ತಿದೆ" ಎಂದು ದೇವಾಲಯದ ಮುಖ್ಯಾಧಿಕಾರಿ ಹೇಳಿದ್ದಾರೆ.

ಈ ವರ್ಷದ ಅಮರಾಥ ಯಾತ್ರೆ ರದ್ದುಗೊಳಿಸಿ ಆದೇಶ

ಮನೆ ಬಾಗಿಲಿಗೆ ಬರಲಿದೆ ಪ್ರಸಾದ

ಮನೆ ಬಾಗಿಲಿಗೆ ಬರಲಿದೆ ಪ್ರಸಾದ

ವೈಷ್ಣೋ ದೇವಿ ದೇವಾಲಯ ಭಕ್ತರ ಮನೆ ಬಾಗಿಲಿಗೆ ಪ್ರಸಾದವನ್ನು ಕಳಿಸುವ ವ್ಯವಸ್ಥೆ ಆರಂಭಿಸಿದೆ. ಲೆಫ್ಟಿನೆಂಟ್ ಗೌರ್ನರ್ ಮನೋಜ್ ಸಿನ್ಹಾ ಈ ಯೋಜನೆಗೆ ಸೋಮವಾರ ಚಾಲನೆ ನೀಡಿದ್ದಾರೆ. ಭಕ್ತರು ವಿಶೇಷ ಪೂಜೆ ಮತ್ತು ಪ್ರಸಾದಕ್ಕಾಗಿ ದೇವಾಲಯದ ವೆಬ್‌ ಸೈಟ್‌ ಮೂಲಕ ಬುಕ್ ಮಾಡಬೇಕಿದೆ.

ಅಂಚೆ ಇಲಾಖೆ ಜೊತೆ ಒಪ್ಪಂದ

ಅಂಚೆ ಇಲಾಖೆ ಜೊತೆ ಒಪ್ಪಂದ

ಅಂಚೆ ಇಲಾಖೆ ಜೊತೆ ವೈಷ್ಣೋ ದೇವಿ ದೇವಾಲಯದ ಆಡಳಿತ ಮಂಡಳಿ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ಪ್ರಸಾದ ಬುಕ್ ಮಾಡಿದ ಭಕ್ತರ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ಪ್ರಸಾದ ಕಳಿಸಲಾಗುತ್ತದೆ.

ಮಂಗಳಾರತಿ ನೇರ ಪ್ರಸಾರ

ಮಂಗಳಾರತಿ ನೇರ ಪ್ರಸಾರ

ವೈಷ್ಣೋ ದೇವಿ ದೇವಾಲಯದ ಆಡಳಿತ ಮಂಡಳಿ ಹೆಚ್ಚುವರಿ ಕಾರ್ಯಕಾರಿ ಅಧಿಕಾರಿ ರಮೇಶ್ ಕುಮಾರ್ ಈ ಕುರಿತು ಮಾತನಾಡಿದ್ದಾರೆ. "ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಈಗ ದೇವಾಲಯದ ಪ್ರಮುಖ ಮಂಗಳಾರತಿ ಅವಧಿಯನ್ನು ಲೈವ್ ಮಾಡಲಾಗುತ್ತಿದೆ. ಈಗ ಆಂಡ್ರಾಯ್ಡ್ ಮತ್ತು ಐಪೋನ್‌ನಲ್ಲಿಯೂ ಕೆಲಸ ಮಾಡುವ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ" ಎಂದು ಹೇಳಿದ್ದಾರೆ.

ಭಕ್ತಾದಿಗಳ ಸಂಖ್ಯೆ ಕುಸಿತ

ಭಕ್ತಾದಿಗಳ ಸಂಖ್ಯೆ ಕುಸಿತ

ಕೋವಿಡ್ ಭೀತಿ ಹಿನ್ನಲೆಯಲ್ಲಿ ಈ ಬಾರಿ ವೈಷ್ಣೋ ದೇವಿ ದೇವಾಲಯಕ್ಕೆ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಆಗಸ್ಟ್ 16ರಿಂದ ದೇವಾಲಯವನ್ನು ತೆರೆಯಲಾಗಿದೆ. ಪ್ರತಿದಿನ 5 ಸಾವಿರ ಭಕ್ತಾದಿಗಳು ಮಾತ್ರ ಭೇಟಿ ನೀಡಲು ಅವಕಾಶ ನೀಡಲಾಗಿದೆ.

English summary
Vaishno Devi temple all set to launch mobile application. Devotees of the Mata Vaishno Devi can have darshan and blessings while sitting at home. Mobile applications set to be launched on October 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X